ಲಂಡನ್: ಉಕ್ರೇನ್ನ ಅತಿದೊಡ್ಡ ಉಕ್ಕಿನ ಸ್ಥಾವರದ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಭಾರತದ ಉದ್ಯಮಿ ಲಕ್ಷ್ಮೀ ಮಿತ್ತಲ್ ಅವರ ಒಡೆತನದ ಆರ್ಸೆಲರ್ಮಿತ್ತಲ್ ಸ್ಥಾವರದ ಮೇಲೆ ಈ ದಾಳಿ ನಡೆದಿದೆ.
ಕ್ರಿವಿ ರಿಹ್ನಲ್ಲಿರುವ ತನ್ನ ಸ್ಥಾವರದ ಮೇಲೆ ನಡೆದ ದಾಳಿಯನ್ನು ಆರ್ಸೆಲರ್ಮಿತ್ತಲ್ ಕಂಪನಿ ತೀವ್ರವಾಗಿ ಖಂಡಿಸಿದೆ.
'ದಾಳಿಯಿಂದಾಗಿ ಸ್ಥಾವರದ ಪ್ರಮುಖ ಘಟಕಗಳು ಹಾನಿಗೊಳಗಾಗಿದ್ದು, ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 2022ರಲ್ಲೂ ನಮ್ಮ ಸ್ಥಾವರದ ಮೇಲೆ ರಷ್ಯಾ ದಾಳಿ ನಡೆಸಿತ್ತು. ಆಗಲೂ ಸಾಕಷ್ಟು ಹಾನಿ ಉಂಟಾಗಿತ್ತಲ್ಲದೆ, ಒಬ್ಬ ಸಿಬ್ಬಂದಿ ಮೃತಪಟ್ಟಿದ್ದರು' ಎಂದು ಹೇಳಿಕೆಯಲ್ಲಿ ತಿಳಿಸಿದೆ.

