ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಂ ಮುನೀರ್ ಅವರು ಇರಾನ್‌ನ ನಾಯಕರೊಂದಿಗೆ ಟೆಹ್ರಾನ್‌ನಲ್ಲಿ ಸಮಗ್ರ ಚರ್ಚೆ ನಡೆಸಿದರು.
ಪಶ್ಚಿಮ ಏಷ್ಯಾ ಸಂಘರ್ಷವು ಮತ್ತೊಮ್ಮೆ ಉಲ್ಬಣಗೊಳ್ಳುವುದನ್ನು ನಿಯಂತ್ರಿಸುವ ಮತ್ತು ಹೊರ್ಮುಜ್ ಜಲಸಂಧಿಯನ್ನು ಪುನಃ ಮುಕ್ತಗೊಳಿಸುವ ಬಗ್ಗೆ ಸಂವಾದ ನಡೆಸಿದರು ಎಂದು ಸೇನಾ ಮಾಧ್ಯಮ ಘಟಕ ಮಂಗಳವಾರ ತಿಳಿಸಿದೆ.
ಪ್ರಾದೇಶಿಕ ಶಾಂತಿ, ಸಂಘರ್ಷ ಶಮನಕ್ಕಾಗಿ ಉಭಯ ದೇಶಗಳ ನಡುವಣ ಒಪ್ಪಂದದ ಸಾಧ್ಯತೆಗಳ ಕುರಿತೂ ಚರ್ಚೆ ನಡೆಸಿದರು ಎಂದು ಹೇಳಿದೆ.
ಅಮೆರಿಕ-ಇರಾನ್ ಬಿಕ್ಕಟ್ಟು ಶಮನ ಯತ್ನದ ಭಾಗವಾಗಿ ಮುನೀರ್ ಮತ್ತು ಒಳಾಡಳಿತ ಸಚಿವ ಮೊಹ್ಸಿನ್ ನಕ್ವಿ ಅವರು ಇರಾನ್‌ಗೆ ಭೇಟಿ ನೀಡಿದ್ದರು.

