ನವದೆಹಲಿ: 'ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆ ಯಲ್ಲಿ ಕರ್ನಾಟಕದ ಪಟ್ಟಣ ಪಂಚಾಯಿತಿಗಳ ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸುವ ಹಕ್ಕು ಹೊಂದಿಲ್ಲ' ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಸಿಜೆಐ ಸೂರ್ಯಕಾಂತ್, ನ್ಯಾಯ ಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಹಾಗೂ ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠವು, 'ಅಂತಹ ನಾಮನಿರ್ದೇಶಿತ ಸದಸ್ಯರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವುದು ಸಂವಿಧಾನಬಾಹಿರ' ಎಂದು ಅಭಿಪ್ರಾಯಪಟ್ಟಿದೆ.
'ನಾಮನಿರ್ದೇಶಿತರಿಗೆ ಮತ ಚಲಾಯಿಸಲು ಅವಕಾಶ ನೀಡುವುದರಿಂದ ಪ್ರಜಾಪ್ರಭುತ್ವದ ಸ್ವರೂಪ ದುರ್ಬಲಗೊಳ್ಳು ತ್ತದೆ ಹಾಗೂ ಚುನಾಯಿತ ಸ್ಥಳೀಯ ಆಡಳಿತ ಬಲಪಡಿಸುವ ಸಾಂವಿಧಾನಿಕ ಉದ್ದೇಶವನ್ನು ಸೋಲಿಸುತ್ತದೆ' ಎಂದು ನ್ಯಾಯಪೀಠ ಒತ್ತಿ ಹೇಳಿದೆ.

