ವಾಶಿಂಗ್ಟನ್: ಅಮೆರಿಕವು ಇರಾನ್ ಜೊತೆ ತೀವ್ರ ರಾಜತಾಂತ್ರಿಕ ಮಾತುಕತೆಯಲ್ಲಿ ನಿರತವಾಗಿದೆ. ಆದರೆ ಒಂದು ವೇಳೆ ರಾಜತಾಂತ್ರಿಕತೆ ವಿಫಲವಾದರೆ, ಮತ್ತೆ ಬಹಳ ಪ್ರಬಲವಾದ ಮಿಲಿಟರಿ ಕಾರ್ಯಾಚರಣೆ ಆರಂಭಿಸಲು ಅಮೆರಿಕ ಸಿದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿಜೆಪಿ ವಕ್ತಾರ ಸೌರವ್ ದಾಸ್, ಸಿಜೆಪಿ ಹೋರಾಟಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ಆದೇಶದ ನಾಲ್ಕನೇ ನಿರ್ದೇಶನಲ್ಲಿ, ಈಗಾಗಲೇ ಇರುವ ಎಫ್ಐಆರ್ ಹಾಗೂ ತನಿಖೆ ಮುಂದುವರಿಸಲು ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದು ಕೇಂದ್ರ ಸರ್ಕಾರದೊಂದಿಗೆ ನಡೆಸಿದ ಮಾತುಕತೆ ವೇಳೆ ನೀಡಿದ್ದ ಭರವಸೆಗಳಿಗೆ ವಿರುದ್ಧವಾಗಿದೆ' ಎಂದು ಹೇಳಿದ್ದಾರೆ.
'ಪ್ರತಿಭಟನಕಾರರ ವಿರುದ್ಧದ ಪ್ರಕರಣ ಹಿಂಪಡೆಯುವುದಾಗಿ ಸರ್ಕಾರ ಭರವಸೆ ನೀಡಿದ ಮೇಲೆಯೇ ನಾವು ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದವು' ಎಂದು ಅವರು ತಿಳಿಸಿದ್ದಾರೆ.
'ಪ್ರತಿಭಟನಾಕಾರರ ವಿರುದ್ಧ ಪ್ರಕರಣಗಳನ್ನು ಮುಂದುವರಿಸಲು ಕೇಂದ್ರ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳು ನ್ಯಾಯಾಲಯದ ಆದೇಶವನ್ನು 'ಆಯುಧ'ವಾಗಿ ಬಳಸಿಕೊಳ್ಳಬಹುದು' ಎಂದು ಆತಂಕ ಹೊರಹಾಕಿದ್ದಾರೆ.
ಏನಾದರೂ ಒಳ್ಳೆಯದು ನಡೆಯುವ ಉತ್ತಮ ಸಾಧ್ಯತೆಯಿದೆ ಎಂದು ನಾನು ಭಾವಿಸುತ್ತೇನೆ. ಒಂದು ವೇಳೆ ಅದು ಆಗದಿದ್ದರೆ, ನಾವು ಎರಡು ದಿನಗಳ ಹಿಂದೆ ಏನು ಮಾಡುತ್ತಿದ್ದೇವೋ ಅದಕ್ಕೇ ಮತ್ತೆ ಮರಳುತ್ತೇವೆ. ಇರಾನ್ ವಿರುದ್ಧ ಅಮೆರಿಕ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತಿದೆ ಮತ್ತು ಇರಾನ್ಗೆ ಎಂದಿಗೂ ಅಣ್ವಸ್ತ್ರ ಹೊಂದಲು ಬಿಡುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕ ನೌಕಾ ದಿಗ್ಬಂಧನ ಹೇರಲು ಯತ್ನಿಸಿದರೆ ಅದನ್ನು ಪರಿಸ್ಥಿತಿ ಉಲ್ಬಣಗೊಳಿಸುವ ಯತ್ನವೆಂದು ಪರಿಗಣಿಸಲಾಗುವುದು ಎಂದು ಇರಾನ್ ಎಚ್ಚರಿಸಿದ್ದು ಅತ್ಯಂತ ಆಯಕಟ್ಟಿನ ಹಾರ್ಮುಝ್ ಜಲಸಂಧಿಯ ಮೇಲೆ ತನ್ನದೇ ಸಂಪೂರ್ಣ ನಿಯಂತ್ರಣವಿದೆ ಎಂದು ಪ್ರತಿಪಾದಿಸಿದೆ. ಈ ಮಧ್ಯೆ, ಸೌಕರ್ಯದ ಶುಲ್ಕಗಳೊಂದಿಗೆ ಹಾರ್ಮುಝ್ ಜಲಸಂಧಿಯನ್ನು ಜಂಟಿಯಾಗಿ ನಿರ್ವಹಿಸಲು ಒಮಾನ್ ದೇಶವು ಇರಾನ್ಗೆ ಪ್ರಾದೇಶಿಕ ವ್ಯವಸ್ಥೆಯ ಪ್ರಸ್ತಾವನೆಯೊಂದನ್ನು ಸಲ್ಲಿಸಿದೆ ಎಂದು ಗಲ್ಫ್ ಮೂಲವನ್ನು ಉಲ್ಲೇಖಿಸಿ `ರಾಯ್ಟರ್ಸ್' ಮಂಗಳವಾರ ವರದಿ ಮಾಡಿದೆ.
ಪ್ರಾದೇಶಿಕ ಬೆಂಬಲ ಹೊಂದಿರುವ ಈ ಪ್ರಸ್ತಾವನೆಯಡಿ, ಹಾರ್ಮುಝ್ ಜಲಮಾರ್ಗದ ಮೇಲೆ ಇರಾನ್ ಒಂದಕ್ಕೇ ಸಂಪೂರ್ಣ ನಿಯಂತ್ರಣವಿರುವುದಿಲ್ಲ ಎಂದು ವರದಿ ತಿಳಿಸಿದೆ. ಈ ಪ್ರಸ್ತಾವನೆಯು `ಮಲಕ್ಕಾ ಜಲಸಂಧಿ'ಯ ಮಾದರಿಯನ್ನು ಆಧರಿಸಿದೆ. ಅಲ್ಲಿ ಜಲಮಾರ್ಗವನ್ನು ಬಳಸುವವರು ನೌಕಾಯಾನ ಭದ್ರತೆ, ಪರಿಸರ ರಕ್ಷಣೆ ಮತ್ತು ರಕ್ಷಣಾ ಕಾರ್ಯಾಚರಣೆಗಳ ನಿಧಿಗಾಗಿ ಸ್ವಯಂಪ್ರೇರಿತವಾಗಿ ಕೊಡುಗೆ ನೀಡುತ್ತಾರೆ.

