ಬೈರೂತ್ : ಕದನ ವಿರಾಮ ಜಾರಿಯಲ್ಲಿದ್ದರೂ ಸೋಮವಾರ ದಕ್ಷಿಣ ಲೆಬನಾನ್‍ನಲ್ಲಿ ಕಾರೊಂದರ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ಕು ಜನರು ಮೃತಪಟ್ಟಿದ್ದಾರೆ ಎಂದು ಲೆಬನಾನ್‍ನ ಸರಕಾರಿ ಸ್ವಾಮ್ಯದ ಮಾಧ್ಯಮ ತಿಳಿಸಿದೆ.
ನಬಾತಿಯಾ ಅಲ್-ಫಾವ್ಕಾದಲ್ಲಿರುವ ತಮ್ಮ ಕುಟುಂಬದ ಮನೆಗೆ ಭೇಟಿ ನೀಡಿ ಹಿಂತಿರುಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಕಾರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಡ್ರೋನ್ ದಾಳಿ ನಡೆಸಿದೆ.
ದಾಳಿಯಲ್ಲಿ ಶಾಲೆಯೊಂದರ ಪ್ರಾಂಶುಪಾಲೆ, ಅವರ ತಾಯಿ, ಒಬ್ಬ ವಿದೇಶಿ ಮಹಿಳೆ ಮತ್ತು ಸಿರಿಯಾದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ವರದಿಯು ತಿಳಿಸಿದೆ.

