ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಮೊಗ್ರಾಲಿನಲ್ಲಿ ಯುವಕನನ್ನು ತಡೆದು ನಿಲ್ಲಿಸಿ ದೇಹಕ್ಕೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಲಾಗಿದೆ. ಕರ್ನಾಟಕದ ಹುಬ್ಬಳ್ಳಿ ನಿವಾಸಿ, ಹಲವು ವರ್ಷಗಳಿಂದ ಮೊಗ್ರಾಲ್ ಕೊಪ್ಪಳದ ಬಾಡಿಗೆ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿರುವ ಅಬ್ದುಲ್ ಗಫೂರ್ (45) ಗಾಯಾಳು. ಇವರನ್ನು ಕುಂಬಳೆ ಜಿಲ್ಲಾ ಸಹಕಾರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ ನಾಲ್ವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಶುಕ್ರವಾರ ನಸುಕಿಗೆ ಮೊಗ್ರಾಲ್ ರೈಲ್ವೇ ಕಳಸೇತುವೆಯಲ್ಲಿ ಘಟನೆ. ಸಾರಣೆ ಮೇಸ್ತ್ರಿಯಾಗಿರುವ ಅಬ್ದುಲ್ ಗಫೂರ್ ಕ್ವಾರ್ಟರ್ಸ್ನಿಂದ ಇಂದು ಮುಂಜಾನೆ ಹೊರಟು ರಾಷ್ಟ್ರೀಯ ಹೆದ್ದಾರಿಗೆ ನಡೆದು ಹೋಗುತ್ತಿದ್ದ ಸಂದರ್ಭ ಏಕಾಏಕಿ
ಗಂಭೀರ ಸುಟ್ಟ ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಇಂದು ಮುಂಜಾನೆ 5.30ರ ವೇಳೆ ಮೊಗ್ರಾಲ್ ರೈಲ್ವೇ ಕಳಸೇತುವೆಯಲ್ಲಿ ಈ ಘಟನೆ ನಡೆದಿದೆ. ಸಾರಣೆ ಮೆಸ್ತ್ರಿಯಾದ ಅಬ್ದುಲ್ ಗಫೂರ್ ಎಂದಿನಂತೆ ಕ್ವಾರ್ಟರ್ಸ್ನಿಂದ ಇಂದು ಮುಂಜಾನೆ ಹೊರಟು ರಾಷ್ಟ್ರೀಯ ಹೆದ್ದಾರಿಗೆ ನಡೆದು ಹೋಗುತ್ತಿರುವ ಮಧ್ಯೆ ಕಳಸೇತುವೆಗೆ ತಲುಪಿದಾಗ ಸಮೀಪದ ಪೆÇದೆಗಳಲ್ಲಿ ಅಡಗಿ ನಿಂತಿದ್ದ ನಾಲ್ಕು ಮಂದಿಯ ತಂಡ ಏಕಾಏಕಿ ತಡೆದುನಿಲ್ಲಿಸಿ, ಒಬ್ಬಾತ ಅಬ್ದುಲ್ ಗಫೂರ್ ದೇಹಕ್ಕೆ ಸೀಮೆಎಣ್ಣೆ ಸುರಿದಿದ್ದು, ಇನ್ನೊಬ್ಬ ಬೆಂಕಿ ಹಚ್ಚಿ, ಅಲ್ಲಿಂದ ಪರಾರಿಯಾಗಿದ್ದಾರೆ. ಅಬ್ದುಲ್ ಗಫೂರ್ ಬೊಬ್ಬಿಡುತ್ತಿದ್ದಂತೆ ಆಸುಪಾಸಿನವರು ಆಗಮಿಸಿ, ಬೆಂಕಿನಂದಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಶರವಣನ್, ಲಿಂಗಂ, ಮೇರಿ ಸೇರಿದಂತೆ ನಾಲ್ವರ ತಂಡ ಕೃತ್ಯವೆಸಗಿರುವುದಾಗಿ ಅಬ್ದುಲ್ ಗಫೂರ್ ದೂರಿದ್ದಾರೆ. ಸೀತಾಂಗೋಳಿಯ ಕಟ್ಟಡ ಸಾರಣೆ ಕೆಲಸದಲ್ಲಿ ಅಬ್ದುಲ್ಗಫೂರ್ ಕಾರ್ಮಿಕರಿಗೆ ಹಣ ನೀಡಲು ಬಾಕಿಯಿರಿಸಿಕೊಂಡಿದ್ದು, ಹಣ ನೀಡದೆ ಸತಾಯಿಸುತ್ತಿರುವುದಕ್ಕೆ ಪ್ರತೀಕರವಾಗಿ ಕೃತ್ಯವೆಸಗಿರಬೇಕೆಂದು ಸಂಶಯಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

