ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತೀ ಸ್ಮೃತಿ ಮಂದಿರದಲ್ಲಿ ಜರುಗಿತು.
ಪೆರ್ಲ ಶ್ರೀ ಸತ್ಯಸಾಯಿ ಸೇವಾ ಸಮಿತಿ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದ ಅರ್ಚಕ ಪ್ರಭಾಕರ ಕಾರಂತ ಹಾಗು ಉಡುವ ಶಂಕರನಾರಾಯಣ ಹೇರಳ ಅವರು ದೀಪಪ್ರಜ್ವಲನೆಯ ಮೂಲಕ ಶಿಬಿರ ಉದ್ಘಾಟಿಸಿದರು.
ಶಿಬಿರದ ವೈದ್ಯರಾದ ಡಾ. ಕೃಷ್ಣಮೋಹನ ಪೆರ್ಲ, ಡಾ. ಸತ್ಯನಾರಾಯಣ ರೋಗಿಗಳ ತಪಾಸಣೆ ನಡೆಸಿದರು. ವೆಂಕಟೇಶ ಶೆಣೈ ಕುಂಬ್ಳೆ, ವೆಂಕಟಕೃಷ್ಣ ಭಟ್, ಸತ್ಯನಾರಾಯಣ ಹೆಗಡೆ, ಕಿಶೋರ್ ಹೇರಳ ಉಡುವ ಶಿಬಿರದಲ್ಲಿ ಸಹಕರಿಸಿದರು.
ಎಲ್ಲಾ ರೋಗದ ತಪಾಸಣೆಯ ಜತೆಗೆ ರೋಗಿಗಳಿಗೆ ಔಷಧವನ್ನು ಉಚಿತವಾಗಿ ವಿತರಿಸಲಾಯಿತು. ಶ್ರೀ ಗೋಪಾಲಕೃಷ್ಣ ಫಾರ್ಮ್ ಸಿ ಕುಂಬಳೆ, ಡಾಕ್ಟರ್ ರವಿ ನಾರಾಯಣ ,ಸಂಜೀವಿನಿ ಕ್ಲಿನಿಕ್ ನೆಹರು ನಗರ ಪುತ್ತೂರು , ಶ್ರೀ ಸದ್ಗುರು ಡಿಸ್ಟ್ರಿಬ್ಯೂಟಸ್ರ್ಲ ಸುಮತಿ ಕಾಂಪ್ಲೆಕ್ಸ್ ಕಬಕ, ಸಿ. ಕೇಮ್. ಫಾರ್ಮಸಿ ಬೆಂಗಳೂರು ಇವರು ಔಷದವನ್ನು ಉಚಿತವಾಗಿ ಪೂರೈಸಿದ್ದರು. ಪ್ರತಿಷ್ಠಾನ ದ ಅದ್ಯಕ್ಷ ರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಸುಮಿತ್ರಾ ಮಯ್ಯ ಸಹಕರಿಸಿದರು.



