HEALTH TIPS

ವಿಕಲಚೇತನ ಬಾಲಕಿಗೆ ಲೈಂಗಿಕ ಕಿರುಕುಳ-ಐವರ ವಿರುದ್ಧ ಪೋಕ್ಸೋ ಕೇಸು


ಕಾಸರಗೋಡು
: ಹದಿನೇಳರ ಹರೆಯದ ವಿಕಲ ಚೇತನ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಬೇಕಲ ಠಾಣೆ ಪೆÇೀಲೀಸರು ಐವರ ವಿರುದ್ಧ ಫೆÇೀಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ. ವೆಲ್ಫೇರ್ ಸಮಿತಿ ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ.

ಪಳ್ಳಿಕ್ಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕಿ ದೌರ್ಜನ್ಯಕ್ಕೀಡಾಗಿದ್ದು, ಆರಂಭದಲ್ಲಿ ಬಾಲಕಿಗೆ ಆಟೋ ಚಾಲಕನೊಬ್ಬ ಕಿರುಕುಳ ನೀಡಿದ್ದು,  ಅನಂತರ ಈ ಚಾಲಕನ ಸ್ನೇಹಿತ ಸೇರಿದಂತೆ ಇತರ ನಾಲ್ಕು ಮಂದಿ ದೌರ್ಜನ್ಯವೆಸಗಿರುವುದಾಗಿ ಬಾಲಕಿ ದೂರಿದ್ದಾಳೆ.  ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಾಹಿತಿಯನ್ನು ಚೈಲ್ಡ್ ವೆಲ್ಫೇರ್ ಸಮಿತಿಗೆ ತಿಳಿಸಲಾಗಿತ್ತು. ಸಮಿತಿ ನೇತೃತ್ವದಲ್ಲಿ ಇತ್ತೀಚೆಗೆ ಬಾಲಕಿಯನ್ನು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಕಿರುಕುಳ ನೀಡಿರುವ ಮಾಹಿತಿ ಲಭಿಸಿದೆ. ಈ ಬಗ್ಗೆ ವರದಿ ಲಭಿಸಿದ ಬಳಿಕ ಬೇಕಲ ಠಾಣೆ ಪೆÇಲೀಸರು 5 ಪೆÇೀಕ್ಸೋ ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಹಚ್ಚುವ ನಿಟ್ಟಿನಲ್ಲಿ ಕಿರುಕುಳಕ್ಕೊಳಗಾದ ಬಾಲಕಿಯಿಂದ ಸಮಗ್ರ ಹೇಳಿಕೆ ದಾಖಲಿಸಿಕೊಳ್ಳಲು ಪೆÇಲೀಸರು ತೀರ್ಮಾನಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries