ಕುಂಬಳೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಕೇರಳದ ಮೇಕಪ್ ಆರ್ಟಿಸ್ಟ್, ಮಂಗಳಮುಖಿ ಜಾನ್ ಮನಿ ಎಂಬಾತನ ವಿರುದ್ಧ ಕುಂಬಳೆ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬಿಜೆಪಿ ಮುಖಂಡರು ಹಾಗೂ ಸ್ವಯಂಸೇವಕರು ಈ ದೂರು ಸಲ್ಲಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಮತ್ತು ಅವರ ತಾಯಿಯನ್ನು ಜಾನ್ಮನಿ ಅತ್ಯಂತ ಕೀಳಾಗಿ ಹಾಗೂ ಅವಹೇಳನಕಾರಿಯಾಗಿ ಸಂದೇಶ ರವಾನಿಸಿದ್ದನು. ಈ ಬಗ್ಗೆ ಬಿಜೆಪಿ ಕುಂಬಳೆ ಮಂಡಲ ಕಾರ್ಯದರ್ಶಿ ಪ್ರದೀಪ್ ಕುಮಾರ್ ಅವರು ಕುಂಬ್ಳೆ ಪೋಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಬಾಲಗೋಕುಲ ಮಂಜೇಶ್ವರ ತಾಲೂಕು ಉಪಾಧ್ಯಕ್ಷ ಮಧುಸೂಧನ್ ಆಚಾರ್ಯ, ಮಾಜಿ ಪಂಚಾಯತ್ ಸದಸ್ಯರಾದ ಮೋಹನ ಕೆ ಬಂಬ್ರಾಣ, ಸ್ವಯಂಸೇವಕರಾದ ಶ್ರೇಯಸ್ ಉಜಾರು, ಪ್ರಸಾದ್, ಮಂಜುನಾಥ ರೈ ಉಪಸ್ಥಿತರಿದ್ದರು.

