ಬದಿಯಡ್ಕ: ಕೇರಳ ರಾಜ್ಯ ಪಿಂಚಣಿದಾರರ ಸಂಘದ ಚೆಂಗಳ ಘಟಕದ ಸಮ್ಮೇಳನ ಭಾನುವಾರ ಎಡನೀರಿನಲ್ಲಿ ನಡೆಯಿತು. ಜಿಲ್ಲಾ ಉಪಾಧ್ಯಕ್ಷ ಪಿ ಸೀತಾರಾಮ ರಾವ್ ಔಪಚಾರಿಕವಾಗಿ ಉದ್ಘಾಟಿಸಿ ಸಂಘಟನೆಯ ಉದ್ದೇಶ ಹಾಗೂ ಕಾರ್ಯಚಟುವಟಿಕೆಗಳ ಕುರಿತು ತಿಳಿಸಿದರು. ಹಿರಿಯರಾದ ಮಾಧವ ಹೇರಳ ಮಾತನಾಡಿ, ಪಿಂಚಣಿದಾರರು ಸಂಘಟನೆಯ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಬದಲಾದ ಪರಿಸ್ಥಿತಿಯಲ್ಲಿ ಪಂಚಾಯತಿನ ವಿವಿಧ ಭಾಗಗಳಲ್ಲಿರುವ ಸದಸ್ಯರನ್ನು ಸಂಪರ್ಕಿಸಿ ಸಂಘಟನಾತ್ಮಕವಾಗಿ ಬೆಳೆಯಬೇಕು ಎಂದು ಕರೆನೀಡಿದರು.
ನಿವೃತ್ತ ಡಿಇಒ ವೇಣುಗೋಪಾಲ ಎಡನೀರು ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೂ ಸಂಘಟನೆಯನ್ನು ಬಲಪಡಿಸಲು ಒಂದಷ್ಟು ಸಮಯವನ್ನು ಕಂಡುಕೊಳ್ಳಬೇಕು ಎಂದು ತಿಳಿಸಿದರು. ಪ್ರಭಾವತಿ ಕೆದಿಲಾಯ ಪುಂಡೂರು, ಶಾರದಾ, ಕಲಾವತಿ, ಮಹಾಲಿಂಗೇಶ್ವರ ಣಟ್, ಕೃಷ್ಣೋಜಿರಾವ್, ಗೋಪಾಲ ಮಾಸ್ತರ್ ಮೊದಲಾದವರು ಉಪಸ್ಥಿತರಿದ್ದರು. ವೆಂಕಟ್ರಮಣ ಕೆದಿಲಾಯ ಅಧ್ಯಕ್ಷತೆ ವಹಿಸಿದ್ದರು. ಗಂಗಾಧರ ನೆಕ್ರಾಜೆ ಸ್ವಾಗತಿಸಿ, ಶಾರದಾ ಮೊಳೆಯಾರ ವಂದಿಸಿದರು.

.jpg)
.jpg)
