HEALTH TIPS

ಪ್ರಾಜೆಕ್ಟ್ ಮೇಘಾಲಯ: ಸಿಎಂ ವಿಜಯ್‌ ಸರ್ಕಾರ ಉರುಳಿಸಲು ನಡೆದಿತ್ತೇ ಸಂಚು!

 ಚೆನ್ನೈ: ನಟ, ಸಿಎಂ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರವನ್ನು ಉರುಳಿಸಲು 'ಪ್ರಾಜೆಕ್ಟ್ ಮೇಘಾಲಯ' ಹೆಸರಿನಲ್ಲಿ ಸಂಚು ರೂಪಿಸಲಾಗಿತ್ತು ಎಂಬ ಆರೋಪ ಪ್ರಕರಣದ ತನಿಖೆ ನಡೆಸುತ್ತಿರುವ ಚೆನ್ನೈ ಪೊಲೀಸರು, ಪ್ರಾದೇಶಿಕ ವಾಹಿನಿಯೊಂದರ ಹಿರಿಯ ಪತ್ರಕರ್ತನನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ. 


ಶಾಸಕರಿಗೆ ಕೋಟ್ಯಂತರ ರೂಪಾಯಿ ಆಮಿಷ ಒಡ್ಡಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದ ಆರೋಪದ ಮೇಲೆ ಈಗಾಗಲೇ ತನಿಖೆ ತೀವ್ರಗೊಂಡಿದ್ದು, ಪ್ರಾದೇಶಿಕ ಸುದ್ದಿ ಸಂಸ್ಥೆಯೊಂದರ ಪತ್ರಕರ್ತ ವಿಜಯನ್ ಎಂಬುವವರನ್ನು ಪೊಲೀಸರು ಪ್ರಶ್ನಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?

ಟಿವಿಕೆ ಪಕ್ಷದ ಉತ್ತಂಗರೈ ಕ್ಷೇತ್ರದ ಶಾಸಕ ಎನ್. ಇಳಯರಾಜ ಅವರು ನೀಡಿದ ದೂರಿನ ಆಧಾರದ ಮೇಲೆ ಈ ತನಿಖೆ ಆರಂಭವಾಗಿದೆ. ಪಕ್ಷದ ವಿಪ್ ಉಲ್ಲಂಘಿಸಿ ಮತ ಚಲಾಯಿಸಲು ತಮಗೆ ಬರೋಬ್ಬರಿ ₹35 ಕೋಟಿ ಲಂಚದ ಆಮಿಷ ಒಡ್ಡಲಾಗಿತ್ತು ಎಂದು ಶಾಸಕರು ಆರೋಪಿಸಿದ್ದಾರೆ.

ಲಂಚದ ಆಫರ್ ಅನ್ನು ನಿರಾಕರಿಸಿದ ನಂತರ ತಮಗೆ ಹಾಗೂ ತಮ್ಮ ಕುಟುಂಬಸ್ಥರಿಗೆ ಜೀವಬೆದರಿಕೆ ಒಡ್ಡಲಾಗಿತ್ತು 'ಐಪಿಡಿಎಸ್' ಎಂಬ ಸಂಸ್ಥೆಯ ಮೂಲಕ ಒಪಿನಿಯನ್ ಪೋಲ್ ನಡೆಸುವ ಯೂಟ್ಯೂಬರ್ ತಿರುನಾವುಕ್ಕರಸು ಹಾಗೂ ಅವರ ತಂಡ ಈ ಆಮಿಷದ ಹಿಂದೆ ಇತ್ತು ಎಂದು ದೂರಲ್ಲಿ ಹೆಸರಿಸಲಾಗಿದೆ.

ಟಿವಿಕೆ ಪಕ್ಷದ ಸುಮಾರು 15 ಶಾಸಕರನ್ನು ಇದೇ ರೀತಿ ಹಣದ ಆಮಿಷದ ಮೂಲಕ ಸೆಳೆದು, ವಿಜಯ್ ನೇತೃತ್ವದ ಸರ್ಕಾರವನ್ನು ಬೀಳಿಸಲು 'ಪ್ರಾಜೆಕ್ಟ್ ಮೇಘಾಲಯ' ಹೆಸರಿನಲ್ಲಿ ಜಾಲವೊಂದು ಸಕ್ರಿಯವಾಗಿತ್ತು ಎಂಬುದು ಬೆಳಕಿಗೆ ಬಂದಿದೆ.

ಆಳ -ಅಗಲ| ಕೆಪಿಎಸ್‌ಸಿ ವಿಶ್ವಾಸಾರ್ಹತೆ ಪಾತಾಳಕ್ಕೆಪಶ್ಚಿಮ ಏಷ್ಯಾ ಸಂಘರ್ಷ: ಆರ್ಥಿಕ ಸವಾಲುಗಳ ಬಗ್ಗೆ ಪಾಕ್ ಪ್ರಧಾನಿ ಷರೀಫ್ ಎಚ್ಚರಿಕೆ

ಪತ್ರಕರ್ತನ ವಿಚಾರಣೆ ಮತ್ತು ಪ್ರಸ್ ಕ್ಲಬ್ ಆಕ್ಷೇಪ

ಈ ಸಂಚಿನ ಮುಖ್ಯ ಆರೋಪಿ ತಿರುನಾವುಕ್ಕರಸು ಜೊತೆ ನಿರಂತರ ಸಂಪರ್ಕದಲ್ಲಿದ್ದ ಆರೋಪದ ಮೇಲೆ ಪತ್ರಕರ್ತ ವಿಜಯನ್ ಅವರನ್ನು ಜುಲೈ 15 ಮತ್ತು 16 ರಂದು ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಅವರ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಆದರೆ, ಪೊಲೀಸರ ಈ ಕ್ರಮಕ್ಕೆ ಚೆನ್ನೈ ಪ್ರೆಸ್ ಕ್ಲಬ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸೂಕ್ತ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದೆ ಪತ್ರಕರ್ತನ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ತಡರಾತ್ರಿಯವರೆಗೆ ವಿಚಾರಣೆ ನಡೆಸಿ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರೆಸ್ ಕ್ಲಬ್ ಆರೋಪಿಸಿದೆ. ಈ ಆರೋಪವನ್ನು ತಳ್ಳಿಹಾಕಿರುವ ಪೊಲೀಸರು, ಕಾನೂನಿನ ಚೌಕಟ್ಟಿನಲ್ಲೇ ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries