ಕಾಸರಗೋಡು: ಈಟ್ ರೈಟ್ ಕೇರಳ-ಸೇಫ್ ಓಣಂ ಕಾರ್ಯಕ್ರಮ ಜುಲೈ 29 ರಂದು ಬೆಳಿಗ್ಗೆ 11ಕ್ಕೆ ಕಾಸರಗೋಡು ಸಿಟಿ ಟವರ್‍ನಲ್ಲಿ ಜರುಗಲಿದೆ. ಕಾಸರಗೋಡು ಶಾಸಕ ಕಲ್ಲಟ್ರ ಮಹಿನ್ ಸಮಾರಂಭ ಉದ್ಘಾಟಿಸಲಿಸುವರು.
ಕಾಸರಗೋಡು ಆಹಾರ ಸುರಕ್ಷತಾ ಅಸಿಸ್ಟೆಂಟ್ ಕಮೀಷನ್ ಎಸ್.ಸಂಗೀತಾ ಸಮಾರಂಭದ ಅಧ್ಯಕ್ಷತೆ ವಹಿಸುವರು. ಉದ್ಘಾಟನಾ ಸಮಾರಂಭದ ನಂತರ ವಿವಿಧ ವಲಯಗಳ ಆಹಾರ ಉದ್ಯಮಿಗಳಿಗಾಗಿ ವಿಶೇಷ ಜಾಗ್ರತಿ ಹಾಗೂ ಅರಿವು ಮೂಡಿಸುವ ತರಗತಿ ನಡೆಸಲಾಗುವುದು. ಜಿಲ್ಲೆಯ ಆಹಾರ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕಾಸರಗೋಡು ಆಹಾರ ಸುರಕ್ಷತಾ ಇಲಾಖೆ ಕೋರಿದೆ. ನೋಂದಾವಣೆಗಾಗಿ ದೂರವಾಣಿ ಸಂಖ್ಯೆಯನ್ನು(04994 256257 8606909105) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

