HEALTH TIPS

ಔಷಧಿ - ಆಹಾರಕ್ಕೆ ಮಾತ್ರವಲ್ಲ ಲ್ಯಾಪ್ ಟಾಪ್ ಗೂ ಇರುತ್ತೆ ಎಕ್ಸ್ಪೈರಿ ಡೇಟ್, ಯಾವಾಗ ಬದಲಿಸ್ಬೇಕು ಗೊತ್ತಾ?

ನಾವು ಬಳಸುವ ಯಾವ ವಸ್ತುವೂ ಶಾಶ್ವತ ಅಲ. ಲ್ಯಾಪ್ ಟಾಪ್ ಕೂಡ ಎಕ್ಸ್ಪೈರಿ ಡೇಟ್ ಹೊಂದಿದೆ. ಸೂಕ್ತ ಸಮಯಕ್ಕೆ ಅದನ್ನು ಬದಲಿಸೋದು ಅನಿವಾರ್ಯ.ಯಾವಾಗ ಬದಲಿಸಬೇಕು ಗೊತ್ತಾ?

ಡಿಜಿಟಲ್ ಜಗತ್ತಿನಲ್ಲಿ ಪ್ರತಿಯೊಬ್ಬರೂ ಲ್ಯಾಪ್ ಟಾಪ್ ಬಳಸ್ತಾರೆ.

ಆಫೀಸ್, ವರ್ಕ್ ಫ್ರಮ್ ಹೋಮ್, ಕಾಲೇಜು- ಸ್ಕೂಲ್ ವಿದ್ಯಾರ್ಥಿಗಳು ಹೀಗೆ ಎಲ್ಲರಿಗೆ ಲ್ಯಾಪ್ ಟಾಪ್ ಉಪಯುಕ್ತ ಸಾಧನವಾಗಿದೆ. ಒಮ್ಮೆ ಖರೀದಿ ಮಾಡಿದ ಲ್ಯಾಪ್ ಟಾಪ್ ಜೀವನ ಪರ್ಯಂತ ಬರೋದಿಲ್ಲ. ಸ್ಮಾರ್ಟ್ಫೋನ್ಗಳಂತೆ, ಲ್ಯಾಪ್ಟಾಪ್ಗಳು ಒಂದು ನಿರ್ದಿಷ್ಟ ಅವಧಿಯ ನಂತ್ರ ಕೈಕೊಡುತ್ವೆ. ಲ್ಯಾಪ್ಟಾಪ್ಗಳಿಗೂ ಎಕ್ಸ್ಪೈರಿ ಡೇಟ್ ಇದ್ಯೆ ಅಂತ ನೀವು ಕೇಳ್ಬುದು. ಅದಕ್ಕೆ ನಿರ್ದಿಷ್ಟ ದಿನಾಂಕ ಇಲ್ದೆ ಹೋದ್ರೂ ಯಾವಾಗ ಬದಲಿಸಬೇಕು ಎಂಬುದು ನಿಮಗೆ ಗೊತ್ತಿರಬೇಕು.

ನಿಮ್ಮ ಲ್ಯಾಪ್ ಟಾಪ್ ತುಂಬಾ ಹಳೆಯದಾಗಿದ್ದರೆ ಅಪ್ಡೇಟ್ ಮಾಡಲು ಸಾಧ್ಯವಾಗೋದಿಲ್ಲ. ಹಳೆಯ ಲ್ಯಾಪ್ಟಾಪ್ಗಳು ಹೊಸ ಆಪರೇಟಿಂಗ್ ಸಿಸ್ಟಮ್ಗಳು ಮತ್ತು ಸಾಫ್ಟ್ವೇರ್ಗಳೊಂದಿಗೆ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಅನೇಕ ಕಂಪನಿಗಳು ಹಳೆಯ ಮಾಡೆಲ್ ಭದ್ರತಾ ನವೀಕರಣಗಳನ್ನು ಒದಗಿಸೋದಿಲ್ಲ. ಆಗ ಡೇಟಾ ಸುರಕ್ಷತೆ ಕಷ್ಟವಾಗ್ಬಹುದು. ನಿಮ್ಮ ಲ್ಯಾಪ್ ಟಾಪ್ ನಲ್ಲಿ ಅಗತ್ಯ ಅಪ್ಡೇಟ್ ಸಿಗ್ತಿಲ್ಲ ಅಂದ್ರೆ ಅದನ್ನು ಬದಲಿಸಿ.

ಪ್ರತಿ ಲ್ಯಾಪ್ಟಾಪ್ನ ಬ್ಯಾಟರಿ ಬಾಳಿಕೆ ಕಾಲಾನಂತರದಲ್ಲಿ ಕಡಿಮೆಯಾಗುತ್ತದೆ. ನಿಮ್ಮ ಲ್ಯಾಪ್ ಟಾಪ್ ಬ್ಯಾಟರಿ ಜಾರ್ಜ್ ಮಾಡಿದ ಕೆಲವೇ ನಿಮಿಷದಲ್ಲಿ ಖಾಲಿ ಆದ್ರೆ ಅಥವಾ ಬಳಸುವ ಸಮಯದಲ್ಲಿ ಚಾರ್ಜರ್ ಹಾಕಿರ್ಲೇಬೇಕು ಎನ್ನುವವರು ಲ್ಯಾಪ್ ಟಾಪ್ ಬದಿಗಿಡೋದು ಉತ್ತಮ.

ಮೊದಲಿಗಿಂತ ಲ್ಯಾಪ್ಟಾಪ್ ನಿಧಾನವಾಗಿದ್ದರೆ, ಆಗಾಗ್ಗೆ ಹ್ಯಾಂಗ್ ಆಗುತ್ತಿದ್ದರೆ ಅಥವಾ ಓಪನ್ ಆಗಲು ಬಹಳ ಸಮಯ ತೆಗೆದುಕೊಂಡರೆ, ಇದು ಸಿಸ್ಟಮ್ ಹಾರ್ಡ್ವೇರ್ ಹಳೆಯದಾಗಿದೆ ಎಂಬ ಸೂಚನೆ. ಕೆಲವೊಮ್ಮೆ RAM ಅಥವಾ SSD ಅನ್ನು ಅಪ್ಗ್ರೇಡ್ ಮಾಡುವುದರಿಂದ ಸಮಸ್ಯೆಯನ್ನು ಪರಿಹರಿಸಬಹುದು.

ಲ್ಯಾಪ್ಟಾಪ್ ಕೀಬೋರ್ಡ್, ಸ್ಕ್ರೀನ್, ಮದರ್ಬೋರ್ಡ್ ಅಥವಾ ಇತರ ಹಾರ್ಡ್ವೇರ್ನಲ್ಲಿ ಆಗಾಗ್ಗೆ ಸಮಸ್ಯೆಗಳು ಕಾಣಿಸಿಕೊಳ್ತಿದ್ದರೆ, ಪದೇ ಪದೇ ರಿಪೇರಿ ಮಾಡುವ ಅನಿವಾರ್ಯ ಎದುರಾದರೆ ರಿಪೇರಿಗೆ ಖರ್ಚು ಮಾಡುವ ಬದಲು ಹೊಸ ಲ್ಯಾಪ್ ಟಾಪ್ ಖರೀದಿ ಮಾಡೋದು ಸೂಕ್ತ.

ಲ್ಯಾಪ್ಟಾಪ್ ಹೆಚ್ಚುಕಾಲ ಬಾಳಿಕೆ ಬರ್ಬೇಕು ಅಂದ್ರೆ ಕೆಲ ವಿಷ್ಯ ನೆನಪಿಟ್ಟುಕೊಳ್ಳಿ. ನಿಯಮಿತವಾಗಿ ಸಿಸ್ಟಮ್ ಸ್ವಚ್ಛಗೊಳಿಸಿ. ಅನಗತ್ಯ ಫೈಲ್ಗಳನ್ನು ತೆಗೆದುಹಾಕಿ. ಸಾಫ್ಟ್ವೇರ್ ನವೀಕರಿಸಿ. ವಿಶ್ವಾಸಾರ್ಹ ಆಂಟಿವೈರಸ್ ಬಳಸಿ. SSD ಮತ್ತು RAM ಅನ್ನು ಅಪ್ಗ್ರೇಡ್ ಮಾಡುವುದರಿಂದ ಅನೇಕ ಹಳೆಯ ಲ್ಯಾಪ್ಟಾಪ್ಗಳ ವೇಗವನ್ನು ಗಮನಾರ್ಹವಾಗಿ ಸುಧಾರಿಸಬಹುದು.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries