HEALTH TIPS

ಅಮೆರಿಕದಲ್ಲಿ ಕುಸಿಯುತ್ತಿರುವ ಜನಪ್ರಿಯತೆ ಮರಳಿ ಪಡೆಯಲು ಇಸ್ರೇಲ್‌ನಿಂದ AI ಬಳಕೆ : ಕೃತಕ ಸಂದೇಶಗಳನ್ನು ಸೃಷ್ಟಿಸಿ ಇಸ್ರೇಲ್ ಪರ ಸಂದೇಶಗಳ ರವಾನೆ

ವಾಶಿಂಗ್ಟನ್ : ಅಮೆರಿಕದಲ್ಲಿ ದಿನದಿಂದ ದಿನಕ್ಕೆ ತನಗೆ ಕುಸಿಯುತ್ತಿರುವ ಬೆಂಬಲವನ್ನು ಮರಳಿ ಪಡೆಯುವ ಪ್ರಯತ್ನಾಗಿ ಇಸ್ರೇಲ್ ಬೃಹತ್ ಮಟ್ಟದಲ್ಲಿ ಕೃತಕ ಬುದ್ದಿಮತ್ತೆ ( ಎಐ) ಹಾಗೂ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಬೃಹತ್ ಅಭಿಯಾನವನ್ನು ನಡೆಸುತ್ತಿದೆಯೆಂದು 'ವಾಲ್‌ಸ್ಟ್ರೀಟ್ ಜರ್ನಲ್' ಪತ್ರಿಕೆ ಪ್ರಕಟಿಸಿದ ವರದಿಯೊಂದು ತಿಳಿಸಿದೆ. 


‌ಎಐ ಮೂಲಕ ಇಸ್ರೇಲ್ ಪರ ಸಂದೇಶಗಳನ್ನು ಸೃಷ್ಟಿಸಿ, ಅವುಗಳನ್ನು ಬಲಪಂಥೀಯ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಇನ್‌ಫ್ಲುಯೆನ್ಸರ್‌ಗಳ ಮೂಲಕ ಭಾರೀ ಸಂಖ್ಯೆಯ ಅಮೆರಿಕನ್ನರ ಮೊಬೈಲ್‌ಫೋನ್‌ಗಳಿಗೆ ಕಳುಹಿಸಲಾಗುತ್ತಿದೆ. ಇದರ ಜೊತೆಗೆ ಕ್ರೈಸ್ತ ಚರ್ಚ್‌ಗಳು, ವಿವಿ ಕ್ಯಾಂಪಸ್‌ಗಳು, ಸಾಮಾಜಿಕ ಮಾಧ್ಯಮಗಳು ಹಾಗೂ ಎಐ ಚಾಟ್‌ಬೊಟ್‌ಗನ್ನು ಬಳಸಿಕೊಳ್ಳುವ ಆನ್‌ಲೈನ್ ಮಾಹಿತಿ ಮೂಲಗಳಲ್ಲಿಯೂ ಈ ಅಭಿಯಾನವು ಸಕ್ರಿಯವಾಗಿದೆ.

ಸುಮಾರು 36 ಮಾರ್ಕೆಟಿಂಗ್ ಹಾಗೂ ಸಂವಹನ ತಜ್ಞರು ಇಸ್ರೇಲ್‌ಗಾಗಿ ಈ ಕೆಲಸ ಮಾಡುತ್ತಿದ್ದಾರೆ. ಗಾಝಾದಲ್ಲಿ ಫೆಲೆಸ್ತೀನಿಯರ ಹತ್ಯಾಕಾಂಡ ಹಾಗೂ ಇರಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಸಮರದ ಕಾರಣದಿಂದಾಗಿ ಇಸ್ರೇಲ್ ವಿರುದ್ಧ ಅಮೆರಿಕದಲ್ಲಿ ದಿನದಿಂದ ದಿನಕ್ಕೆ ವಿರೋಧ ಹೆಚುತ್ತಿರುವ ನಡುವೆಯೇ ಈ ಅಭಿಯಾನವು ನಡೆಯುತ್ತಿದೆ. 2025ರ ಮಾರ್ಚ್‌ನಲ್ಲಿ 'ಪ್ಯೂ ರಿಸರ್ಚ್ ಸೆಂಟರ್' ನಡೆಸಿದ ಸಮೀಕ್ಷೆಯೊಂದು, ಶೇ.60ರಷ್ಟು ಅಮೆರಿಕನ್ ವಯಸ್ಕರು ಇಸ್ರೇಲ್ ಬಗ್ಗೆ ಸದಭಿಪ್ರಾಯವನ್ನು ಹೊಂದಿಲ್ಲವೆಂಬುದನ್ನು ಬಹಿರಂಗಪಡಿಸಿದೆ. ಇದು 2022ರಲ್ಲಿ ಇದ್ದುದಕ್ಕಿಂತ ಶೇ.42ರಷ್ಟು ಅಧಿಕವೆಂದು ವರದಿ ಹೇಳಿದೆ.

ಈ ಅಭಿಯಾನವು ಈಗಾಗಲೇ ಲಕ್ಷಗಟ್ಟಲೆ ಎಐ ಸೃಷ್ಟಿಯ ಪಠ್ಯ ಸಂದೇಶಗಳನ್ನು ಅಮೆರಿಕನ್ನರ ಮೊಬೈಲ್ ಫೋನ್‌ಗಳಿಗೆ ಕಳುಹಿಸಿಕೊಡುತ್ತಿದೆ. ಈ ಸಂದೇಶಗಳು ನೈಜವೆಂಬಂತೆ ಬಿಂಬಿಸಲು ಸಂದೇಶ ರವಾನಿಸುವವರು ತಮ್ಮನ್ನು ಎಮ್ಮಾ, ಸಾರಾ ಹಾಗೂ ಜಾನ್ ಮತ್ತಿತರ ಸ್ಥಳೀಯ ಹೆಸರುಗಳಿಂದ ಪರಿಚಯಿಸಿಕೊಳ್ಳುತ್ತಾರೆ. ಅಲ್ಲದೆ ತಮ್ಮನ್ನು 'ಫ್ರೆಂಡ್ಸ್ ಆಫ್ ಪೀಸ್' ಸಂಘಟನೆಯೆಂದು ಬಣ್ಣಿಸಿಕೊಂಡಿವೆ. ಇಸ್ರೇಲ್, ಇರಾನ್ ಅಥವಾ ಯುಎಸ್-ಇಸ್ರೇಲ್ ಬಾಂಧವ್ಯಗಳ ಬಗ್ಗೆ ಮೊದಲು ಅಭಿಪ್ರಾಯಗಳನ್ನು ಕೇಳುವುದು ಹಾಗೂ ಆನಂತರ ಅವರನ್ನು ಇಸ್ರೇಲ್ ಪರ ವಾದಗಳಡೆಗೆ ಸೆಳೆಯುವುದು ಅವರ ಕಾರ್ಯವಿಧಾನವಾಗಿದೆ. ಆದರೆ 'ಫ್ರೆಂಡ್ಸ್ ಆಫ್ ಪೀಸ್' ಎಂಬ ಹೆಸರಿನ ಸಂಘಟನೆ ಅಸ್ತಿತ್ವದಲ್ಲಿರುವ ಬಗ್ಗೆ ಅಥವಾ ಆ ಹೆಸರಿನ ಸಂಸ್ಥೆಯು ನೋಂದಾವಣಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲವೆಂದು 'ವಾಲ್‌ಸ್ಟ್ರೀಟ್ ಜರ್ನಲ್' ವರದಿ ತಿಳಿಸಿದೆ. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries