HEALTH TIPS

8.23 ಲಕ್ಷ ಸರಕಾರಿ ಹುದ್ದೆಗಳು ಖಾಲಿ: RTI ಉತ್ತರದಿಂದ ಬಹಿರಂಗ

ಭೋಪಾಲ್‌ : ನಿರುದ್ಯೋಗ ಮತ್ತು ಸರಕಾರಿ ಉದ್ಯೋಗಗಳಿಗಾಗಿ ನಡೆಯುತ್ತಿರುವ ಪೈಪೋಟಿ ಲಕ್ಷಾಂತರ ಯುವಜನರ ಪ್ರಮುಖ ಕಳವಳವಾಗಿರುವ ಈ ಸಮಯದಲ್ಲಿ, ಆರ್‌ಟಿಐ ಅರ್ಜಿಯೊಂದಕ್ಕೆ ಲಭ್ಯ ಉತ್ತರವು ಆಘಾತಕಾರಿ ಸತ್ಯವನ್ನು ಬಯಲಿಗೆಳೆದಿದೆ; ಕೇಂದ್ರ ಸರಕಾರದ ವಿವಿಧ ನಾಗರಿಕ ಸಂಸ್ಥೆಗಳಲ್ಲಿ 8.23 ಲಕ್ಷಕ್ಕೂ ಅಧಿಕ ಮಂಜೂರಾದ ಹುದ್ದೆಗಳು ಖಾಲಿಯಿವೆ.


ಇವುಗಳಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಅಥವಾ ಸಾರ್ವಜನಿಕ ವಲಯದ ಉದ್ಯಮಗಳಲ್ಲಿಯ ಖಾಲಿ ಹುದ್ದೆಗಳು ಸೇರಿಲ್ಲ.

ಮಂಜೂರಾದ ಒಟ್ಟು 39,23,212 ಹುದ್ದೆಗಳ ಪೈಕಿ ಮಾರ್ಚ್ 1, 2024ರ ವೇಳೆಗೆ ಕೇವಲ 30,99,556 ಉದ್ಯೋಗಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದರು. ಅಂದರೆ 8,23,656 ಹುದ್ದೆಗಳು ಖಾಲಿಯಿದ್ದು, ಇದು ಒಟ್ಟು ಮಂಜೂರಾದ ನಾಗರಿಕ ಸಿಬ್ಬಂದಿ ಬಲದ ಸುಮಾರು ಶೇ.21ರಷ್ಟಾಗಿದೆ. ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರು ಪಡೆದುಕೊಂಡಿರುವ ಉತ್ತರದ ಪ್ರಕಾರ, ಸರಕಾರವೇ ಮಂಜೂರು ಮಾಡಿದ ಪ್ರತಿ ಐದು ಹುದ್ದೆಗಳ ಪೈಕಿ ಒಂದಕ್ಕಿಂತ ಹೆಚ್ಚು ಹುದ್ದೆಗಳು ಖಾಲಿಯಿದ್ದವು.

ನಿರುದ್ಯೋಗ ಹೆಚ್ಚುತ್ತಿರುವ ಸಮಯದಲ್ಲಿ ಈ ಅಂಕಿಅಂಶಗಳು ಕಳವಳಕಾರಿಯಾಗಿವೆ. ಸರಕಾರಿ ಉದ್ಯೋಗಗಳು ಯುವಜನರ ಹಕ್ಕು. ಸರಕಾರವು ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಹೆಚ್ಚಿನ ಆದ್ಯತೆಯೊಂದಿಗೆ ಪ್ರಾರಂಭಿಸಬೇಕು. ಇದರಿಂದ ಯುವಜನರಿಗೆ ಉದ್ಯೋಗ ದೊರೆಯುವ ಜೊತೆಗೆ ಇಲಾಖೆಗಳ ಕಾರ್ಯಕ್ಷಮತೆಯೂ ಸುಧಾರಿಸುತ್ತದೆ ಎಂದು ಗೌರ್ ಹೇಳಿದರು.

ಖಾಲಿ ಹುದ್ದೆಗಳು ಭಾರತದ ಆಡಳಿತಾತ್ಮಕ ರಚನೆಯ ತುತ್ತತುದಿಯನ್ನೂ ವ್ಯಾಪಿಸಿವೆ. ಆರ್‌ಟಿಐ ದತ್ತಾಂಶದ ಪ್ರಕಾರ, ರಾಷ್ಟ್ರಪತಿಗಳ ಸಚಿವಾಲಯದಲ್ಲಿ 803 ಮಂಜೂರಾದ ಹುದ್ದೆಗಳಿದ್ದು, ಕೇವಲ 516 ಜನರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದರೆ 287 ಹುದ್ದೆಗಳು ಅಥವಾ ಮಂಜೂರಾದ ಹುದ್ದೆಗಳ ಶೇಕಡಾ 35.74 ರಷ್ಟು ಖಾಲಿಯಿವೆ. ಪ್ರಧಾನ ಮಂತ್ರಿ ಕಚೇರಿಯಲ್ಲಿ 441 ಮಂಜೂರಾದ ಹುದ್ದೆಗಳ ಪೈಕಿ ಕೇವಲ 315 ಉದ್ಯೋಗಿಗಳು ಮಾತ್ರ ಇದ್ದು,126 ಹುದ್ದೆಗಳು ಅಂದರೆ ಶೇಕಡಾ 28.57 ರಷ್ಟು ಖಾಲಿಯಿವೆ.

ವೆಚ್ಚ ಇಲಾಖೆಯ ವೇತನ ಸಂಶೋಧನಾ ಘಟಕವು ಆ.19ರಂದು ನೀಡಿದ ಉತ್ತರದಲ್ಲಿ ಮಾರ್ಚ್ 1,2024ಕ್ಕೆ ಖಾಲಿ ಹುದ್ದೆಗಳ ಅಂಕಿಅಂಶಗಳನ್ನು ಒದಗಿಸಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries