HEALTH TIPS

ಮೊಲ್ಡೊವಾಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

 ಚಿಸಿನೋ: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಮೊಲ್ಡೊವಾಕ್ಕೆ ಐತಿಹಾಸಿಕ ಭೇಟಿ ನೀಡಿದರು.

ಭಾರತದ ರಾಷ್ಟ್ರಪತಿಯೊಬ್ಬರು ಈ ದೇಶಕ್ಕೆ ಭೇಟಿ ನೀಡಿರುವುದು ಇದೇ ಮೊದಲು. 


'ಮುರ್ಮು ಅವರನ್ನು ಮೊಲ್ಡೊವಾ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಮಿಹೈ ಪೋಪ್ಸೊಯಿ ಅವರು ಸ್ವಾಗತಿಸಿದರು' ಎಂದು ರಾಷ್ಟ್ರ‍ಪತಿ ಭವನದ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಲಾಗಿದೆ.

ಮುರ್ಮು ಅವರು ಮೊಲ್ಡೊವಾ ರಾಷ್ಟ್ರಪ‍ತಿ ಮೈತಾ ಸಂದು ಅವರ ಜೊತೆ ಮಾತುಕತೆ ನಡೆಸಲಿದ್ದಾರೆ. ಅಲ್ಲಿನ ಪ್ರಧಾನಿ ಇಗೋರ್ ಗ್ರುಸು ಅವರನ್ನು ಸಹ ಭೇಟಿಯಾಗಲಿದ್ದಾರೆ.

ವ್ಯಾಪಾರ, ತಂತ್ರಜ್ಞಾನ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಂಬಂಧವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಸಂದರ್ಭದಲ್ಲಿ ಪ್ರಮುಖವಾಗಿ ಚರ್ಚೆಯಾಗಲಿವೆ.

ಮೊಲ್ಡೊವಾ-ಭಾರತ ಸಂಸದೀಯ ಸಮಿತಿಯ ಸದಸ್ಯರ ಜೊತೆ ಮುರ್ಮು ಅವರು ಚರ್ಚೆ ನಡೆಸಲಿದ್ದಾರೆ ಮತ್ತು ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ.

ಮುರ್ಮು ಅವರು ಮಂಗಳವಾರ ಮತ್ತು ಬುಧವಾರ ಉತ್ತರ ಮೆಸಿಡೋನಿಯಾಕ್ಕೆ ಭೇಟಿ ನೀಡಲಿದ್ದಾರೆ. ಗುರುವಾರ ಮತ್ತು ಶುಕ್ರವಾರ ರೊಮೇನಿಯಾಕ್ಕೆ ಭೇಟಿ ನೀಡಿದ ಬಳಿಕ ತಮ್ಮ ತ್ರಿರಾಷ್ಟ್ರ ಪ್ರವಾಸವನ್ನು ಮುಕ್ತಾಯಗೊಳಿಸಲಿದ್ದಾರೆ.

ಗ್ರಾಹಕ ವ್ಯವಹಾರ ಮತ್ತು ಆಹಾರ ಖಾತೆ ರಾಜ್ಯ ಸಚಿವೆ ಜಯಂತಿಬಾಯಿ ಬಂಭಾನಿಯಾ, ರಾಜ್ಯಸಭಾ ಸದಸ್ಯ ದಿನೇಶ್‌ ಶರ್ಮಾ ಮತ್ತು ಲೋಕಸಭಾ ಸದಸ್ಯ ವಿಜಯ್‌ ಬಘೇಲ್ ಅವರ ನಿಯೋಗವು ರಾಷ್ಟ್ರಪತಿ ಅವರ ಜೊತೆಗೆ ಪ್ರವಾಸ ಕೈಗೊಂಡಿದೆ.

ಮಾಲ್ಡೊವಾದಲ್ಲಿ ಸುಮಾರು ಎರಡು ಸಾವಿರ ಭಾರತೀಯರಿದ್ದಾರೆ. ಇವರಲ್ಲಿ 1,800 ವೈದ್ಯಕೀಯ ವಿದ್ಯಾರ್ಥಿಗಳಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries