ಕಾಸರಗೋಡು: ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ) ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ "ಸ್ನೇಹ ತರಂಗ" ಪತ್ರಕರ್ತರ ಕುಟುಂಬ ಮಿಲನ ಕಾರ್ಯಕ್ರಮ ಆ.16ರಂದು ಬೆಳಿಗ್ಗೆ 9.30ರಿಂದ ಕಾಸರಗೋಡು ಹೊಸ ಬಸ್ ನಿಲ್ದಾಣದ ಬಳಿಯ ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಜರುಗಲಿದೆ.
ಹಿರಿಯ ಪತ್ರಕರ್ತ ಅಶೋಕ್ ಯಂಕಪ್ಪ ಚಂದರಗಿ ಬೆಳಗಾವಿ ಸಮಾರಂಭ ಉದ್ಘಾಟಿಸುವರು. ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್, ಧಾರ್ಮಿಕ ಮುಖಂಡ ರವೀಶ್ ತಂತ್ರಿ ಕುಂಟಾರು, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು ಸಂಯೋಜಕ ಎಸ್. ಪ್ರದೀಶ್ ಕುಮಾರ್ ಕಲ್ಕೂರ ಅತಿಥಿಗಳಾಗಿ ಭಾಗವಹಿಸುವರು. ಶ್ರೇಷ್ಠ ಪೋಷಕ ನಟ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕøತ ರೂಪಶ್ರೀ ವರ್ಕಾಡಿ, ಗ್ಲೋಬಲ್ ಐಕಾನ್ ಹೆಲ್ತ್‍ಕೇರ್ ಪ್ರಶಸ್ತಿ ಪುರಸ್ಕøತ ಡಾ. ಮಲ್ಲಿಕಾರ್ಜುನ ನಾಸಿ, ರಾಷ್ಟ್ರೀಯ ಗೌರವ ಐಕಾನ್ ಪ್ರಶಸ್ತಿ ವಿಜೇತ ಶಾಫಿ ಬಂಡಸಾಲೆ, ಸಾಧಕ ಶ್ರೇಷ್ಠ ಪ್ರಶಸ್ತಿ ವಿಜೇತ ಪ್ರವೀಣ್ ಕುಮಾರ್ ಕೊಡಿಯಾಲಬೈಲ್ ಅವರನ್ನು ಗೌರವಿಸಲಾಗುವುದು. ಮಾಜಿ ಶಾಸಕ, ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್ ಗೌರವಿಸುವರು. ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಹಲವು ಮಂದಿ ಗಣ್ಯರು ಪಾಲ್ಗೊಳ್ಳುವರು.



