HEALTH TIPS

ವಿವಿಧೆಡೆ ಮುಂದುವರಿಯುತ್ತಿರುವ ಕಡಲ್ಕೊರೆತ: ಮಂಗಲ್ಪಾಡಿ ಪಂ. ವ್ಯಾಪ್ತಿಯ ತೀರ ನಿವಾಸಿಗಳು ಆತಂಕದಲ್ಲಿ

ಉಪ್ಪಳ: ಮಂಗಲ್ಪಾಡಿ ಪಂಚಾಯತಿ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕಡಲ್ಕೊರೆತ ವ್ಯಾಪಕಗೊಂಡಿದ್ದು ಸ್ಥಳೀಯರು ಆತಂಕದಲ್ಲಿದ್ದಾರೆ. ಮುಸೋಡಿ, ಮಣಿಮುಂಡ, ಹನುಮಾನ್ ನಗರ, ಐಲ ಶಿವಾಜಿನಗರ, ಪೆರಿಂಗಡಿ, ಕುದುಪುಳು ಸಹಿತ ವಿವಿಧ ಪ್ರದೇಶಗಳಲ್ಲಿ ಕಡಲ್ಕೊರೆತ ವ್ಯಾಪಕಗೊಂಡಿದ್ದು ಹಲವಾರು ಮನೆಗಳು ಅಪಾಯದಂಚಿನಲ್ಲಿದೆ. 


ಐಲ ಶಿವಾಜಿನಗರದಲ್ಲಿ ಕಳೆದ ವರ್ಷ ಮೀನುಗಾರರು ಬಲೆಗಳನ್ನು ದುರಸ್ತಿಗೊಳಿಸುವ ಶೆಡ್ಡ್ ಕಡಲ್ಕೊರೆತಕ್ಕೆ ಸಿಲುಕಿ ಕುಸಿದು ಬಿದ್ದಿತ್ತು. ಇದರಿಂದ ಈ ಪ್ರದೇಶದ ಮೀನು ಕಾರ್ಮಿಕರು ಸಮಸ್ಯೆಗೀಡಾಗಿದ್ದರು. ಈ ವರ್ಷವೂ ಕಡಲ್ಕೊರೆತ ಮುಂದುವರಿಯುತ್ತಿದ್ದು, ರುದ್ರಭೂಮಿಯ ಶೆಡ್ಡ್, ರಸ್ತೆ ಸಮುದ್ರ ಪಾಲಗುವ ಭೀತಿ ಇದೆ. 

ಈ ಪರಿಸರದಲ್ಲಿರುವ ವಿವಿಧೆಡೆ ತಡೆಗೋಡೆಗಳು ಇಲ್ಲದಿರುವುದರಿಂದ ಅಲೆಗಳ ಅಬ್ಬರಕ್ಕೆ ಭೂಮಿ ಸಮುದ್ರಪಾಲಾಗುತ್ತಿದೆ. ಇದೇ ಪರಿಸರದಲ್ಲಿ ವಾಸಿಸುವ ಮೀನು ಕಾರ್ಮಿಕರ ಕುಟುಂಬ ಆತಂಕದಲ್ಲೇ ದಿನ ಕಳೆಯುತ್ತಿದೆ. ವ್ಯವಸ್ಥಿತ ತಡೆಗೋಡೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲು ಹಲವು ಭಾರಿ ಊರವರು ಮನವಿ ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳಲಿಲ್ಲವೆಂದು ಆರೋಪಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries