HEALTH TIPS

ನವದೆಹಲಿ: ಅಮೂಲ್‌ನ ಮೊಸರು ತಯಾರಿಕಾ ಘಟಕಕ್ಕೆ ಅಮಿತ್ ಶಾ ಭೂಮಿ ಪೂಜೆ

ನವದೆಹಲಿ: ಮೊಸರು ತಯಾರಿಕೆಯಲ್ಲಿ ವಿಶ್ವದ ಅತಿದೊಡ್ಡ ಘಟಕಕ್ಕೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಕೋಲ್ಕತ್ತದಲ್ಲಿ ಭಾನುವಾರ ಭೂಮಿ ಪೂಜೆ ನೆರವೇರಿಸಲಿದ್ದಾರೆ. 


'ಅಮೂಲ್ ಬಂಗಾಳ ಹೈನುಗಾರಿಕೆ ಯೋಜನೆ' ಅಡಿಯಲ್ಲಿ ಈ ಘಟಕವನ್ನು ನಿರ್ಮಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಸಹಕಾರ ಕ್ಷೇತ್ರದ ಪ್ರಮುಖರು ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಘಟಕಕ್ಕಾಗಿ ಅಮೂಲ್‌ ₹700 ಕೋಟಿ ಹೂಡಿಕೆ ಮಾಡುತ್ತಿದೆ ಎಂದು ಸಹಕಾರ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಘಟಕವು ಪ್ರತಿದಿನ 30 ಲಕ್ಷ ಲೀಟರ್‌ ಹಾಲನ್ನು ಸಂಸ್ಕರಿಸಿ, ಅಂದಾಜು 10 ಲಕ್ಷ ಕೆ.ಜಿ. ಮೊಸರನ್ನು ತಯಾರಿಸುವ ಸಾಮರ್ಥ್ಯ ಹೊಂದಿರಲಿದೆ.

ಈ ಘಟಕವು ನಿತ್ಯ 10 ಲಕ್ಷ ಲೀಟರ್ ಹಾಲು ಪ್ಯಾಕ್ ಮಾಡುವ, 1 ಲಕ್ಷ ಲೀಟರ್‌ ಐಸ್‌ಕ್ರೀಂ ಉತ್ಪಾದಿಸುವ, 20 ಟನ್ ಪನೀರ್, 10 ಟನ್ ತುಪ್ಪ, 10 ಟನ್ ಸಿಹಿ ತಿನಿಸುವ ಉತ್ಪಾದಿಸುವ ಸಾಮರ್ಥ್ಯವನ್ನು ಕೂಡ ಹೊಂದಿರಲಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries