HEALTH TIPS

QR ಕೋಡ್‌ನಲ್ಲಿರುವ ಮೂರು ಮೂಲೆಗಳಲ್ಲಿ ಬಾಕ್ಸ್‌ಗಳ ರಹಸ್ಯವೇನು? 4ನೇ ಮೂಲೆ ಖಾಲಿ ಯಾಕೆ?

ಆನ್‌ಲೈನ್ ಪಾವತಿಗಳಲ್ಲಿ ವ್ಯಾಪಕವಾಗಿ ಬಳಸಲಾಗುವ QR ಕೋಡ್‌ಗಳು ಮೂರು ಮೂಲೆಗಳಲ್ಲಿ ಚೌಕಗಳನ್ನು ಹೊಂದಿರುತ್ತವೆ. ಈ ಮೂರು ಬಾಕ್ಸ್‌ಗಳ ಲಾಭ ಏನು? ನಾಲ್ಕನೇ ಮೂಲೆಯನ್ನು ಖಾಲಿಯನ್ನಾಗಿ ಬಿಟ್ಟಿರಲು ಕಾರಣ ಏನು?

ಡಿಜಿಟಲ್ ಜಗತ್ತಿನಲ್ಲಿಂದು ಬಹುತೇಕರು ಆನ್‌ಲೈನ್ ಪೇಮೆಂಟ್ ಮಾಡುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ.

ಆನ್‌ಲೈನ್ ವ್ಯವಹಾರದಲ್ಲಿ QR Code ಹೆಚ್ಚು ಬಳಕೆಯಲ್ಲಿದೆ. ಆನ್‌ಲೈನ್ ಪೇಮೆಂಟ್ ಮಾತ್ರವಲ್ಲ ಆಪ್ ಡೌನ್‌ಲೋಡ್, ಹಾಟ್‌ಸ್ಪಾಟ್ ಶೇರಿಂಗ್ ಸೇರಿದಂತೆ ಹಲವು ಕಡೆ QR Code ಬಳಸುತ್ತಾರೆ. ನೀವು ಯಾವುದೇ QR Code ಗಮನಿಸಿದ್ರೆ ಅದರಲ್ಲಿ ನಿಮಗೆ ಮೂರು ಬಾಕ್ಸ್‌ಗಳು ಕಾಣಿಸುತ್ತವೆ. ಈ ಮೂರು ಬಾಕ್ಸ್‌ಗಳ ಅರ್ಥ ಏನು ಎಂದು ನೋಡೋಣ ಬನ್ನಿ.

QR Codeನ ಮೂರು ಕೋಣೆಯಲ್ಲಿ ಮೂರು ಬಾಕ್ಸ್‌ಗಳಿರುತ್ತವೆ. ಈ ಚೌಕಗಳನ್ನು Finder Pattern ಎಂದು ಕರೆಯಲಾಗುತ್ತದೆ. ಈ ಚೌಕಗಳ ಕೆಲಸ ಸ್ಕ್ಯಾನರ್ ಅಥವಾ ಸ್ಮಾರ್ಟ್‌ಫೊನ್ ಕ್ಯಾಮೆರಾಗಳಿಗೆ QR Code ಎಲ್ಲಿಂದ ಆರಂಭವಾಗುತ್ತಿದೆ ಮತ್ತು ಇದು ಡೈರೆಕ್ಷನ್ ಏನು ಎಂಬುದನ್ನು ಸೂಚಿಸೋದು ಆಗಿದೆ.

QR Code ಸ್ಕ್ಯಾನ್ ಮಾಡಿದಾಗ ಮೊದಲು ನಮ್ಮ ಕ್ಯಾಮೆರಾ ಈ ಮೂರು ಬಾಕ್ಸ್‌ಗಳನ್ನೇ ಗುರುತಿಸುತ್ತದೆ. ಕೋಡ್ ನೇರವಾಗಿದೆಯಾ? ಉಲ್ಟಾ ಆಗಿದೆಯಾ? ಯಾವ ಆಂಗಲ್‌ನಲ್ಲಿದೆ ಎಂಬುದನ್ನು ಗುರುತಿಸಲು ಈ ಬಾಕ್ಸ್ ಗಳು ಸಹಾಯ ಮಾಡುತ್ತವೆ. ಒಂದು ವೇಳೆ ನಾಲ್ಕು ಭಾಗದಲ್ಲಿಯೂ ಬಾಕ್ಸ್ ಮಾಡಿದ್ರೆ ಸ್ಕ್ಯಾನರ್‌ಗೆ ಕೋಡ್ ಯಾವ ಆಂಗಲ್‌ನಲ್ಲಿದೆ ಎಂಬುದನ್ನು ಪತ್ತೆ ಹಚ್ಚೋದು ಕಷ್ಟಕರವಾಗುತ್ತದೆ.

QR Codeನಲ್ಲಿ ಮೂರು Finder Patternಗಳಿಂದಲೇ ಗುರುತಿಸುವಿಕೆ ಸುಲಭವಾಗುತ್ತದೆ. ಯಾವ ಮೂಲೆ ಖಾಲಿಯಾಗಿದೆ ಎಂಬುದರ ಆಧಾರದ ಮೇಲೆ QR Codeನ ಒರಿಯೆಂಟೇಷನ್ ನಿರ್ಧಾರವಾಗುತ್ತದೆ. ಹಾಗಂತ ಖಾಲಿಯಿರೋ ನಾಲ್ಕನೇ ಮೂಲೆ ವೇಸ್ಟ್ ಅಂತಲ್ಲ.

ಈ ಭಾಗದಲ್ಲಿ ಸಣ್ಣ ಸಣ್ಣ ಡೇಟಾ ಪ್ಯಾಟರ್ನ್, ಎರರ್ ಕರೆಕ್ಷನ್ ಮತ್ತು ಟೆಕ್ನಿಕಲ್ ಬಳಕೆಗಾಗಿ ಬಳಕೆಯಾಗುತ್ತದೆ. ಇದರಿಂದಲೇ ಕೆಲವೊಮ್ಮೆ QR Codeನ ಕೆಲ ಭಾಗ ಅಳಿಸಿದ್ರೂ ವರ್ಕ್ ಆಗುತ್ತದೆ.

QR Codeನಲ್ಲಿರುವ Finder Pattern ಅತ್ಯಂತ ವಿಶ್ವಾಸರ್ಹ ತಂತ್ರಜ್ಞಾನ ಎಂದು ನಂಬಲಾಗಿದೆ. ನೀವು ಯಾವುದೇ ಆಂಗಲ್‌ನಿಂದಲೂ ಸ್ಕ್ಯಾನ್ ಮಾಡಿದರೂ ಕೆಲಸ ಮಾಡುತ್ತದೆ. ಈ ತಂತ್ರಜ್ಞಾನ ಸ್ಪೀಡ್ ಸ್ಕ್ಯಾನಿಂಗ್, ಗುಡ್ ಎಕ್ಸಪಿರೀಯನ್ಸ್ ಮತ್ತು ಸುರಕ್ಷಿತವಾಗಿದೆ. QR Code ನೋಡಲು ಸಾಮಾನ್ಯ ತಂತ್ರಜ್ಞಾನದಂತೆ ಕಾಣಿಸಿದ್ರೂ ಅತಿ ಹೆಚ್ಚಿನ ಭದ್ರತೆಯನ್ನು ಹೊಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries