HEALTH TIPS

ಜಂತರ್‌ಮಂತರ್‌ನಲ್ಲಿ ನಾಟಕೀಯ ಬೆಳವಣಿಗೆ: ಮರೆಯಲ್ಲಿ ಸೊನಮ್‌ ಕರೆದೊಯ್ದರು...

 ವದೆಹಲಿ : 'ನೀಟ್‌' ಪ್ರಶ್ನೆಪತ್ರಿಕೆ ಸೋರಿಕೆ, ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳ ಸಂಬಂಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗೆ ಆಗ್ರಹಿಸಿ, ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಪರ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೊನಮ್‌ ವಾಂಗ್ಚೂಕ್‌ ಅವರನ್ನು ದೆಹಲಿ ಪೊಲೀಸರು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 


ಬಿಳಿ ಬಟ್ಟೆಗಳನ್ನು ಮರೆಮಾಡಿ, ವೇದಿಕೆ ಮೇಲಿದ್ದವರನ್ನು ದೂಡಿದ ದೆಹಲಿ ಪೊಲೀಸರು ಉಪವಾಸ ಸತ್ಯಾಗ್ರಹನಿರತ ಸೊನಮ್‌ ವಾಂಗ್ಚೂಕ್‌ ಅವರನ್ನು ಒತ್ತಾಯಪೂರ್ವಕವಾಗಿ ಸಫ್ದರ್‌ಜಂಗ್‌ ಆಸ್ಪತ್ರೆಗೆ ಬಟ್ಟೆಯ ಜೋಲಿಯಲ್ಲಿ ಶನಿವಾರ ಬೆಳಿಗ್ಗೆ ಕರೆದೊಯ್ದರು. ಇಡೀ ಕಾರ್ಯಾಚರಣೆ ವೇಳೆ ಪೊಲೀಸರು ಮಫ್ತಿಯಲ್ಲಿದ್ದರು.

ದೆಹಲಿ ಹೈಕೋರ್ಟ್‌ ಆದೇಶದ ಮೇರೆಗೆ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದರು. '20 ದಿನಗಳಿಂದ ಉಪವಾಸದಲ್ಲಿರುವ ಬಳಲಿದ ವ್ಯಕ್ತಿಯನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ, ದೆಹಲಿ ಪೊಲೀಸರು ಹೊತ್ತೊಯ್ದಿದ್ದಾರೆ. ಇದು ದೇಶವೇ ನಾಚಿಕೆಪಡುವ ಕೃತ್ಯ' ಎಂದು ಕಾಕ್ರೋಚ್‌ ಜನತಾ ಪಾರ್ಟ್‌ (ಸಿಜೆಪಿ) ಹೇಳಿದೆ.

ಪ್ರತಿಭಟನೆಯನ್ನು ಕೈಬಿಟ್ಟು ಜಂತರ್‌ ಮಂತರ್‌ ಅನ್ನು ಶಾಂತಿಯುತ ರೀತಿಯಲ್ಲಿ ಶೀಫ್ರದಲ್ಲಿಯೇ ತೆರವು ಮಾಡುವಂತೆ ದೆಹಲಿ ಪೊಲೀಸರು ಪ್ರತಿಭಟನಾನಿರತರಿಗೆ ಸೂಚಿಸಿದ್ದಾರೆ. ವಿರೋಧ ಪಕ್ಷದ ವಿವಿಧ ನಾಯಕರು ದೆಹಲಿ ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಉಪವಾಸ ಸತ್ಯಾಗ್ರಹನಿರತ ಸೊನಮ್‌ ಅವರನ್ನು ಬಳಿ ಬಟ್ಟೆಗಳಿಂದ ಪರದೆ ಮಾಡಿಕೊಂಡು ದೆಹಲಿ ‍ಪೊಲೀಸರು ಶನಿವಾರ ಬೆಳಿಗ್ಗೆ ಆಸ್ಪತ್ರೆಗೆ ಕರೆದೊಯ್ದರು

ಹೀಗಿತ್ತು ಪೊಲೀಸರ ಕಾರ್ಯಾಚರಣೆ...

1 ಸೊನಮ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ಕೇಂದ್ರ ಕಚೇರಿಯಿಂದ ಶುಕ್ರವಾರ ರಾತ್ರಿ 3ರ ಸುಮಾರಿಗೆ ಸೂಚನೆ ಬಂದಿತು

2 ಮೇಲಧಿಕಾರಿಗಳ ಸೂಚನೆ ಬಂದ ತಕ್ಷಣವೇ ಪೊಲೀಸರು ಜಂತರ್ ಮಂತರ್‌ಗೆ ಹತ್ತಿರದಲ್ಲಿಯೇ ಇರುವ ಮಂದಿರ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಸಭೆ ಸೇರಿದರು

3 ಗದ್ದಲವಿಲ್ಲದೆಯೇ, ಪ್ರತಿಭಟನಕಾರರಿಗೆ ವಿರೋಧಿಸಲು ಅವಕಾಶವನ್ನೇ ನೀಡದಂತೆ ಒಂದೇ ನಿಮಿಷದಲ್ಲಿ ಸೊನಮ್ ಅವರನ್ನು ಹೇಗೆ ವೇದಿಕೆಯಿಂದ ಕರೆದೊಯ್ಯಬೇಕು ಎಂಬ ಬಗ್ಗೆ ಅಣಕು ಕಾರ್ಯಾಚರಣೆ ನಡೆಸಲಾಯಿತು

4 ಜಂತ‌ರ್ ಮಂತರ್‌ನಲ್ಲಿ ನೆಟ್‌ವರ್ಕ್ ಜಾಮರ್ ಅನ್ನು ಅಳವಡಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಕಾರ್ಯಾಚರಣೆಯ ವಿಡಿಯೊಗಳು ಜಾಲತಾಣಗಳಲ್ಲಿ ಹರಿದಾಡಿ, ಒಮ್ಮೆಲೇ ಸಾರ್ವಜನಿಕರು ಪ್ರತಿಭಟನಾ ಸ್ಥಳಕ್ಕೆ ಬರಬಾರದೆನ್ನುವುದು ಮೂಲ ಉದ್ದೇಶವಾಗಿತ್ತು

5 ಶನಿವಾರ ಬೆಳಿಗ್ಗೆ ಸುಮಾರು 5ಕ್ಕೆ ಪೊಲೀಸರು ಜಂತ‌ರ್ ಮಂತರ್‌ನಲ್ಲಿ ಜಮಾಯಿಸಿದರು. ಇಲ್ಲಿಯೂ ಒಮ್ಮೆ ಸಭೆ ನಡೆಸಲಾಯಿತು.

6 ಬಿಳಿ ಬಟ್ಟೆಗಳನ್ನು ಹಿಡಿದು ಪೊಲೀಸರು ವೇದಿಕೆ ಹತ್ತಿರ ಬರತೊಡಗಿದರು

7 ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ವೇದಿಕೆ ಸುತ್ತ ಬಿಳಿ ಬಟ್ಟೆಗಳನ್ನು ಹಿದಿದು, ಸೊನಮ್ ಅವರನ್ನು ಸುತ್ತುವರಿಯಲಾಯಿತು. ವೇದಿಕೆ ಹತ್ತಿರವೇ ಆಂಬುಲೆನ್ಸ್ ಕಾಯುತ್ತಾ ನಿಂತಿತ್ತು.

'ಕೋರ್ಟ್‌ ಆದೇಶದ ಪಾಲನೆ'

'ಆರೋಗ್ಯವು ತೀರಾ ಹದಗೆಡುತ್ತಿರುವ ಕಾರಣ, ಸೊನಮ್‌ ಅವರ ಆರೋಗ್ಯದ ಕುರಿತು ನಿತ್ಯವೂ ವೈದ್ಯಕೀಯ ತಪಾಸಣೆ ನಡೆಸಲು ದೆಹಲಿ ಹೈಕೊರ್ಟ್‌ ಸೂಚಿಸಿತ್ತು. ಅದರಂತೆ ವೈದ್ಯರು ಅವರ ತಪಾಸಣೆ ನಡೆಸಿದ್ದು, ಆಸ್ಪತ್ರೆಗೆ ದಾಖಲು ಮಾಡುವಂತೆ ಸೂಚಿಸಿದ್ದರು. ಅವರ ಸಲಹೆಯಂತೆ ನಾವು ಸೊನಮ್‌ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ' ಎಂದು ದೆಹಲಿ ಪೊಲೀಸರು ಹೇಳಿದರು.

'ಕೋರ್ಟ್‌ ಆದೇಶದಂತೆ ಶನಿವಾರ ಬೆಳಿಗ್ಗೆ ವೈದ್ಯರು ಸೊನಮ್‌ ಅವರ ತಪಾಸಣೆ ನಡೆಸಿದ್ದಾರೆ. ಆದರೆ, ಪ್ರತಿಭಟನಾನಿರತರು ವೈದ್ಯರ ತಪಾಸಣೆ ಕಾರ್ಯಕ್ಕೆ ಅಡ್ಡಿಪಡಿಸಿದ್ದರು. ಇದರಿಂದ ತುಸು ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು' ಎಂದರು.

ತಲ್ಪಾ, ಪ್ರತಿಭಟನಾನಿರತೆ‌ʼ5-10 ನಿಮಿಷದಲ್ಲಿ ಎಲ್ಲವೂ ಮುಗಿಯಿತು': 5-10 ನಿಮಿಷಗಳಲ್ಲಿ ಕಾರ್ಯಾಚರಣೆಯೇ ಮುಗಿದು ಹೋಯಿತು. ಯಾರಿಗೂ ಏನು-ಎತ್ತ ಅಂತಲೂ ತಿಳಿಯಲಿಲ್ಲ. ನಮಗೆ ಕಂಡಿದ್ದು, ಬಿಳಿ ಬಟ್ಟೆ ಮಾತ್ರ. ಬೆಳಿಗ್ಗೆ 7ರಿಂದ 8ಗಂಟೆಗೆ ದೆಹಲಿ ಪೊಲೀಸರು ವೇದಿಕೆಯತ್ತ ಬಂದರು. ನೋಡು ನೋಡುತ್ತಿದ್ದಂತೆ ಸೊನಮ್ ಸ‌ರ್ ಅವರನ್ನು ಸುತ್ತುವರೆದರು. ಪ್ರತಿಭಟನಕಾರರು ವೇದಿಕೆಯತ್ತ ಓಡಿದರು. ಆದರೆ, ಪೊಲೀಸರು ಅವರನ್ನು ತಳ್ಳಿದರು. ಕಾರ್ಯಾಚರಣೆ ಬಳಿಕ ಇಲ್ಲಿನ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಯಿತು. ಜೊತೆಗೆ, ಸುಮಾರು ಒಂದು ತಾಸು ಇಲ್ಲಿ ಮೊಬೈಲ್ ನೆಟ್‌ವರ್ಕ್‌ ಇರಲಿಲ್ಲ.

ವೈದ್ಯಕೀಯ ವರದಿ ನೀಡುತ್ತಿಲ್ಲ; ಸೊನಮ್‌ ಪತ್ನಿ ಗೀತಾಂಜಲಿ ಆಂಗ್ಮೊ

'ಸೊನಮ್‌ ಅವರು ಆರೋಗ್ಯವಾಗಿಯೇ ಇದ್ದಾರೆ. ಅವರ ವೈದ್ಯಕೀಯ ತಪಾಸಣೆಯ ವರದಿ ಕೇಳಿದರೆ, ಆಸ್ಪತ್ರೆಯವರು ಅದನ್ನು ಒದಗಿಸುತ್ತಿಲ್ಲ. ಆದ್ದರಿಂದ ಸೊನಮ್‌ ಅವರನ್ನು ಕೂಡಲೇ ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಡಿ. ಇಲ್ಲಿ ಯಾವುದೂ ಪಾರದರ್ಶಕವಾಗಿಲ್ಲ' ಎಂದು ಸೊನಮ್‌ ಅವರ ಪತ್ನಿ ಗೀತಾಂಜಲಿ ಆಂಗ್ಮೊ ಆರೋಪಿಸಿದರು.

'ನನ್ನ ಒಪ್ಪಿಗೆ ಇಲ್ಲದೆ ಸೊನಮ್‌ ಅವರಿಗೆ ಯಾವುದೇ ಚಿಕಿತ್ಸೆ, ಔಷಧಿಗಳನ್ನು ನೀಡಬಾರದು. ನಮಗೆ ನಂಬಿಕೆ ಇರುವ ಪ್ರಯೋಗಾಲಯದಿಂದ ನಾವೇ ಸೊನಮ್‌ ಅವರ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುತ್ತೇವೆ ಮತ್ತು ನಮಗೆ ನಂಬಿಕೆ ಇರುವ ಆಸ್ಪತ್ರೆಗೆ ಅವರನ್ನು ದಾಖಲು ಮಾಡುತ್ತೇವೆ' ಎಂದರು.

'ಇದು ವೈದ್ಯಕೀಯ ವಿಚಾರವಾಗಿದ್ದರೆ, ಆಸ್ಪತ್ರೆಯ ಸುತ್ತ ಯಾಕಿಷ್ಟು ಪೊಲೀಸರು ಇದ್ದಾರೆ? ನಮ್ಮ ಮೊಬೈಲ್‌ಗಳನ್ನು ಆಸ್ಪತ್ರೆ ಒಳಗೆ ತೆಗೆದುಕೊಂಡು ಹೋಗಲು ಯಾಕೆ ನಿರಾಕರಿಸಲಾಗುತ್ತಿದೆ? ಇದನ್ನೆಲ್ಲ ನೋಡಿದರೆ, ಇದು ಆಸ್ಪತ್ರೆ ಅಲ್ಲ;ಜೈಲು' ಎಂದರು.

ನಿನ್ನೆ (ಶುಕ್ರವಾರ) ಸಫ್ದರ್‌ಜಂಗ್‌ ವೈದ್ಯರು ಸೊನಮ್‌ ಅವರನ್ನು ತಪಾಸಣೆ ನಡೆಸಿದ್ದರು. ಆಗ ಆರೋಗ್ಯವು ಸ್ಥಿರವಾಗಿಯೇ ಇತ್ತು. ರಕ್ತದಲ್ಲಿನ ಪೊಟ್ಯಾಷಿಯಂ ಪ್ರಮಾಣವು 4.3 ಇತ್ತು. 'ಪೊಟ್ಯಾಷಿಯಂ ಪ್ರಮಾಣ 2.9 ಇದೆ. ಇದು ಜೀವಕ್ಕೆ ಆಪಾಯ' ಎಂದು ಈಗ ಹೇಳುತ್ತಿದ್ದಾರೆ. ಇದರ ವರದಿ ಕೇಳಿದರೆ ವರದಿ ತೋರಿಸುತ್ತಾರೆ. ಆದರೆ ನಮ್ಮ ಕೈಗೆ ನೀಡುತ್ತಿಲ್ಲ.

ಪ್ರತಿಭಟನಾ ಮೆರವಣಿಗೆ ನಾನೇ ಮುನ್ನಡೆಸುತ್ತೇನೆ: ಗೀತಾಂಜಲಿ ಆಂಗ್ಮೊ

ಸೊನಮ್ ಚೆನ್ನಾಗಿಯೇ ಇದ್ದಾರೆ. ಜುಲೈ 20ರಂದು ನಡೆಸಲು ಉದ್ದೇಶಿಸಿರುವ ಸಂಸತ್ತಿನವರೆಗಿನ ಪ್ರತಿಭಟನಾ ಮೆರವಣಿಗೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಯುವಕರು ಈ ಚಳವಳಿಯನ್ನು ಜೀವಂತವಾಗಿ ಇರಿಸಿದ್ದಾರೆ. ಒಂದು ವೇಳೆ ಸೊನಮ್‌ ಭಾಗವಹಿಸಲು ಸಾಧ್ಯವಾಗದೇ ಇದ್ದರೆ ಅವರ ಪರವಾಗಿ ನಾನು ಪ್ರತಿಭಟನಾ ಮೆರವಣಿಗೆಯನ್ನು ಮುನ್ನಡೆಸುತ್ತೇನೆ. ಒತ್ತಾಯಪೂರ್ವಕವಾಗಿ ಸೊನಮ್ ಅವರನ್ನು ಕರೆದೊಯ್ದ ಮಾತ್ರಕ್ಕೆ ಈ ಮೆರವಣಿಗೆಯನ್ನು ಅವರು ನಿಲ್ಲಿಸಲು ಸಾಧ್ಯವಿಲ್ಲ ಎಂದರು.

ಚಿಕಿತ್ಸೆ ನಿರಾಕರಿಸಿದ ಸೊನಮ್‌

'ಬೆಳಿಗ್ಗೆ ಸುಮಾರು 7.40ಕ್ಕೆ ಸೊನಮ್‌ ಅವರನ್ನು ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ಸೊನಮ್‌ ಅವರು ಚಿಕಿತ್ಸೆಗೆ ನಿರಾಕರಿಸಿದ್ದಾರೆ. ಆದರೆ, ಅವರ ಮೇಲೆ ಸಂಪೂರ್ಣ ನಿಗಾ ಇಡಲಾಗಿದೆ' ಎಂದು ಸಫ್ದರ್‌ಜಂಗ್‌ ಆಸ್ಪತ್ರೆ ವೈದ್ಯರು ತಿಳಿಸಿದರು. 'ಆಸ್ಪತ್ರೆಯಲ್ಲಿಯೂ ಸೊನಮ್‌ ಅವರು ಉಪವಾಸ
ಮುಂದುವರಿಸಿದ್ದಾರೆ' ಎಂದು ಸಿಜೆಪಿ ಹೇಳಿದೆ. ಚಿಕಿತ್ಸೆ ನೀಡಲು ಅನುಮತಿ ಕೊಡುವಂತೆ ವೈದ್ಯರು ಸೊನಮ್‌ ಕುಟುಂಬದವರನ್ನು ಮನವೊಲಿಸುತ್ತಿದ್ದಾರೆ.

ವಿರೋಧ ಪಕ್ಷಗಳ ವಿರೋಧ

ಅಭಿಜೀತ್‌ ದೀಪ್ಕೆ, ಸಿಜೆಪಿ ಸಂಸ್ಥಾಪಕಬೆಳಗಿನ ನಿತ್ಯ ಕರ್ಮಗಳನ್ನು ಮುಗಿಸಲು ನಾನು ನನ್ನ ಸ್ನೇಹಿತನ ಮನೆಗೆ ತೆರಳಿದ್ದೆ. ಆಗ ಪೊಲೀಸರು ನನಗೆ ಹೊಡೆದರು. ಕೆಲಕಾಲ ಪೊಲೀಸರು ನನ್ನನ್ನು ವಶಕ್ಕೆ ಪಡೆದಿಕೊಂಡಿದ್ದರು .ಅಣ್ಣಾ ಹಜಾರೆ, ಸಾಮಾಜಿಕ ಹೋರಾಟಗಾರಸೊನಮ್ ಅವರ ತಾಳ್ಮೆಯನ್ನು ಸರ್ಕಾರ ಪರೀಕ್ಷಿಸಬಾರದು. ಅವರ ಬೇಡಿಕೆಗೆ ಆಗುತ್ತದೆ ಅಥವಾ ಇಲ್ಲ ಎನ್ನಬಹುದು. ಆದರೆ, ಅವರೊಂದಿಗೆ ಮಾತನಾಡಿ.ಅರವಿಂದ ಕ್ರೇಜಿವಾಲ್‌, ಎಎಪಿ ಸಂಚಾಲಕಇಂಥ ದುರಹಂಕಾರ ಸರಿಯಲ್ಲ. ಒತ್ತಾಯಪೂರ್ವಕವಾಗಿ ಅವರನ್ನು ಕರೆದುಕೊಂಡು ಹೋಗುವ ಬದಲು, ಸರ್ಕಾರವು ಸೊನಮ್ ಅವರೊಂದಿಗೆ ಮಾತನಾಡಬೇಕಿತ್ತು.ಆದಿತ್ಯಠಾಕ್ರೆ, ಶಿವಸೇನಾ(ಉದ್ಧವ್ ಬಣ)ನಾಯಕಎಂಥ ನಾಚಿಕೆಗೇಡು! ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹೇಗೆ ಧ್ವಂಸ ಮಾಡಲಾಗುತ್ತಿದೆ ಎಂದು ಜಗತ್ತೇ ನೋಡುತ್ತಿದೆ.ರಾಹುಲ್‌ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕಹಿಂಸೆ ಮತ್ತು ಅಸತ್ಯ- ಇವು ಮೋದಿ ಸರ್ಕಾರದ ಮೂಲತತ್ವಗಳು. ಅಹಿಂಸಾ ಮಾರ್ಗದಲ್ಲಿ ಉಪವಾಸ ನಡೆಸುತ್ತಿದ್ದ ಸೊನಮ್ ವಾಂಗ್ಟಕ್ ಅವರನ್ನು ಕರೆದುಕೊಂಡು ಹೋಗಿರುವುದು ತಪ್ಪು ಶರದ್‌ ಪವಾ‌ರ್, ಎನ್‌ಸಿಪಿ (ಎಸ್‌ಪಿ)ಬಣದ ಮುಖ್ಯಸ್ಥಸೊನಮ್ ಅವರ ವಿಚಾರದಲ್ಲಿ ಸರ್ಕಾರವು 3 ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ವಿದ್ಯಾರ್ಥಿಗಳ ಬೇಡಿಕೆಯನ್ನು ಚರ್ಚಿಸುವ ಬದಲು, ಸರ್ಕಾರವು ಮೂಕಪ್ರೇಕ್ಷಕನಂತೆ ವರ್ತಿಸಿತು

ನಗರದ ಸುತ್ತ ಬಿಗಿ ಭದ್ರತೆ

ಜಂತ‌ರ್ ಮಂತರ್ ಸುತ್ತ, ನಗರದಾದ್ಯಂತ, ಸಪ್ಪರ್‌ಜಂಗ್ ಆಸ್ಪತ್ರೆ ಸುತ್ತ ಬಿಗಿ ಭದ್ರತೆ ನಿಯೋಜಿಸಲಾಗಿದೆ. ದೆಹಲಿ ಪೊಲೀಸರು, ಅರೆಸೇನಾ ಪಡೆಗಳನ್ನು ನಿಯೋಜನೆಗೆ ಬಳಸಿಕೊಳ್ಳಲಾಗಿದೆ.ದೆಹಲಿಯ ಪ್ರಮುಖ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ.

ಮೆರವಣಿಗೆ ಅನುಮತಿ ಇಲ್ಲ: 'ಜುಲೈ 20ರಂದು

ಸೊನಮ್ ಅವರ ತಾಳ್ಮೆಯನ್ನು ಸರ್ಕಾರ ಪರೀಕ್ಷಿಸಬಾರದು. ಅವರ ಬೇಡಿಕೆಗೆ ಆಗುತ್ತದೆ ಅಥವಾ ಇಲ್ಲ ಎನ್ನಬಹುದು. ಆದರೆ, ಅವರೊಂದಿಗೆ ಮಾತನಾಡಿ ಅಣ್ಣಾ ಹಜಾರೆ, ಸಾಮಾಜಿಕ ಹೋರಾಟಗಾರ

ಬೆಳಗಿನ ನಿತ್ಯ ಕರ್ಮಗಳನ್ನು ಮುಗಿಸಲು ನಾನು ನನ್ನ ಸ್ನೇಹಿತನ ಮನೆಗೆ ತೆರಳಿದ್ದೆ. ಆಗ ಪೊಲೀಸರು ನನಗೆ ಹೊಡೆದರು. ಕೆಲಕಾಲ ಪೊಲೀಸರು ನನ್ನನ್ನು ವಶಕ್ಕೆ

ಸಂಸತ್ತಿನವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಸಿಜೆಪಿ ಉದ್ದೇಶಿಸಿದೆ. ಆದರೆ, ಈ ಕುರಿತು ಸಿಜೆಪಿ ಇದುವರೆಗೂ ದೆಹಲಿ ಪೊಲೀಸರಿಂದ ಅನುಮತಿ ಕೇಳಿಲ್ಲ. ಮುಂಗಾರು ಅಧಿವೇಶನ ಇರುವುದರಿಂದಒಂದೊಮ್ಮೆ ಅನುಮತಿ ಕೇಳಿದರೂ ಅನುಮತಿ ನೀಡುವುದಿಲ್ಲ' ಎಂದು ಪೊಲೀಸ್ ಮೂಲಗಳು ಹೇಳಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries