HEALTH TIPS

ಮಂಜೇಶ್ವರದಲ್ಲಿ ರಾಯರ ಭಕ್ತರು ಮಂಜೇಶ್ವರ ವತಿಯಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355 ನೇ ಆರಾಧನಾ ಮಹೋತ್ಸವ- ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಜೇಶ್ವರ: ರಾಯರ ಭಕ್ತರು ಮಂಜೇಶ್ವರ ವತಿಯಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355 ನೇ ಆರಾಧನಾ ಮಹೋತ್ಸವ ಆಚರಣೆ ಆ. 30 ರಂದು ಭಾನುವಾರ ವಿವಿಧ, ವೈದಿಕ ಕಾರ್ಯಕ್ರಮಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ 66 ಮಂಜೇಶ್ವರ ಹೊಸಬೆಟ್ಟು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ಜರಗಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಗುರುವಾರ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವೃಂದಾವನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಮಂತ್ರಾಲಯದ ಮಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಬಿಡುಗಡೆಗೊಂಡಿತು. ಬಳಿಕ ಗುರುವರ್ಯರು ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಆಶೀರ್ವಾದದ ಫಲ ಮಂತ್ರಾಕ್ಷತೆಯನ್ನು ನೀಡಿ ಹರಸಿದರು. ಈ ವೇಳೆ ರಾಯರ ಭಕ್ತರು ಮಂಜೇಶ್ವರದ ಸ್ಥಾಪಕ, ಪತ್ರಕರ್ತ ರತನ್ ಕುಮಾರ್ ಹೊಸಂಗಡಿ, ರಾಜೇಶ್ ಕಡಂಬಾರು, ಪ್ರಸನ್ನ ಆಚಾರ್ಯ ಕಾಸರಗೋಡು, ಶ್ರೀಪಾದ ಆಚಾರ್ಯ ಮಂತ್ರಾಲಯ, ಶ್ರೀನಿಧಿ ಮಂತ್ರಾಲಯ ಉಪಸ್ಥಿತರಿದ್ದರು. 


ಅಪರೋಕ್ಷ ಜ್ಞಾನಿಗಳು, ಕಲಿಯುಗದ ಕಾಮಧೇನುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳವರು ಮಂತ್ರಾಲಯದಲ್ಲಿ ವೃಂದಾವಸ್ಥರಾಗಿ ಆಗಸ್ಟ್ 30 ಕ್ಕೆ 355 ವರ್ಷಗಳು ತುಂಬುತ್ತಿವೆ. ಮಂತ್ರಾಲಯ ಸೇರಿದಂತೆ ದೇಶ ವಿದೇಶಗಳಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಗಳಲ್ಲಿ ಆರಾಧನಾ ಮಹೋತ್ಸವ ವಿವಿಧ ಪೂಜೆ ಪುನಸ್ಕಾರ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಲಿವೆ. ಅದೇ ರೀತಿ ಮಂಜೇಶ್ವರದ ಹೊಸಬೆಟ್ಟು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾಭವನದಲ್ಲಿ ರಾಯರ ಭಕ್ತರ ವತಿಯಿಂದ ನಡೆಯುವ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಅಗಸ್ಟ್ 30 ರಂದು ಭಾನುವಾರ ಬೆಳಗ್ಗೆ 7.00 ರಿಂದ ಸ್ಥಳ ಶುದ್ಧಿ, ಪ್ರಾರ್ಥನೆ, ಶ್ರೀ ಗುರುರಾಯರ ವಿಶೇಷ ಪಾದಪೂಜೆ ಬೆಳಗ್ಗೆ 8.30 ರ ಶುಭಲಗ್ನ ಸುಮೂರ್ಹತದಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ, ಲಘು ಉಪಾಹಾರ. ಬಳಿಕ ನಡೆಯುವ ಸರಳ ಸಮಾರಂಭದಲ್ಲಿ ಧಾರ್ಮಿಕ ಸಾಮಾಜಿಕ ಮುಂದಾಳು ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಧಾರ್ಮಿಕ ಪ್ರವಚನ ನೀಡಲಿರುವರು. ಶ್ರೀ ಶಶಿಧರ ಶೆಟ್ಟಿ ಜಮ್ಮದ ಮನೆ, ಅಶ್ವಿನಿ ಎಂ.ಎಲ್., ಸುಂದರಿ ಆರ್ ಶೆಟ್ಟಿ, ಕಮಲಾಕ್ಷಿ ಕೆ.ಪಾವೂರು, ಹೈಮೇಶ್ ಬಿ.ಎಂ., ಯಾದವ ಬಡಾಜೆ, ವಕೀಲ ನವೀನ್ ರಾಜ್ ಕೆ. ಜೆ., ಉದಯ ಪಾವಳ, ಬಿ.ಎಂ ಯದುನಂದನ ಆಚಾರ್ಯ ಕಡಂಬಾರು, ರಾಹುಲ್ ಕಾಮತ್ ಮಂಜೇಶ್ವರ, ಗಣೇಶ್ ಸಾಲ್ಯಾನ್, ಸುದರ್ಶನ ಕುಮಾರ್ ಜೈನ್, ತುಳಸಿದಾಸ್ ಮಂಜೇಶ್ವರ ಮೊದಲಾದವರು ಉಪಸ್ಥಿತರಿರುವರು. ಈ ವೇಳೆ ಮಂತ್ರಾಲಯದ "ರಾಯರ ದರ್ಶನ" ಆಲ್ಬಮ್ ಸಾಂಗ್ ನ ನಿರ್ಮಾಣ ಕರ್ತೃ ರಘು ಭಟ್ ಹಾಗೂ ಸುಗುಣ ರಘು ಭಟ್ ಮಂಜೇಶ್ವರ ಹಾಗೂ ರಂಗಭೂಮಿ ಕಲಾವಿದೆ, ಕನ್ನಡ-ತುಳು ಚಲನಚಿತ್ರ ನಟಿ, ನ್ಯಾಷನಲ್ ಫಿಲ್ಡ್ ಅವಾರ್ಡ್ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿ, ರಾಯರ ಭಕ್ತ, ಪ್ರಬುದ್ಧ ರಂಗ ಕಲಾವಿದ, ತುಳು-ಕನ್ನಡ ಚಲನಚಿತ್ರ ನಟ, ನಿರ್ದೇಶಕ ಜೆ. ಪಿ ತೂಮಿನಾಡ್ ಇವರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಮಕ್ಕಳ ಕಲಿಕೆಗಾಗಿ ಹಾಗೂ ಸಂಸ್ಕಾರಯುತ ಶಿಕ್ಷಣಕ್ಕಾಗಿ ಓಂ ಶ್ರೀ ರಾಘವೇಂದ್ರಾಯ ನಮಃ" ಲೇಖನ ಮಾಲೆಯ ಅನಂತ ಕೋಟಿ ಅಷ್ಟಾಕ್ಷರ ಲೇಖನ ಯಜ್ಞದ ಪುಸ್ತಕವನ್ನು ಉಚಿತವಾಗಿ ನೀಡಲಾಗುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರದ್ದೆ, ಭಕ್ತಿಯಿಂದ ಪಾಲ್ಗೊಂಡು ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ ಮಂತ್ರಾಕ್ಷತೆಯ ಪ್ರಸಾದವನ್ನು ಸೀಕರಿಸಬೇಕಾಗಿ ರಾಯರ ಭಕ್ತರು ಮಂಜೇಶ್ವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries