ಮುಳ್ಳೇರಿಯ: ಇಲ್ಲಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಶುಕ್ರವಾರ ವಿದ್ಯಾಭಾರತಿ ಅಖಿಲ ಭಾರತ ಸಂಸ್ಥೆಯ ಮಾರ್ಗದರ್ಶನದ ಮೇರೆಗೆ ನಮಾಮಿ ಭಾರತ ಕಾರ್ಯಕ್ರಮದ ಅಂಗವಾಗಿ ವಿದ್ಯಾಲಯದ ಎಲ್ಲಾ ಮಕ್ಕಳು ಒಂದೇ ಮಾತರಂ ಏಕ ಕಂಠದಿಂದ ಹಾಡಿದರು ಈ ಸಂದರ್ಭದಲ್ಲಿ ವಿದ್ಯಾಲಯದ ಖಜಾಂಜಿ ಎಂ.ಕೆ. ರಾಘವನ್ ಅವರು ಒಂದೇ ಮಾತರಂ ನ ಔಚಿತ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಸುಮಾರು 500 ವಿದ್ಯಾರ್ಥಿಗಳು ಏಕಕಂಠದಿಂದ ಒಂದೇ ಮಾತರಂ ಪೂರ್ಣ ಹಾಡನ್ನು ಹಾಡಿ ದೇಶಕ್ಕೆ ಗೌರವ ನಮನ ಸಲ್ಲಿಸಿದರು. ಅಧ್ಯಕ್ಷ ಗಣೇಶ್ ವತ್ಸ ಹಾಗೂ ಅಕಾಡೆಮಿಕ್ ಕೌನ್ಸಿಲ್ ನ ಅಧ್ಯಕ್ಷ ಸಖರಾಮ್ sಶೆಣೈ ಉಪಸ್ಥಿತರಿದ್ದರು.

.jpg)
