HEALTH TIPS

AI ಬಳಸಿ ನಕಲಿ ಆಯಪ್ ಸೃಷ್ಟಿ: ಪಿಯುಸಿ ಮೊಟಕುಗೊಳಿಸಿದ್ದ ಹೈಟೆಕ್ ಖದೀಮ ಖೆಡ್ಡಾಗೆ

ಸೂರತ್: ಪಿಯುಸಿ ಮೊಟಕುಗೊಳಿಸಿದ್ದ ಆ ಯುವಕನ ತಲೆಯಲ್ಲಿ ಓಡುತ್ತಿದ್ದುದು ಬರೀ ಸೈಬರ್ ಅಪರಾಧದ ನಯಾವಂಚನೆ ಕಲ್ಪನೆಗಳು! 


ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಹಾಗೂ ಟೆಲಿಗ್ರಾಂ ಆಯಪ್‌ ಬಳಸಿ ನಕಲಿ ಬ್ಯಾಂಕಿಂಗ್ ಆಯಪ್‌ಗಳನ್ನು ಸೃಷ್ಟಿಸಿ, ದೇಶದಾದ್ಯಂತ ಸೈಬರ್ ಕಳ್ಳರಿಗೆ ಸರಬರಾಜು ಮಾಡುತ್ತಿದ್ದ 'ಹೈಟೆಕ್ ಸೈಬರ್ ಖದೀಮ' ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ!

ಗುಜರಾತ್‌ನ ಸೈಬರ್ ಕ್ರೈಮ್ ಪೊಲೀಸರು ಕಾರ್ಯಾಚರಣೆ ನಡೆಸಿ, ಉತ್ತರ ಪ್ರದೇಶದ ಕಾನ್ಪುರ ಮೂಲದ ರೋಹಿತ್ ವೀರೇಂದ್ರ ಸಿಂಗ್ ಶಾಕ್ಯ (18)ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇವಲ 17ನೇ ವಯಸ್ಸಿನಲ್ಲೇ ಮಾಲ್ವೇರ್‌ ಹಾಗೂ ಅಪಾಯಕಾರಿ ಎಪಿಕೆ (ಂPಏ) ಫೈಲ್‌ಗಳನ್ನು ರೂಪಿಸಲು ಶುರು ಮಾಡಿದ್ದ ರೋಹಿತ್, ಜಾರ್ಖಂಡ್‌ನ ಕುಖ್ಯಾತ ಜಮ್ತಾರಾ, ಹರಿಯಾಣ ಹಾಗೂ ರಾಜಸ್ಥಾನದ ಸೈಬರ್ ಗ್ಯಾಂಗ್‌ಗಳಿಗೆ ನಕಲಿ ಆಯಪ್‌ಗಳನ್ನು ಪೂರೈಸುತ್ತಿದ್ದ.

₹5 ಲಕ್ಷ ನಾಪತ್ತೆ! ಬಯಲಾದ ಕೃತ್ಯ...

2026ರ ಮೇ ತಿಂಗಳಲ್ಲಿ ಸೂರತ್‌ನ ಸಂತ್ರಸ್ತರೊಬ್ಬರ ವಾಟ್ಸ್‌ಆಯಪ್‌ಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ 'ಪಿಎನ್‌ಬಿ ಒನ್' ಆಯಪ್‌ ತರಹವೇ ಕಾಣುವ ನಕಲಿ ಎಪಿಕೆ ಫೈಲ್ ಬಂದಿತ್ತು. ಅದನ್ನು ನೈಜ ಆಯಪ್ ಎಂದು ನಂಬಿ ಡೌನ್‌ಲೋಡ್ ಮಾಡಿದ ಕೆಲವೇ ಕ್ಷಣಗಳಲ್ಲಿ ಅವರ ಮೊಬೈಲ್ ಹ್ಯಾಕ್ ಆಗಿತ್ತು! ನಂತರ ಪ್ರೈಮ್ ಕೋ-ಆಪರೇಟಿವ್ ಬ್ಯಾಂಕ್ ಖಾತೆಯಲ್ಲಿದ್ದ ಅವರ ₹5 ಲಕ್ಷ ಹಣ ಯೂನಿಯನ್ ಬ್ಯಾಂಕ್ ಆಫ್‌ ಇಂಡಿಯಾ ಖಾತೆಗೆ ವರ್ಗಾವಣೆಯಾಗಿತ್ತು.

ಈ ಕುರಿತು ಸೂರತ್ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ತನಿಖೆ ಚುರುಕುಗೊಳಿಸಿದ್ದ ಪೊಲೀಸರಿಗೆ ಈ ಹೈಟೆಕ್ ಖದೀಮನ ಸುಳಿವು ಸಿಕ್ಕಿತ್ತು. ಕಾನ್ಪುರದ ಹೋಟೆಲ್‌ವೊಂದರಲ್ಲಿದ್ದ ಆರೋಪಿಯನ್ನು ಪೊಲೀಸರು ಹಾಗೂ ಐಟಿ ತಜ್ಞರ ತಂಡ ದಾಳಿ ನಡೆಸಿ ಬಂಧಿಸಿದ್ದು, ಆತನ ಬಳಿಯಿದ್ದ ಲ್ಯಾಪ್‌ಟಾಪ್, ಮೊಬೈಲ್ ಫೋನ್ ಸೇರಿದಂತೆ ಹಲವು ಡಿಜಿಟಲ್ ಸಾಧನಗಳನ್ನು ಜಪ್ತಿ ಮಾಡಿದೆ.

ಮೊದಲಿಗೆ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡುವ ವೈರಸ್‌ಯುಕ್ತ ಆಯಪ್ (ಎಪಿಕೆ) ರೂಪಿಸುತ್ತಿದ್ದ. ನಂತರ ವಂಚಕರು ಅಡ್ಮಿನ್ ಆಯಪ್‌ ಮೂಲಕ ಸಂತ್ರಸ್ತರ ಮೊಬೈಲ್‌ಗೆ ಬರುವ ಒಟಿಪಿ, ಬ್ಯಾಂಕಿಂಗ್ ವಿವರಗಳು ಮತ್ತು ಇತರ ಗೌಪ್ಯ ಮಾಹಿತಿಗಳನ್ನು ರಿಯಲ್‌ ಟೈಮ್‌ನಲ್ಲಿ ವೀಕ್ಷಿಸುತ್ತಿದ್ದರು. ಬಳಿಕ ಹಣವನ್ನು ತಮ್ಮ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು.

ಸೈಬರ್‌ ಕಳ್ಳರು ಈ ದಂಧೆಯನ್ನು ಉದ್ಯಮ ರೀತಿಯಲ್ಲಿ ನಡೆಸುತ್ತಿದ್ದರು. ನಕಲಿ ತಂತ್ರಾಂಶದ ಮೊದಲ ಇನ್‌ಸ್ಟಾಲ್‌ಗೆ ₹15,000 ಹಾಗೂ ನಂತರದ ಸೇವೆಗೆ ಪ್ರತಿ ತಿಂಗಳು ₹15,000 ಚಂದಾದಾರಿಕೆ ಶುಲ್ಕವನ್ನು ಆರೋಪಿ ರೋಹಿತ್‌ ವಸೂಲಿ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಎಸ್‌ಬಿಐ, ಪಿಎನ್‌ಬಿ, ಆಕ್ಸಿಸ್ ಬ್ಯಾಂಕ್, ಯುಕೊ ಬ್ಯಾಂಕ್, ಬಿಗ್‌ಬಾಸ್ಕೆಟ್‌, ಅಮೆರಿಕನ್ ಎಕ್ಸ್‌ಪ್ರೆಸ್ ಹಾಗೂ ಆರ್‌ಟಿಒ ಚಲನ್‌ಗಳಂತಹ ಪ್ರಮುಖ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಆಯಪ್‌ಗಳನ್ನು ಸೃಷ್ಟಿಸಿಕೊಡುತ್ತಿದ್ದ. ಈ ಜಾಲದಲ್ಲಿದ್ದ ಇತರ ಸೈಬರ್ ಕಳ್ಳರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries