HEALTH TIPS

ಇರಾನ್ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ : ಸೈನಿಕರ ಸಾವಿಗೆ ಪ್ರತೀಕಾರ ; ಅಮೆರಿಕ ಸೇನೆ ಹೇಳಿಕೆ

 ವಾಶಿಂಗ್ಟನ್ : ಇರಾನ್ ವಿರುದ್ಧ ರವಿವಾರ ಹೊಸ ವೈಮಾನಿಕ ದಾಳಿಗಳನ್ನು ನಡೆಸಿರುವುದಾಗಿ ಅಮೆರಿಕ ಸೇನೆ ತಿಳಿಸಿದೆ. ಜೋರ್ಡಾನ್‍ನಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಅಮೆರಿಕನ್ ಸೈನಿಕರು ಸಾವನ್ನಪ್ಪಿ, ಒಬ್ಬರು ನಾಪತ್ತೆಯಾಗಿದ್ದು, ನಾಲ್ವರು ಆಸ್ಪತ್ರೆಗೆ ದಾಖಲಾಗಬೇಕಾದ ಘಟನೆಗೆ ಇರಾನ್‍ನ ರೆವಲ್ಯೂಷನರಿ ಗಾರ್ಡ್ (ಐಆರ್‍ಜಿಸಿ) ಅನ್ನು ತ್ವರಿತವಾಗಿ ಶಿಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಹೇಳಿದೆ. 


ಹಾರ್ಮುಝ್ ಜಲಸಂಧಿಯ ಮೂಲಕ ತೈಲ ಟ್ಯಾಂಕರ್‌ಗಳ ಸಂಚಾರವನ್ನು ನಿರ್ಬಂಧಿಸುವ ಇರಾನ್‍ನ ಸಾಮರ್ಥ್ಯವನ್ನು ಇನ್ನಷ್ಟು ಕುಗ್ಗಿಸಲು ಈ ದಾಳಿಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.

ಹಾರ್ಮುಝ್ ಜಲಸಂಧಿಯ ಸಮೀಪವಿರುವ ಸಿರಿಕ್ ಎಂಬ ಪ್ರದೇಶದ ಮೇಲೆ ರವಿವಾರ ಬೆಳಗಿನ ಜಾವ 1:30ರ ಸುಮಾರಿಗೆ ದಾಳಿ ನಡೆದಿದೆ. ಅದೇ ಪ್ರಾಂತದ ಹಾಜಿಯಾಬಾದ್ ಸಮೀಪದ ಸ್ಥಳವನ್ನು, ಜಲಸಂಧಿಯ ಒಳಗಿರುವ ಕೇಶ್ಮ್ ದ್ವೀಪದ ಸಮೀಪವಿರುವ ಪ್ರದೇಶವನ್ನೂ ಗುರಿಯಾಗಿಸಲಾಗಿತ್ತು ಮತ್ತು ಬಂದರ್ ಅಬ್ಬಾಸ್‍ನಲ್ಲಿ ಸ್ಫೋಟದ ಶಬ್ದಗಳು ಕೇಳಿಬಂದವು ಎಂದು ಇರಾನ್‍ನ ಮಾಧ್ಯಮಗಳು ವರದಿ ಮಾಡಿವೆ. ನಿರ್ಮಾಣ ಹಂತದಲ್ಲಿದ್ದ ಡಾರ್ಖೋವಿನ್ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಅಮೆರಿಕ ವೈಮಾನಿಕ ದಾಳಿ ಮಾಡಿದೆ ಎಂದು ಟೆಹ್ರಾನ್‍ನ ಪರಮಾಣು ಇಂಧನ ಸಂಸ್ಥೆ ತಿಳಿಸಿದೆ.

ಯುದ್ಧ ಆರಂಭವಾದಾಗಿನಿಂದ ಅಮೆರಿಕದ ದಾಳಿಯಲ್ಲಿ ಕನಿಷ್ಠ 50 ಜನರು ಮೃತಪಟ್ಟಿದ್ದಾರೆ ಮತ್ತು 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.

ಐಆರ್‌ಜಿಸಿ ನೆಲೆಗಳ ಮೇಲೆ ದಾಳಿ

ಐಆರ್‌ಜಿಸಿಯನ್ನು ಗುರಿಯಾಗಿಸಿಕೊಂಡು ಅಮೆರಿಕದ ಮಿಲಿಟರಿ ರವಿವಾರ ವೈಮಾನಿಕ ದಾಳಿ ನಡೆಸಿದೆ. ಯುದ್ಧ ವಿಮಾನಗಳು ಮತ್ತು ಸಮುದ್ರದಿಂದ ಉಡಾಯಿಸಲಾದ ಟೊಮಾಹಾಕ್ ಕ್ರೂಸ್ ಕ್ಷಿಪಣಿಗಳ ಮೂಲಕ ದಾಳಿ ನಡೆಸಿರುವ ವೀಡಿಯೊವನ್ನು ಅಮೆರಿಕ ಮಿಲಿಟರಿ ಬಿಡುಗಡೆ ಮಾಡಿದೆ. ದಾಳಿಗೆ ಒಳಗಾದ ಒಂದು ಸ್ಥಳವು ಪರ್ವತ ಪ್ರದೇಶದ ಕಣಿವೆಯಲ್ಲಿರುವಂತೆ ತೋರುತ್ತಿದೆ. ಐಆರ್‌ಜಿಸಿ ಸಾಮಾನ್ಯವಾಗಿ ಪರ್ವತ ಶ್ರೇಣಿಗಳ ನಡುವೆ ತನ್ನ ಕ್ಷಿಪಣಿ ನೆಲೆಗಳನ್ನು ಮತ್ತು ಇತರ ಮಿಲಿಟರಿ ಉಪಕರಣಗಳನ್ನು ಮರೆಮಾಡಿಟ್ಟಿರುತ್ತದೆ.

ಅಮೆರಿಕದ ದಾಳಿಗೆ ತನ್ನ ಪ್ರತೀಕಾರ ದಾಳಿಯನ್ನು ಇರಾನ್ ಇಡೀ ಪ್ರದೇಶದಾದ್ಯಂತ ಮುಂದುವರಿಸಿದ್ದು ರವಿವಾರ ಕುವೈತ್ ಮತ್ತು ಬಹರೈನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆದಿರುವುದಾಗಿ ವರದಿಯಾಗಿದೆ.

ಇರಾನ್‍ನ ವೈಮಾನಿಕ ದಾಳಿಗಳಿಗೆ ತಮ್ಮ ಮಿಲಿಟರಿಗಳು ಪ್ರತಿಕ್ರಿಯಿಸುತ್ತಿವೆ ಎಂದು ಎರಡೂ ದೇಶಗಳು ರವಿವಾರ ತಿಳಿಸಿವೆ. ಕುವೈತ್ ಸಿಟಿಯಲ್ಲಿ ಮುನ್ನೆಚ್ಚರಿಕೆ ಸೈರನ್‍ಗಳನ್ನು ಮೊಳಗಿಸಲಾಗಿದೆ. ಕುವೈತ್‍ನ ಕ್ಯಾಂಪ್ ಉದೈರಿಯಲ್ಲಿನ ಅಮೆರಿಕ ಮಿಲಿಟರಿಯ ಯುದ್ಧಸಾಮಗ್ರಿ ಡಿಪೋ ಮತ್ತು ಅಲಿ ಅಲ್ ಸಲೇಮ್ ವಾಯುನೆಲೆಯಲ್ಲಿನ ಪೇಟ್ರಿಯಾಟ್ ರಾಡಾರ್ ವ್ಯವಸ್ಥೆ ಹಾಗೂ ವಾಯು ಕಣ್ಗಾವಲು ರಾಡಾರ್ ವಿರುದ್ಧ ಡ್ರೋನ್ ದಾಳಿ ನಡೆಸಲಾಗಿದೆ. ಕುವೈತ್‍ನ ವಿದ್ಯುತ್ ಮತ್ತು ನೀರು ಸರಬರಾಜು ಸ್ಥಾವರದ ಮೇಲೆ ಇರಾನ್ ಸತತ ಎರಡನೆ ದಿನವಾದ ರವಿವಾರವೂ ದಾಳಿ ನಡೆಸಿದ್ದು ಬೆಂಕಿ ಅವಘಡಕ್ಕೆ ಕಾರಣವಾಗಿದೆ ಎಂದು ಕುವೈತ್ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದ ಐದನೇ ನೌಕಾಪಡೆಯನ್ನು ಹೊಂದಿರುವ ಬಹರೈನ್‌ ರಾಜಧಾನಿ ಮನಾಮಾದಲ್ಲಿ ಮುನ್ನೆಚ್ಚರಿಕೆ ಸೈರನ್ ಮೊಳಗಿದ ನಂತರ, ಬಹ್ರೇನ್‍ನ ಉತ್ತರದ ಭಾಗದಲ್ಲಿ ಸ್ಫೋಟದ ಸದ್ದುಗಳು ಕೇಳಿಸಿದವು ಎಂದು ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries