HEALTH TIPS

ಪಾಸ್‌ವರ್ಡ್‌ ಮರೆತುಹೋದ್ರೂ, ಫೋನ್ ಕಳೆದುಹೋದ್ರೂ ಚಿಂತೆ ಇಲ್ಲ: ಗೂಗಲ್ ಅಕೌಂಟ್ ರಿಕವರಿಗೆ ಬಂತು ಸೆಲ್ಫಿ ವೀಡಿಯೋ ಫೀಚರ್!

ನಿಮ್ಮ ಗೂಗಲ್ ಅಕೌಂಟ್‌ನ ಪಾಸ್‌ವರ್ಡ್ ಮರೆತುಹೋಗಿದೆಯೇ? ಅಷ್ಟೇ ಅಲ್ಲದೆ, ಅಕೌಂಟ್‌ಗೆ ಲಿಂಕ್ ಮಾಡಿದ್ದ ಹಳೆಯ ಮೊಬೈಲ್ ಫೋನ್ ಕೂಡ ನಿಮ್ಮ ಬಳಿ ಇಲ್ವಾ? ಚಿಂತಿಸಬೇಕಾದ ಅಗತ್ಯವಿಲ್ಲ. ಇದೀಗ ಗೂಗಲ್ ಅಕೌಂಟ್ ಲಾಗಿನ್ ಹಾಗೂ ಅಕೌಂಟ್ ರಿಕವರಿ ಪ್ರಕ್ರಿಯೆಯನ್ನು ಗೂಗಲ್‌ ಮತ್ತಷ್ಟು ಸರಳಗೊಳಿಸಿದೆ.

ಯೂಸರ್‌ಗಳ ಖಾತೆಯ ಭದ್ರತೆಗಾಗಿ ಗೂಗಲ್ "ಸೆಲ್ಫಿ ವೀಡಿಯೋ" (Selfie Video) ಎಂಬ ಹೊಸ ಸೆಕ್ಯುರಿಟಿ ಫೀಚರ್ ಅನ್ನು ಪರಿಚಯಿಸಿದೆ.

ಬಳಕೆ ಮಾಡುವುದು ಹೇಗೆ?:

  • ನಿಮ್ಮ ಗೂಗಲ್ ಅಕೌಂಟ್‌ಗೆ ತೆರಳಿ 'Security & Sign in' (ಸೆಕ್ಯುರಿಟಿ ಅಂಡ್ ಸೈನ್-ಇನ್) ವಿಭಾಗವನ್ನು ಆಯ್ಕೆ ಮಾಡಿ.
  • ಅಲ್ಲಿ ನೀಡಲಾಗುವ ಮಾರ್ಗದರ್ಶನದಂತೆ ಉಲ್ಲೇಖಿತ (Reference) ಸೆಲ್ಫಿ ವೀಡಿಯೋ ಒಂದನ್ನು ರೆಕಾರ್ಡ್ ಮಾಡಿ ನಿಮ್ಮ ಖಾತೆಯಲ್ಲಿ ಸೇವ್ ಮಾಡಿಟ್ಟುಕೊಳ್ಳಿ.
  • ವೀಡಿಯೋ ರೆಕಾರ್ಡ್ ಮಾಡುವಾಗ ಗೂಗಲ್ ಸೂಚನೆ ನೀಡುವಂತೆ ನಿಮ್ಮ ತಲೆಯನ್ನು ವಿವಿಧ ದಿಕ್ಕುಗಳಲ್ಲಿ ತಿರುಗಿಸಬೇಕಾಗುತ್ತದೆ.

ಕ್ಯಾಮೆರಾ ಮುಂದೆ ಇರುವವರು ನಿಜವಾದ ವ್ಯಕ್ತಿಯೇ ಅಥವಾ ಕೇವಲ ಭಾವಚಿತ್ರವೇ ಅಥವಾ ಮುಂಚಿತವಾಗಿಯೇ ರೆಕಾರ್ಡ್ ಮಾಡಿದ ವೀಡಿಯೋವೇ ಎಂಬುದನ್ನು ಪರಿಶೀಲಿಸಲು ಈ ಹಂತವು ನೆರವಾಗುತ್ತದೆ.

ಮುಂದಿನ ದಿನಗಳಲ್ಲಿ ನೀವು ಎಂದಾದರೂ ನಿಮ್ಮ ಖಾತೆಗೆ ಲಾಗಿನ್ ಆಗಲು ಸಾಧ್ಯವಾಗದಿದ್ದರೆ, ತಕ್ಷಣವೇ ಹೊಸ ಸೆಲ್ಫಿ ವೀಡಿಯೋವನ್ನು ರೆಕಾರ್ಡ್ ಮಾಡಬೇಕಾಗುತ್ತದೆ. ಗೂಗಲ್‌ನ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು, ನೀವು ಹೊಸದಾಗಿ ರೆಕಾರ್ಡ್ ಮಾಡಿದ ವೀಡಿಯೋವನ್ನು ಈಗಾಗಲೇ ಸೇವ್ ಆಗಿರುವ ಹಳೆಯ ವೀಡಿಯೋದೊಂದಿಗೆ ಹೋಲಿಸಿ ಯೂಸರ್‌ ಗುರುತನ್ನು ಧೃಡೀಕರಿಸುತ್ತದೆ. ಖಾತೆಗೆ ಪ್ರವೇಶ ನೀಡುವ ಮೊದಲು ಆ ವ್ಯಕ್ತಿಯ ಮುಖದ ರಚನೆ (Facial structure), ವಿಭಿನ್ನ ಕೋನಗಳು ಮತ್ತು ಲೈವ್ ಚಲನವಲನಗಳನ್ನು ಗೂಗಲ್ ಎಐ ಕೂಲಂಕಷವಾಗಿ ಪರಿಶೀಲಿಸುತ್ತದೆ.

ಡೀಪ್‌ಫೇಕ್ ತಡೆಯಲು ಬಿಗಿಗೊಂಡ 'ಲೈವ್‌ನೆಸ್' ತಂತ್ರಜ್ಞಾನ

ಇತ್ತೀಚಿನ ದಿನಗಳಲ್ಲಿ ಡೀಪ್‌ಫೇಕ್ ವೀಡಿಯೋಗಳನ್ನು ಬಳಸಿ ಇತರರ ಮುಖವನ್ನು ನಕಲು ಮಾಡುವ (Impersonation) ಸೈಬರ್ ಬೆದರಿಕೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಗೂಗಲ್ ಕೇವಲ ಮುಖದ ಹೋಲಿಕೆಯನ್ನು ಮಾತ್ರ ಪರಿಶೀಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ವೀಡಿಯೋವನ್ನು ರಿಯಲ್‌ಟೈಮ್‌ಅಲ್ಲಿ ಲೈವ್ ಆಗಿ ರೆಕಾರ್ಡ್ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಗೂಗಲ್ 'ಲೈವ್‌ನೆಸ್ ಡಿಟೆಕ್ಷನ್' (Liveness Detection) ಸೇರಿದಂತೆ ಹಲವು ಹಂತದ ಭದ್ರತಾ ತಪಾಸಣೆಗಳನ್ನು ಬಳಸುತ್ತದೆ.

ಖಾಸಗಿತನಕ್ಕೆ ಹೆಚ್ಚಿನ ಆದ್ಯತೆ

ಯೂಸರ್‌ ಖಾಸಗಿತನದ (Privacy) ಕಾಳಜಿಯನ್ನು ಗೂಗಲ್ ಸ್ಪಷ್ಟವಾಗಿ ಉಲ್ಲೇಖಿಸಿದೆ. ಬಳಕೆದಾರರ ಸಂಪೂರ್ಣ ಅನುಮತಿ ಪಡೆದ ನಂತರವೇ ಉಲ್ಲೇಖಿತ (Reference) ಸೆಲ್ಫಿ ವೀಡಿಯೋವನ್ನು ಸೇವ್ ಮಾಡಲಾಗುತ್ತದೆ. ಅಗತ್ಯ ಬಿದ್ದಲ್ಲಿ ಗೂಗಲ್ ಅಕೌಂಟ್ ಸೆಟ್ಟಿಂಗ್ಸ್ ಮೂಲಕ ಈ ವೀಡಿಯೋವನ್ನು ತೆಗೆದುಹಾಕುವ (Remove) ಆಯ್ಕೆಯನ್ನೂ ನೀಡಲಾಗಿದೆ. ಈ ವೀಡಿಯೋವನ್ನು ಮುಖ್ಯವಾಗಿ ಅಕೌಂಟ್ ಲಾಗಿನ್ ಮತ್ತು ರಿಕವರಿ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ. ಒಂದು ವೇಳೆ ಇದನ್ನು ಬೇರೆ ಉದ್ದೇಶಗಳಿಗೆ ಬಳಸಬೇಕಾದರೆ ಬಳಕೆದಾರರಿಂದ ಪ್ರತ್ಯೇಕ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಹಂತ-ಹಂತವಾಗಿ ಲಭ್ಯ

ಈ ಹೊಸ ಸೆಕ್ಯುರಿಟಿ ಫೀಚರ್ ತಕ್ಷಣವೇ ಎಲ್ಲರಿಗೂ ಲಭ್ಯವಾಗುವುದಿಲ್ಲ. ಹಂತ-ಹಂತವಾಗಿ ಅರ್ಹ ಗೂಗಲ್ ಬಳಕೆದಾರರಿಗೆ ಇದನ್ನು ತಲುಪಿಸಲಾಗುತ್ತದೆ. ಆದರೆ, ಈ ವೈಶಿಷ್ಟ್ಯ ಲಭ್ಯವಾದರೂ ಸಹ ಪಾಸ್‌ವರ್ಡ್‌ಗಳು, ಪಾಸ್‌ಕೀಗಳು (Passkeys) ಮತ್ತು ಟೂ-ಸ್ಟೆಪ್ ವೆರಿಫಿಕೇಶನ್‌ಗಳಂತಹ ಭದ್ರತಾ ವ್ಯವಸ್ಥೆಗಳನ್ನು ಮುಂದುವರಿಸುವುದು ನಿಮ್ಮ ಖಾತೆಗೆ ಹೆಚ್ಚುವರಿ ರಕ್ಷಣೆ ನೀಡುತ್ತದೆ. ಪಾಸ್‌ವರ್ಡ್‌ಗಳ ಬದಲಿಗೆ ಮುಖ ಮತ್ತು ಬೆರಳಚ್ಚುಗಳಂತಹ ಬಯೋಮೆಟ್ರಿಕ್ ಬಳಕೆಗೆ ಉತ್ತೇಜನ ನೀಡುತ್ತಿರುವ ಗೂಗಲ್‌ನ ಈ ಕ್ರಮವು ಡಿಜಿಟಲ್ ಜಗತ್ತಿನಲ್ಲಿ ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries