HEALTH TIPS

`ಕಯ್ಯಾರರ ಸ್ಮರಣೆ' ಹಾಗೂ `ನವಭಾವ' ಸಂಚಿಕೆ ಬಿಡುಗಡೆ

ಕಾಸರಗೋಡು: ಕಾಸರಗೋಡು ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರ ಸ್ಮರಣಾರ್ಥ ಕಾರ್ಯಕ್ರಮ ಹಾಗೂ `ನವಭಾವ' ವಿಶೇಷ ಸಂಚಿಕೆಯ ಬಿಡುಗಡೆ ಸಮಾರಂಭ ಜರಗಿತು. ಅಧ್ಯಾಪಕ ರೆಹ್ಮಾನ್ ಮಾಸ್ತರ್ ಅವರು ಕಯ್ಯಾರ ಕಿಞ್ಞಣ್ಣ ರೈ ಅವರ ಸಾಹಿತ್ತಿಕ ಕೊಡುಗೆ, ಕನ್ನಡ ನಾಡು-ನುಡಿಗೆ ಅವರು ನೀಡಿದ ಸೇವೆ ಮತ್ತು ಅವರ ಆದರ್ಶಗಳನ್ನು ಸ್ಮರಿಸಿ ದಿಕ್ಸೂಚಿ ನುಡಿಗಳನ್ನು ಆಡಿದರು. ಈ ಸಂದರ್ಭದಲ್ಲಿ ಕಯ್ಯಾರರ ಕುರಿತು ಮಕ್ಕಳು ತಯಾರಿಸಿದ ನವಭಾವ ಸಂಚಿಕೆಯನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಉಷಾ ಬಿಡುಗಡೆಗೊಳಿಸಿ, ವಿದ್ಯಾರ್ಥಿಗಳ ಸೃಜನಶೀಲತೆಗೆ ಶುಭ ಹಾರೈಸಿದರು. ಸುಭಾಷ್ ಮಾಸ್ತರ್ ಸ್ವಾಗತಿಸಿ, ಶಿಕ್ಷಕಿ ಸಹನಾ ವಂದಿಸಿದರು. ಶಾಲೆಯ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries