ವರದಿಯ ಪ್ರಕಾರ, ಕಳೆದ ಒಂದು ವಾರದ ಅವಧಿಯಲ್ಲಿ ಇದೇ ಕೇಂದ್ರದ ಮೇಲೆ ಅಮೆರಿಕ ನಡೆಸಿದ ಮೂರನೇ ದಾಳಿ ಇದಾಗಿದೆ.
ದಕ್ಷಿಣ ಇರಾನ್‌ನ ಬಂದರ್ ಅಬ್ಬಾಸ್ ಪ್ರದೇಶದ ಅಧಿಕಾರಿಗಳ ಪ್ರಕಾರ, ವಿದ್ಯುತ್ ಸೌಲಭ್ಯಗಳು, ರೈಲು ನಿಲ್ದಾಣ ಹಾಗೂ ನಾಗರಿಕರ ಮೂಲಸೌಕರ್ಯಗಳ ಮೇಲೆ ದಾಳಿ ನಡೆದಿದೆ.
ಇರಾನ್ ವಿರುದ್ಧದ ಇತ್ತೀಚಿನ ಪ್ರಮುಖ ದಾಳಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಇರಾನ್‌ನಿಂದ ಪ್ರತಿದಾಳಿ
ಅಮೆರಿಕದ ದಾಳಿಗೆ ಪ್ರತಿಯಾಗಿ ಬಹರೈನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯ ದಾಳಿ ನಡೆಸಿರುವುದಾಗಿ ಇರಾನ್ ಸೇನೆಯು ಹೇಳಿದೆ. ಮತ್ತೊಂದೆಡೆ, ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳಿಗೆ ಪ್ರತಿಕ್ರಿಯೆ ನೀಡುತ್ತಿರುವುದಾಗಿ ಕುವೈತ್ ಸೇನೆ ತಿಳಿಸಿದೆ.
"ಇರಾನ್‌ನಿಂದ ಬಂದ ಕ್ಷಿಪಣಿಗಳನ್ನು ತಡೆದ ವೇಳೆ ಅವುಗಳ ಅವಶೇಷಗಳು ಬಿದ್ದು ಮಗುವೊಂದು ಗಾಯಗೊಂಡಿದೆ" ಎಂದು ಖತರ್ ಅಧಿಕಾರಿಗಳು ತಿಳಿಸಿದ್ದಾರೆ.

