ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯ ವಿಷ್ಣುಮೂರ್ತಿ ನಗರದಲ್ಲಿ ನೂರಾರು ವರ್ಷಗಳಷ್ಟು ಪ್ರಚೀನವೆನ್ನಲಾದ ದೇವಾಲಯದ ಕುರುಹು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಕುತೂಹಲ ಕೆರಳಿಸಿದೆ. ವಿಷ್ಣುಮೂರ್ತಿ ನಗರದ ವಿಶಾಲ ಬಯಲಲ್ಲಿ ಎರಡು ಮರಗಳ ಎಡೆಯಲ್ಲಿ ದೇವಾಲಯದ್ದೆನ್ನಲಾದ ಪಾಣಿಪೀಠದ ಭಾಗಗಳು ಮತ್ತು ಬಾವಿಯ ಕುರುಹುಗಳು ಕಂಡುಬಂದಿದೆ. ಈ ಪರಿಸರದಲ್ಲಿ ವಿಷ್ಣುಮೂರ್ತಿ ದೈವದ ಆರಾಧನೆ ನಡೆದುಬರುತ್ತಿದ್ದು, ಅದೇ ಪರಿಸರದಲ್ಲಿ ದೇವಾಲಯದ ಕುರುಹುಗಳು ಪತ್ತೆಯಾಗಿರುವುದು ಕುತೂಹಲ ಮತ್ತು ಭಕ್ತಿಯ ಭಾವ ಸ್ಪುರಣಕ್ಕೆ ಕಾರಣವಾಗಿದೆ.
ಇದೀಗ ದೇವಾಲಯದ ಪುನರುತ್ಥಾನಕ್ಕೆ ಸಂಬಂಧಿಸಿ ದೈವಜ್ಞರ ಮೂಲಕ ಪ್ರಶ್ನಾಚಿಂತನೆ ಕೈಗೆತ್ತಿಕೊಳ್ಳಲಾಗಿದೆ. ದೈವಜ್ಞರಾದ ಮಹಾಲಿಂಗೇಶ್ವರ ಶರ್ಮ ಕೊಳಚ್ಚಪ್ಪೆ ಮಾರ್ಗದರ್ಶನದಲ್ಲಿ ಉಣ್ಣಿಕೃಷ್ಣನ್ ನಂಬೀಶ ಸಹಕಾರದಲ್ಲಿ ಚಿಂತನೆ ಆರಂಭಗೊಂಡಿದೆ. ಬ್ರಹ್ಮಶ್ರೀ ಗಣೇಶ ತಂತ್ರಿ ದೇಲಂಪಾಡಿ ಉಪಸ್ಥಿತರಿದ್ದಾರೆ. ಕ್ಷೇತ್ರ ಪುನರುತ್ಥಾನಕ್ಕೆ ತಾತ್ಕಾಲಿಕ ಸಮಿತಿಗೆ ರೂಪು ನೀಡಲಾಗಿದ್ದು, ಶ್ರೀಕೃಷ್ಣ ಭಟ್ ಪುದುಕೋಳಿ, ರಾಮ ಕೆ.ಕಾರ್ಮಾರು, ಮಹೇಶ್ ವಳಕ್ಕುಂಜ, ಮೋಹನ ಮಾನ್ಯ, ವೆಂಕಟ್ರಮಣ ಸಿ.ಎಚ್., ಮಂಜುನಾಥ ಡಿ.ಮಾನ್ಯ, ರವಿಶಂಕರ ಮಾನ್ಯ, ಸುಂದರ ಶೆಟ್ಟಿ ಕೊಲ್ಲಂಗಾನ, ಸಂತೋಷ್ ಕುಮಾರ್ ಎಸ್.ಮಾನ್ಯ, ವೇಣುಗೋಪಾಲ ತತ್ವಮಸಿ, ಶ್ರೀನಿವಾಸ ಕೊಡಗಿ ಮಾನ್ಯ, ನವೀನಚಂದ್ರ ಎಂ.ಎಸ್.ಮಾನ್ಯ ಮುಂತಾದವರು ನೇತೃತ್ವ ವಹಿಸಿದ್ದಾರೆ.

.jpg)
.jpg)
.jpg)
