ಕೋಝಿಕೋಡ್: ಫುಟ್ಬಾಲ್ ವಿಶ್ವಕಪ್‍ನ ಕ್ವಾರ್ಟರ್ ಫೈನಲ್‍ನಲ್ಲಿ ಅರ್ಜೆಂಟೀನಾ ತಂಡದ ವಿಜಯೋತ್ಸವ ಆಚರಿಸುತ್ತಿದ್ದಾಗ ಪಟಾಕಿ ಸಿಡಿದು ಯುವಕನ ಬೆರಳುಗಳು ತುಂಡಾಗಿವೆ. ಚಕ್ಕುಮ್‍ಕಡವು ಮೂಲದ ಮುಹಮ್ಮದ್ ಸಹದ್ (22) ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ನೇಹಿತರೊಂದಿಗೆ ವಿಜಯೋತ್ಸವ ಆಚರಿಸುತ್ತಿದ್ದಾಗ ಈ ದುರಂತ ಘಟನೆ ನಡೆದಿದೆ. ಸಹದ್ ಅವರ ಎಡಗೈಯ ಎರಡು ಬೆರಳುಗಳು ತುಂಡಾಗಿವೆ. ಅವರು ತಮ್ಮ ಕಿರುಬೆರಳು ಮತ್ತು ಉಂಗುರದ ಬೆರಳನ್ನು ಸಂಪೂರ್ಣವಾಗಿ ಮತ್ತು ಮಧ್ಯದ ಬೆರಳಿನ ಅರ್ಧ ಭಾಗವನ್ನು ಕಳೆದುಕೊಂಡಿದ್ದಾರೆ. ಯುವಕನ ಎಡ ಮತ್ತು ಬಲಗೈಯಲ್ಲಿ ಪಟಾಕಿಗಳಿದ್ದವು. ಬಲಗೈಯಲ್ಲಿ ಪಟಾಕಿಗಳನ್ನು ಸಿಡಿಸಿ ಎಸೆಯುತ್ತಿದ್ದಾಗ, ಅವರ ಬಲಗೈಯಲ್ಲಿದ್ದ ಪಟಾಕಿಗೂ ಬೆಂಕಿಗೆ ಆಹುತಿಯಾಗಿ ಸ್ಫೋಟಗೊಂಡಿದೆ. ಕೋಝಿಕೋಡ್‍ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಹದ್ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಯಿತು.

