HEALTH TIPS

ಅಮೆರಿಕದ ಕ್ಷಿಪಣಿ ಬತ್ತಳಿಕೆ ಕ್ಷೀಣಿಸುತ್ತಿದೆ : 'ವಾಶಿಂಗ್ಟನ್ ಪೋಸ್ಟ್ , ದಿ ಟೆಲಿಗ್ರಾಫ್ ' ವರದಿ

ವಾಷಿಂಗ್ಟನ್:: ಇರಾನ್‌ನಲ್ಲಿ ಅಮೆರಿಕದ ಸೇನಾ ಉದ್ದೇಶಗಳು ಇನ್ನೂ ಪೂರ್ಣಗೊಂಡಿಲ್ಲವೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಜೊತೆ ಮಾತುಕತೆ ಸಂದರ್ಭ ತಿಳಿಸಿರುವ ನಡುವೆಯೇ, ದಿ ವಾಶಿಂಗ್ಟನ್ ಪೋಸ್ಟ್ ಹಾಗೂ ದಿ ಟೆಲಿಗ್ರಾಫ್ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು, ಅಮೆರಿಕದ ಬತ್ತಳಿಕೆಯಲ್ಲಿ ಕ್ಷಿಪಣಿಗಳ ಸಂಗ್ರಹ ಕ್ಷೀಣಿಸುತ್ತಿರುವ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ. 


''ಅಮೆರಿಕವು ಇರಾನ್ ವಿರುದ್ಧ ವಿಸ್ತೃತವಾದ ಯುದ್ಧವನ್ನು ಸಾರಲು ಯೋಜನೆಯನ್ನು ಹೂಡಿದೆ. ಮಿಲಿಟರಿ ಕಾರ್ಯಾಚರಣೆಗಳನ್ನು ಸುಸ್ಥಿರವಾಗಿ ನಡೆಸಲು ನಮ್ಮಲ್ಲಿ ಸಾಕಷ್ಟು ಕ್ಷಿಪಣಿ ಸಂಗ್ರಹಗಳಿಲ್ಲ. ಆದರೆ ಈ ವಿಷಯವು ಶ್ವೇತಭವನಕ್ಕೆ ತಿಳಿದಿದೆಯೆಂದು ನಾನು ಭಾವಿಸುವುದಿಲ್ಲ'' ಎಂದು ಇರಾನ್ ಸಂಘರ್ಷದಲ್ಲಿ ಭಾಗಿಯಾಗಿರುವ ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು '' ದಿ ವಾಶಿಂಗ್ಟನ್ ಪೋಸ್ಟ್''ನ ವರದಿ ಬಹಿರಂಗಪಡಿಸಿದೆ.

ಇಂತಹ ಸನ್ನಿವೇಶದಲ್ಲಿ ಅಮೆರಿಕವು ತನ್ನ ಮಿಲಿಟರಿ ಕಾರ್ಯಾಚರಣೆಗಳನ್ನು ಇನ್ನಷ್ಟು ವಿಸ್ತರಿಸಿದಲ್ಲಿ , ವಾಯುರಕ್ಷಣಾ ಪ್ರತಿಬಂಧಕಗಳು ಹಾಗೂ ಕರಾರುವಕ್ಕಾಗಿ ಕಾರ್ಯವೆಸಗುವಂತಹ ಯುದ್ಧಸಾಮಾಗ್ರಿಗಳ ಕೊರತೆಯನ್ನು ಸೃಷ್ಟಿಯಾಗಲಿದೆ. ಅಲ್ಲದೆ ಹೆಚ್ಚುವರಿ ಪಡೆಗಳನ್ನು , ಸೇನಾ ವಿಮಾನಗಳನ್ನು ಹಾಗೂ ಯುದ್ಧಸಾಮಾಗ್ರಿಗಳನ್ನು ಕ್ಷಿಪ್ರವಾಗಿ ನಿಯೋಜಿಸುವ ಅಮೆರಿಕ ಸೇನೆಯ ಸಾಮರ್ಥ್ಯವನ್ನು ಸೀಮಿತಗೊಳಿಸಲಿದೆ ಎಂದು ವರದಿ ತಿಳಿಸಿದೆ.

ಒಂದು ವೇಳೆ ಇರಾನ್ ಜೊತೆಗಿನ ಸಂಘರ್ಷ ಇನ್ನಷ್ಟು ಉಲ್ಬಣಗೊಂಡಲ್ಲಿ , ಅದನ್ನು ಎದುರಿಸಲು ಅಮೆರಿಕನ್ ಪಡೆಗಳು ಸಮರ್ಪಕವಾಗಿ ಸಿದ್ಧತೆಯನ್ನು ಮಾಡಿಕೊಂಡಿಲ್ಲವೆಂದು ಆಯಕಟ್ಟಿನ ಹಾಗೂ ಇಂಟರ್‌ನ್ಯಾಶನಲ್ ಅಧ್ಯಯನಗಳ ಕೇಂದ್ರ (ಸಿಎಸ್‌ಐಎಸ್)ನ ರಕ್ಷಣಾ ಹಾಗೂ ಭದ್ರತಾ ಅಧ್ಯಯನ ವಿಭಾಗದ ವರಿಷ್ಠ ಸೇಥ್ ಜೋನ್ಸ್ ತಿಳಿಸಿದ್ದಾರೆ.

ಇರಾನ್‌ನಲ್ಲಿ ಭೂಸೇನಾ ಪಡೆಗಳನ್ನು ನಿಯೋಜಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲವೆಂದು ಅಧ್ಯಕ್ಷ ಡೊನಾಲ್ಡ್‌ಟ್ರಂಪ್ ಕಳೆದ ವಾರ ಹೇಳಿಕೆ ನೀಡಿದ್ದರು. ಈ ಬಗ್ಗೆ ವಾಶಿಂಗ್ಟನ್ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ಜೋನ್ಸ್ ಅವರು ಹಾರ್ಮುಝ್ ಜಲಸಂಧಿಯ ದ್ವೀಪಗಳಲ್ಲಿ ಅಥವಾ ಸಮುದ್ರತಟದಲ್ಲಿ ಅಮೆರಿಕದ ಭೂಸೇನಾ ಪಡೆಗಳನ್ನು ನಿಯೋಜಿಸಿದಲ್ಲಿ ಭಾರೀ ಪ್ರಮಾದವಾಗಲಿ ಎಂದು ಹೇಳಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries