ಕೊಲ್ಲೂರು: ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಇಂದು ಬೆಳಿಗ್ಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು. ಮುಖ್ಯಮಂತ್ರಿಯನ್ನು ದೇವಾಲಯದ ಟ್ರಸ್ಟ್ ಸದಸ್ಯರು ಬರಮಾಡಿಕೊಂಡು ಪೂರ್ಣ ಕುಂಭ ಅರ್ಪಿಸಿದರು. ಇಂದು ಬೆಳಿಗ್ಗೆ 6 ಗಂಟೆಗೆ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದರು.
ಮುಖ್ಯಮಂತ್ರಿಯಾದ ನಂತರ ವಿ.ಡಿ. ಸತೀಶನ್ ಕೊಲ್ಲೂರಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಕೊಲ್ಲೂರು ತಲುಪಿದ ನಂತರ, ಅವರು ದೇವಾಲಯದಲ್ಲಿ ನಡೆದ ವಿಶೇಷ ಚಂಡಿಕಾ ಹೋಮದಲ್ಲಿಯೂ ಭಾಗವಹಿಸಿದರು. ಮುಖ್ಯಮಂತ್ರಿಗಳು ಇಡೀ ಅವಧಿಯವರೆಗೆ ಚಂಡಿಕಾ ಹೋಮ ಸಮಾರಂಭಗಳಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಹಿಂತಿರುಗಿದರು.
ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆ. ಬಾಬು ಶೆಟ್ಟಿ, ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಸುರೇಂದ್ರ ಶೆಟ್ಟಿ, ಸುಧಾ, ಧನಾಕ್ಷಿ ವಿಶ್ವನಾಥ್, ಮಹಾಲಿಂಗ ನಾಯಕ್, ಮತ್ತಿತರರು ಇದ್ದರು. ದೇವಳದ ಅರ್ಚಕ ಡಾ.ಕೆ.ಎನ್ ನರಸಿಂಹ ಅಡಿಗ ಹಾಗೂ ಕೆಎನ್ ಸುಬ್ರಮಣ್ಯ ಅಡಿಗ ನೇತೃತ್ವದಲ್ಲಿ ಮುಖ್ಯಮಂತ್ರಿಗಳು ವಿಶೇಷ ಪೂಜೆ ಸಲ್ಲಿಸಿದರು ದೇವಳದ ವತಿಯಿಂದ ಮುಖ್ಯಮಂತ್ರಿ ಅವರನ್ನು ಸನ್ಮಾನಿಸಲಾಯಿತು.



