HEALTH TIPS

ಮಂಜೇಶ್ವರದಲ್ಲಿ ರೆವನ್ಯೂ ಟವರ್, ಜಿಲ್ಲೆಯ ಗ್ರೂಪ್ ವಿಲ್ಲೇಜ್ ಕಚೇರಿಗಳ ಸಮಸ್ಯೆಗಳಿಗೆ ಪರಿಹಾರ ಕಾಣುವುದಾಗಿ ಸಚಿವ ಎ.ಪಿ. ಅನಿಲ್ ಕುಮಾರ್

ಕಾಸರಗೋಡು: ಮಂಜೇಶ್ವರದಲ್ಲಿ ಕಂದಾಯ ಟವರ್ ನಿರ್ಮಿಸುವುದಾಗಿಯೂ, ಜಿಲ್ಲೆಯ ಗ್ರೂಪ್ ವಿಲ್ಲೇಜ್ ಕಚೇರಿಗಳ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದಾಗಿ  ಇಲಾಖೆ ಸಚಿವ ಎ.ಪಿ. ಅನಿಲ್ ಕುಮಾರ್ ತಿಳಿಸಿದ್ದಾರೆ. 


ಕಲೆಕ್ಟ್ರೇಟ್‍ನ ಮಿನಿ ಕಾನ್ಫರೇನ್ಸ್ ಹಾಲ್‍ನಲ್ಲಿ ನಡೆದ ರಾಜ್ಯ ಕಂದಾಯ ಇಲಾಖೆಯ ಮೊದಲ ಜಿಲ್ಲಾಮಟ್ಟದ ಅವಲೋಕನ ಸಭೆಯಲ್ಲಿ ಸಚಿವರು ಮಾತನಾಡುತ್ತಿದ್ದರು. 

ಕಂದಾಯ ಇಲಾಖೆಯ ಮುಖವನ್ನಾಗಿ ಕಾಣುವ ವಿಲ್ಲೇಜ್ ಕಚೇರಿಗಳನ್ನು ಜನ ಸೌಹಾರ್ದವನ್ನಾಗಿ ಮಾಡಲಾಗುವುದು. ಮಾದರಿ ಪೆÇಲೀಸ್ ಠಾಣೆಯಂತೆಯೇ ಪ್ರಾಮುಖ್ಯವಿರುವುದಾಗಿದೆ ಗ್ರಾಮ ಕಚೇರಿಗಳು ಕೂಡಾ ಎಂದು ಅವರು ನುಡಿದರು. ರಾಜ್ಯದಲ್ಲಿ ಭೂಮಿ ಸ್ತರ ವಿಂಗಡಣಗೆ ಸಂಬಂಧಿಸಿ  ಎರಡೂವರೆ ಲಕ್ಷ ಅರ್ಜಿಗಳು ಕಡತದಲ್ಲಿದೆ. ಇದರಲ್ಲಿ 25 ಸಾವಿರ ಅರ್ಜಿಗಳನ್ನು ನೂರು ದಿನದ ಕ್ರಿಯಾ ಯೋಜನೆಯಲ್ಲಿ ಸೇರಿಸಿ ತೀರ್ಪು ಕಲ್ಪಿಸಲಾಗುವುದು. ರಾಜ್ಯದಲ್ಲಿ ನೂರು ದಿನದೊಳಗೆ 5 ಸಾವಿರ ಹಕ್ಕು ಪತ್ರಗಳನ್ನು ನೀಡಲಾಗುವುದೆಂದು ಸಚಿವರು ತಿಳಿಸಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮೀನು ಕಾರ್ಮಿಕ ವಿಭಾಗಗಳಿಗೆ ಭೂಮಿ ಹಕ್ಕು ಪತ್ರ ನೀಡುವುದಕ್ಕೆ ಈ ವರ್ಷ ಪ್ರಥಮ ಪರಿಗಣನೆ ನೀಡಲಾಗುವುದು.

ಎಲ್ಲಾ ಖಾಲಿ ಹುದ್ದೆಗಳ ಬಗ್ಗೆಯೂ ಪಿಎಸ್‍ಸಿಗೆ ವರದಿ ನೀಡಲು ಸರಕಾರ ನಿರ್ದೇಶ ನೀಡಿರುವುದಾಗಿಯೂ ಸಚಿವರು ಸ್ಪಷ್ಟಪಡಿಸಿದರು. ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ವರದಿ ಮಂಡಿಸಿದರು. ಕಂದಾಯ ಕಾರ್ಯದರ್ಶಿ ಕೆ. ಜೀವನ್‍ಬಾಬು ಅಧ್ಯಕ್ಷತೆ ವಹಿಸಿದರು. ಲ್ಯಾಂಡ್ ರೆವನ್ಯೂ ಕಮಿಶನರ್ ಎಚ್. ದಿನೇಶನ್, ಸರ್ವೇ ಡೈರಕ್ಟರ್ ಜೆ. ಅರುಣ್ ಮಾತನಾಡಿದರು. ಸಚಿವರ ಖಾಸಗಿ ಕಾರ್ಯದರ್ಶಿ ಡಾ. ಪಿ.ಕೆ. ಜಯಶ್ರೀ, ಎಡಿಎಂ ಪಿ. ಉದಯ ಕುಮಾರ್, ಡೆಪ್ಯೂಟಿ ಕಲೆಕ್ಟರ್, ತಹಶೀಲ್ದಾರ್‍ಗಳು, ಡೆಪ್ಯೂಟರಿ ತಹಶೀಲ್ದಾರ್‍ಗಳು, ಜ್ಯೂನಿಯರ್ ಸುಪರಿಂಟೆಂಡೆಂಟರ್‍ಗಳು, ಸರ್ವೇ ಅಧಿಕಾರಿಗಳು ಭಾಗವಹಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries