HEALTH TIPS

ದೇಶದಲ್ಲಿ ಸೈಬರ್ ವಂಚನೆ ಮೂರು ಪಟ್ಟು ಹೆಚ್ಚಳ : ಲೋಕಸಭೆಗೆ ಕೇಂದ್ರ ಸರಕಾರ ಮಾಹಿತಿ

ನವದೆಹಲಿ: 2020ರಿಂದ 2024ರ ನಡುವೆ ದೇಶದಲ್ಲಿ ಸೈಬರ್ ವಂಚನೆಯ ಪ್ರಕರಣಗಳ ಸಂಖ್ಯೆ ಸರಿಸುಮಾರು ಮೂರು ಪಟ್ಟು ಹೆಚ್ಚಿದೆಯೆಂದು ಕೇಂದ್ರ ಸರಕಾರವು ಗುರುವಾರ ಲೋಕಸಭೆಗೆ ತಿಳಿಸಿದೆ.

2020ರಲ್ಲಿ 10,395 ಸೈಬರ್ ವಂಚನೆಯ ಪ್ರಕರಣಗಳು ವರದಿಯಾಗಿದ್ದರೆ, 2024ರಲ್ಲಿ 29,758ಕ್ಕೇರಿದೆ ಎಂದು ತಿಳಿಸಿದೆ. 


2024ರಲ್ಲಿ ವರದಿಯಾದ ವಿವಿಧ ಶ್ರೇಣಿಯ ಸೈಬರ್ ವಂಚನೆ ಪ್ರಕರಣಗಳ ಪೈಕಿ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಗರಿಷ್ಠ ವರದಿಯಾಗಿದ್ದು, ಅವುಗಳ ಸಂಖ್ಯೆ 4659 ಆಗಿದೆ.

ಈ ಅವಧಿಯಲ್ಲಿ ಕ್ರೆಡಿಟ್ ಹಾಗೂ ಡೆಬಿಟ್ ವಂಚನೆಯ ಪ್ರಕರಣಗಳು 3,829 ಆಗಿದ್ದು ಎರಡನೇ ಸ್ಥಾನದಲ್ಲಿವೆ. 3044 ಮಾರ್ಕೆಟಿಂಗ್ ಹಾಗೂ ಹೂಡಿಕೆ ವಂಚನೆ , 1659 ಎಟಿಎಂ ವಂಚನೆ, 1264 ವಂಚನೆಯ ಕರೆಗಳು, 1019 ಗೇಮಿಂಗ್ ಆಯಪ್ ಅಥವಾ ವೆಬ್‌ಸೈಟ್ ವಂಚನೆ, 965 ಓಟಿಪಿ ವಂಚನೆ ಹಾಗೂ 723 ಯುಪಿಐ ಅಥವಾ ಇ-ವಾಲ್ಲೆಟ್ ವಂಚನೆ ಪ್ರಕರಣಗಳು ವರದಿಯಾಗಿವೆ ಎಂದೆಉ ಕೇಂದ್ರ ಸರಕಾರ ತಿಳಿಸಿದೆ.

ಗೇಮಿಂಗ್ ಆಯಪ್ ಅಥವಾ ವೆಬ್‌ಸೈಟ್ ವಂಚನೆ, ಮಾರ್ಕೆಟಿಂಗ್ ಅಥವಾ ಹೂಡಿಕೆ ವಂಚನೆ, ವಂಚನೆಯ ಕರೆಗಳು ಮತ್ತು ಇ-ವ್ಯಾಲ್ಲೆಟ್ ಅಥವಾ ಯುಪಿಐ ವಂಚನೆ ಹಗರಣವನ್ನು 2024ರಿಂದೀಚೆಗೆ ಕಾಯ್ದುಕೊಂಡು ಬರಲಾಗುತ್ತಿದೆ.

2024ರಲ್ಲಿ ತೆಲಂಗಾಣದಲ್ಲಿ 18,992 ಪ್ರಕರಣಗಳು ವರದಿಯಾಗಿದ್ದು, ಇದು ದೇಶದಲ್ಲೇ ಗರಿಷ್ಠವಾಗಿದೆ. 4020 ಪ್ರಕರಣಗಳೊಂದಿಗೆ ಬಿಹಾರ ಹಾಗೂ 2,827 ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಆನಂತರದ ಸ್ಥಾನಗಳಲ್ಲಿವೆ.

ಸೈಬರ್ ಅಪರಾಧಗಳ ನಿರ್ವಹಣೆಗೆ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವನ್ನು ಸ್ಥಾಪಿಸಲಾಗಿದೆ. ಪೌರ ವಿತ್ತೀಯ ಸೈಬರ್ ವಂಚನೆ ಪ್ರಕರಣಗಳ ವರದಿ ಹಾಗೂ ನಿರ್ವಹಣೆ ವ್ಯವಸ್ಥೆಯನ್ನು 2021ರಲ್ಲಿ ಆರಂಭಿಸಲಾಗಿದೆ. ಸಂತ್ರಸ್ತರು ತಕ್ಷಣವೇ ದೂರು ನೀಡುವ ಮೂಲಕ, ವಂಚಕರು ಸೈಬರ್ ಅಪರಾಧಗಳ ಮೂಲಕ ಹಣವನ್ನು ಲಪಟಾಯಿಸುವುದನ್ನು ತಡೆಯಲು ಈ ವ್ಯವಸ್ಥೆಯ ಅವಕಾಶ ಮಾಡಿಕೊಡುತ್ತದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ವಂಚನೆ ವರದಿಗಾರಿಕೆ ವ್ಯವಸ್ಥೆಯು, 11,158 ಕೋಟಿಗೂ ಅಧಿಕ ಹಣವನ್ನು ಉಳಿಸಲು ನೆರವು ನೀಡುತ್ತಿದೆ ಎಂದು ಸರಕಾರವು ತಿಳಿಸಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries