ಉಪ್ಪಳ: ಆಪರೇಷನ್ ತುಫಾನ್ ಅಂಗವಾಗಿ ಮಂಜೇಶ್ವರ ಪೆÇೀಲೀಸರು ಜೋಡುಕಲ್ಲಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 112 ಗ್ರಾಂ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಕಯ್ಯಾರು ನಿವಾಸಿ ಅಬ್ದುಲ್ ಸಮದ್ (31)ಬಂಧಿತ. ಠಾಣೆ ಇನ್ಸ್‍ಪೆಕ್ಟರ್ ಪಿ.ಕೆ. ಬಿಜೇಶ್ ನೇತೃತ್ವದ ಪೊಲೀಸರ ತಂಡ ಸೋಂಕಾಲಿನಲ್ಲಿ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಲಾಗಿದೆ.
ಕಳೆದ ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ 112 ಗ್ರಾಂ ಎಂಡಿಎಂಎ ವಶಪಡಿಸಲಾಗಿತ್ತು. ಪೆÇೀಲೀಸರನ್ನು ಕಂಡು ಮಾದಕವಸ್ತುವನ್ನು ಆರೋಪಿಗಳು ಎಸೆದು ಪರಾರಿಯಾಗಲು ಯತ್ನಿಸಿದ ಸಂದರ್ಭ ಜೋಡುಕಲ್ಲು ನಿವಾಸಿ ಫಾರೂಕ್ ಮುಹಮ್ಮದ್ ಹಾಗೂ ಮಂಗಲ್ಪಾಡಿ ಪಚ್ಚಂಬಳ ದಿನಾ ನಗರ ನಿವಾಸಿ ಮೊಯ್ದೀನ್‍ಕುಂಞ ಎಂಬವರನ್ನು ಬಂಧಿಸಿದ್ದರು. ಇವರನ್ನು ತನಿಖೆಗೆ ಒಳಪಡಿಸಿದಾಗ ಅಬ್ದುಲ್ ಸಮದ್ ಬಗ್ಗೆ ಮಾಹಿತಿ ಲಭಿಸಿತ್ತು.

