HEALTH TIPS

ಗಾಝಾ ಆಡಳಿತ ಮಂಡಳಿ ವಿಸರ್ಜಿಸಿದ ಹಮಾಸ್: ವರದಿ

 ಗಾಝಾ: ಕಳೆದ ಸುಮಾರು ಎರಡು ದಶಕಗಳಿಂದ ಗಾಝಾ ಪಟ್ಟಿಯನ್ನು ಆಳುತ್ತಿದ್ದ ಆಡಳಿತ ಮಂಡಳಿಯನ್ನು ಹಮಾಸ್ ವಿಸರ್ಜಿಸಿದೆ ಎಂದು ಆ ಸಂಘಟನೆಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. 


ಈ ಕ್ರಮವು ಹಮಾಸ್‍ನ ರಾಜಕೀಯ ನಿಲುವಿನಲ್ಲಿ ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ ಮತ್ತು ನಾಗರಿಕ ಆಡಳಿತವನ್ನು ಜಾರಿಗೆ ತರಲು ಫೆಲೆಸ್ತೀನಿಯನ್ ತಾಂತ್ರಿಕ ಸಮಿತಿಗೆ ದಾರಿ ಮಾಡಿಕೊಟ್ಟಿದೆ.

`ಹಮಾಸ್ ಸಂಘಟನೆಯು ಗಾಝಾ ಸರಕಾರಿ ಸಮಿತಿಯನ್ನು ವಿಸರ್ಜಿಸಲು ನಿರ್ಧರಿಸಿದೆ. ಅಲ್ಲದೆ ಗಾಝಾ ಆಡಳಿತಕ್ಕಾಗಿ ರಾಷ್ಟ್ರೀಯ ಸಮಿತಿ'ಯು ಅಧಿಕೃತವಾಗಿ ತನ್ನ ಜವಾಬ್ದಾರಿಗಳನ್ನು ವಹಿಸಿಕೊಳ್ಳುವವರೆಗೆ, ಈ ಸಮಿತಿಯ ಕೆಲಸವನ್ನು ಮೇಲ್ವಿಚಾರಣೆ ಮಾಡಲು ರಾಷ್ಟ್ರೀಯವಾಗಿ ಒಪ್ಪಿತ ವ್ಯಕ್ತಿಯೊಬ್ಬರನ್ನು ನೇಮಿಸಲು ನಿರ್ಧರಿಸಿದೆ. ಇತ್ತೀಚೆಗೆ ಕೈರೋದಲ್ಲಿ ನಡೆದ ಸಭೆಯಲ್ಲಿ ಸಂಘಟನೆಯು ಈ ಕ್ರಮದ ಬಗ್ಗೆ ಇತರ ಫೆಲೆಸ್ತೀನಿಯನ್ ಬಣಗಳಿಗೆ ಈಗಾಗಲೇ ಮಾಹಿತಿ ನೀಡಿದೆ ಎಂದು ಹಮಾಸ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries