ಬದಿಯಡ್ಕ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾಸರಗೋಡು ಹಾಗೂ ಜಿ.ಎಚ್.ಎಸ್. ಪೆರಡಾಲ ಶಾಲೆಯ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಜಿ.ಎಚ್.ಎಸ್. ಪೆರಡಾಲ ಶಾಲೆಯ ಮುಖ್ಯೋಪಾಧ್ಯಾಯಿನಿ ಸೌರಭಾ ಪಿ. ಅವರು ಉದ್ಘಾಟಿಸಿದರು. ಡಿ.ಎಲ್.ಎಸ್.ಎ. ಪಿ.ಎಲ್.ವಿ.ಯ ಕೃಷ್ಣವೇಣಿ ಅವರು ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ತಯಾರಿಸಿ, ಕಾರ್ಯಕ್ರಮದ ಸಂಯೋಜನೆ ನಡೆಸಿಕೊಟ್ಟರು. ಸ್ಪರ್ಧೆಯಲ್ಲಿ ಒಟ್ಟು 25 ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದು, ಶಾಲೆಯ ಇಬ್ಬರು ಶಿಕ್ಷಕರು ಸ್ಪರ್ಧೆಯ ನಿರ್ವಹಣೆಗೆ ಸಹಕರಿಸಿದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಬಹುಮಾನ, ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಬಹುಮಾನ ಹಾಗೂ ಓರ್ವ ವಿದ್ಯಾರ್ಥಿ ತೃತೀಯ ಬಹುಮಾನವನ್ನು ಪಡೆದುಕೊಂಡರು.

.jpg)
