HEALTH TIPS

ನಿತಿನ್ ರಾಜ್ ಸಾವು: ತನಿಖಾಧಿಕಾರಿಗೆ ಖುದ್ದು ಹಾಜರಾಗಲು ಹೈಕೋರ್ಟ್ ಆದೇಶ-ಸರ್ಕಾರ, ಪೋಲೀಸರಿಗೆ ಹಿಗ್ಗಾಮುಗ್ಗ ಝಾಡಿಸಿ ಚಳಿ ಬಿಡಿಸಿದ ನ್ಯಾಯಾಧೀಶರು

ತಿರುವನಂತಪುರಂ: ಕಣ್ಣೂರಿನ ಅಂಚರಕಂಡಿ ದಂತ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ನಿತಿನ್ ರಾಜ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಪ್ರಮುಖ ಆರೋಪಿ ಡಾ. ಎಂ.ಕೆ. ರಾಮ್ ಅವರನ್ನು ಬಂಧಿಸಲು ಪೋಲೀಸರು ವಿಫಲರಾದ ಪ್ರಕರಣದಲ್ಲಿ ತನಿಖಾಧಿಕಾರಿಗೆ ಖುದ್ದು ಹಾಜರಾಗಲು ಹೈಕೋರ್ಟ್ ಆದೇಶಿಸಿದೆ. 


ಅವರು ಇಂದು ಹೈಕೋರ್ಟ್‍ನಲ್ಲಿ ಖುದ್ದು ಹಾಜರಾಗಲು ನಿರ್ದೇಶಿಸಲಾಗಿದೆ. 

ಮೇಲ್ವಿಚಾರಣೆಯ ಉಸ್ತುವಾರಿ ಹೊಂದಿರುವ ಎಸ್‍ಪಿ ಕೂಡ ಹಾಜರಾಗಬೇಕು. ಎಸ್‍ಪಿ ಮತ್ತು ಡಿವೈಎಸ್‍ಪಿ ನೇರ ಉತ್ತರ ನೀಡಬೇಕು.

ನ್ಯಾಯಾಲಯದಲ್ಲಿ ನೀಡಲಾದ ದಾಖಲೆಗಳನ್ನು ಪೋಲೀಸರಿಗೆ ಹಾಜರುಪಡಿಸಲು ಕೂಡಾ ಸೂಚಿಸಲಾಗಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಕೂಡ ಹೈಕೋರ್ಟ್‍ಗೆ ವರದಿ ಸಲ್ಲಿಸಬೇಕು.

ಬಂಧನಕ್ಕೆ ಕಾನೂನುಬದ್ಧ ಕಾರ್ಯವಿಧಾನವನ್ನು ಅನುಸರಿಸಲಾಗಿದೆಯೇ ಎಂಬುದರ ಕುರಿತು ಅಫಿಡವಿಟ್ ಸಲ್ಲಿಸುವಂತೆಯೂ ಸೂಚಿಸಲಾಗಿದೆ. ನ್ಯಾಯಮೂರ್ತಿ ಬದರುದ್ದೀನ್ ಅವರು ಈ ಆದೇಶಗಳನ್ನು ನೀಡಿ ಸರ್ಕಾರ ಮತ್ತು ಪೋಲೀಸರಿಗೆ ಬಿಸಿ ಮುಟ್ಟಿಸಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries