ಮುಳ್ಳೇರಿಯ: ಗಾಡಿಗುಡ್ಡೆ ಸನಿಹದ ತಲೆಬೈಲು ನಿವಾಸಿ ರೋಬರ್ಟ್ ಕ್ರಾಸ್ತ (50)ಅವರ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೂಲಿ ಕಾರ್ಮಿಕನಾಗಿದ್ದ ಇವರು ಅವಿವಾಹಿತರಾಗಿದ್ದರು. ಶುಕ್ರವಾರ ಬೆಳಗ್ಗೆ ಇವರು ಬಹಳ ಹೊತ್ತಿನ ವರೆಗೂ ಹೊರಗೆ ಕಾಣಿಸದಿದ್ದಾಗ ಸಂಬಂಧಿಕರು ತೆರಳಿ ನೋಡಿದಾಗ ಮನೆಯೊಳಗೆ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ರೋಬರ್ಟ್ ಕ್ರಾಸ್ತ ಪತ್ತೆಯಾಗಿದ್ದರು. ತಕ್ಷಣ ಇವರನ್ನುನೇಣಿನಿಂದ ಕೆಳಗಿಳಿಸಿ ಮುಳ್ಳೇರಿಯದ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಂತೆ ಮೃತಪಟ್ಟಿದ್ದಾರೆ. ಮೃತದೇಹ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವಮಹಜರು ನಡೆಸಲಾಯಿತು. ಬದಿಯಡ್ಕ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


