ಕಾಸರಗೋಡು: ಬಿರುಸಿನ ಮಳೆಗೆ ಚೆರ್ಕಳದಲ್ಲಿ ಗೋಡೆ ಕುಸಿದು ಬಿದ್ದು ಮೂರು ಕಾರುಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಚೆರ್ಕಳ ಇಂದಿರಾನಗರದ ಖಾಸಗಿ ಆಸ್ಪತ್ರೆಯೊಂದರ ರಸ್ತೆ ಬದಿಯ ಗೋಡೆ ಕುಸಿದು ದುರಂತ ಸಂಭವಿಸಿದೆ. ಈ ಸಂದರ್ಭ ಗೋಡೆ ಅಂಚಿಗೆ ನಿಲ್ಲಿಸಲಾಗಿದ್ದ ಕಾರುಗಳ ಮೇಲೆ ಏಕಾಏಕಿ ಗೋಡೆ ಕುಸಿದು ಬಿದ್ದಿದೆ. ಈ ಪ್ರದೇಶದ ಮನೆಯೊಂದರಲ್ಲಿ ಆಯೋಜಿಸಲಾಗಿದ್ದ ಮದುವೆ ಸತ್ಕಾರ ಕೂಟದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದವರು ಆಸ್ಪತ್ರೆಯ ಗೋಡೆ ಬಳಿ ತಮ್ಮ ಕಾರುಗಳನ್ನು ಪಾರ್ಕ್ ಮಾಡಿದ್ದರು. ಆ ವೇಳೆ ಸುರಿದ ಭಾರೀ ಮಳೆಗೆ ರಸ್ತೆ ಬದಿಯ ಗೋಡೆ ಕುಸಿದು ಬಿದ್ದಿದೆ. ಈ ಸಂದರ್ಭ ಆಸುಪಾಸು ಹಾಗೂ ಕಾರುಗಳಲ್ಲಿ ಯಾರೂ ಇಲ್ಲದಿದ್ದ ಹಿನ್ನೆಲೆಯಲ್ಲಿ ಜೀವಾಪಾಯ ತಪ್ಪಿದೆ. ವಿದ್ಯಾನಗರ ಠಾಣೆ ಪೆÇಲೀಸರು ಮತ್ತು ಕಾಸರಗೋಡು ಅಗ್ನಿಶಾಮಕದಳ ಘಟನೆ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ.

