HEALTH TIPS

ಖಾರ್ಗ್ ದ್ವೀಪದ ತಂಟೆಗೆ ಬರಬೇಡಿ: ಅಮೆರಿಕಾಗೆ ಇರಾನ್ ಎಚ್ಚರಿಕೆ

ಟೆಹರಾನ್ : ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳಲು ಅಮೆರಿಕ ಯತ್ನಿಸಿದರೆ, ಆ ಆಯಕಟ್ಟಿನ ತೈಲ ಕೇಂದ್ರವನ್ನು ಗುರಿಯಾಗಿಸಿಕೊಂಡು ಮಾಡುವ ಯಾವುದೇ ದುಸ್ಸಾಹಸಕ್ಕೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇರಾನ್ ಅಮೆರಿಕಗೆ ಎಚ್ಚರಿಕೆ ನೀಡಿದೆ.


ಅಮೆರಿಕ ಪಡೆಗಳು ನೆಲದ ಮೂಲಕ ಆಕ್ರಮಣ ನಡೆಸಿದರೆ, ಅವರನ್ನು `ಸ್ವಾಗತಿಸಲು' ಕ್ಷಣಗಣನೆ ಮಾಡುತ್ತಿರುವ ನಾಯಕರು ಇರಾನ್ನಲ್ಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ಬುಶೆಹ್ರ್ ಪ್ರಾಂತದ ಇರಾನ್ ಕರಾವಳಿಯಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ಖಾರ್ಗ್ ದ್ವೀಪವು, ಇರಾನ್‌ನ ತೈಲ ರಫ್ತು ಮೂಲಸೌಕರ್ಯದ ಪ್ರಮುಖ ಕೇಂದ್ರವಾಗಿದೆ. ಪ್ರಸ್ತುತ ಸಂಘರ್ಷದ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ದ್ವೀಪವನ್ನು ವಶಪಡಿಸಿಕೊಳ್ಳುವುದಾಗಿ ಹಲವು ಬಾರಿ ಎಚ್ಚರಿಸಿದ್ದಾರೆ.

ಕ್ಷಿಪಣಿ ದಾಳಿ : ಹಾರ್ಮುಝ್ ಜಲಸಂಧಿಯಲ್ಲಿ ನೌಕೆಗೆ ಬೆಂಕಿ

ಹಾರ್ಮುಝ್ ಜಲಸಂಧಿಯಲ್ಲಿ ಕ್ಷಿಪಣಿಯೊಂದು ಅಪ್ಪಳಿಸಿದ ನಂತರ ಹಡಗೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಯುನೈಟೆಡ್ ಕಿಂಗ್ಡಮ್ ಮಾರಿಟೈಮ್ ಟ್ರೇಡ್ ಆಪರೇಷನ್ಸ್ (ಯುಕೆಎಂಟಿಒ) ತಿಳಿಸಿದೆ. ಈ ದಾಳಿಯು ಒಮಾನ್ನ ಕುಮ್ಜಾರ್ನ ವಾಯುವ್ಯಕ್ಕೆ ಸುಮಾರು 8 ನಾಟಿಕಲ್ ಮೈಲಿ ದೂರದಲ್ಲಿ ನಡೆದಿದೆ.

ಸಿಬ್ಬಂದಿ ಸುರಕ್ಷಿತವಾಗಿ ಹಡಗಿನಿಂದ ಹೊರಬಂದಿದ್ದು, ಅವರನ್ನು ಟಗ್ ಬೋಟ್ ಮೂಲಕ ರಕ್ಷಿಸಲಾಗಿದೆ. ಬೆಂಕಿ ಇನ್ನೂ ಉರಿಯುತ್ತಿದ್ದು, ಹಡಗು ನೀರಿನಲ್ಲಿ ನಿಯಂತ್ರಣವಿಲ್ಲದೆ ತೇಲುತ್ತಿದೆ. ಈ ಪ್ರದೇಶದಲ್ಲಿ ಸಂಚರಿಸುವ ಹಡಗುಗಳು ಎಚ್ಚರಿಕೆಯಿಂದ ಇರುವಂತೆ ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಗಳಿದ್ದರೆ ವರದಿ ಮಾಡುವಂತೆ ಸೂಚಿಸಿರುವುದಾಗಿ ಸಂಸ್ಥೆ ತಿಳಿಸಿದೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries