HEALTH TIPS

ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ-ನವಾಗತರ ಸ್ವಾಗತ ಸಮಾರಂಭ

ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯಾ ಕ್ಯಾಂಪಸ್‍ನಲ್ಲಿ 2026-27ನೇ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು,  ಪೆರಿಯಾದಲ್ಲಿರುವ ಮುಖ್ಯ ಕ್ಯಾಂಪಸ್‍ನ ಜೊತೆಗೆ, ತಿರುವಲ್ಲಾದಲ್ಲಿರುವ ಕಾನೂನು ವಿಭಾಗದ ಕ್ಯಾಂಪಸ್‍ಗೆ ವಿದ್ಯಾರ್ಥಿಗಳ ಪ್ರವೇಶಾತಿ ನಡೆಯಿತು. 


ಪೆರಿಯಾ ಕ್ಯಾಂಪಸ್‍ಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಪರೀಕ್ಷಾ ನಿಯಂತ್ರಕ ಡಾ. ಆರ್. ಜಯಪ್ರಕಾಶ್ ಮತ್ತು ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪೆÇ್ರ. ರಾಜೇಂದ್ರ ಪಿಲಾಂಕಟ್ಟೆ ಅವರ ನೇತೃತ್ವದಲ್ಲಿ ಸ್ವಾಗತಿಸಲಾಯಿತು. ವಿವಿಧ ರಾಜ್ಯಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ಸುಗಮಗೊಳಿಸಲು ಉಪಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಮತ್ತು ಪ್ರಭಾರ ಕುಲಸಚಿವ ಪೆÇ್ರ. ವಿ.ಬಿ. ಸಮೀರ್ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ವ್ಯಾಪಕ ವ್ಯವಸ್ಥೆಯನ್ನು ಕ್ಯಾಂಪಸ್‍ನಲ್ಲಿ ನಡೆಸಲಾಗಿತ್ತು. 

ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ನೇತೃತ್ವದಲ್ಲಿ ಸಹಾಯವಾಣಿ ಕೇಂದ್ರ ಮತ್ತು ಮುಖ್ಯ ದ್ವಾರದಿಂದ ಕಚೇರಿಗೆ ತೆರಳಲು ಬಸ್ ವ್ಯವಸ್ಥೆ ಆಯೋಜಿಸಲಾಗಿತ್ತು.  ರಜೆಯ ನಂತರ ಎರಡನೇ ವರ್ಷದ ವಿದ್ಯಾರ್ಥಿಗಳ ತಂಡವೂ ಕ್ಯಾಂಪಸ್‍ಗೆ ಆಗಮಿಸಿತ್ತು.  ಮುಂದಿನ ದಿನಗಳಲ್ಲಿ ತರಗತಿಗಳ ಆರಂಭಕ್ಕಾಗಿ ಓರಿಯಂಟೇಶನ್ ಕಾರ್ಯಕ್ರಮ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ. 


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries