HEALTH TIPS

ಔಷಧೀಯ ಗುಣಯುಕ್ತ ಗಂಜಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ-ಬದಿಯಡ್ಕ ಗ್ರಾಮಪಂಚಾಯಿತಿ ಕುಟುಂಬಶ್ರೀ `ಆಷಾಡ ಗಂಜಿ' ಕಾರ್ಯಕ್ರಮದಲ್ಲಿ ಅಧ್ಯಕ್ಷ ಶಂಕರ ಡಿ.

ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿ ಕುಟುಂಬಶ್ರೀ ಮಾದರಿ ಸಿಡಿಎಸ್‍ನ ನೇತೃತ್ವದಲ್ಲಿ ಸಿಡಿಎಸ್ ಹಾಲ್‍ನಲ್ಲಿ ಜರಗಿದ `ಆಷಾಡ ಗಂಜಿ' ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಉದ್ಘಾಟಿಸಿದರು. ಅವರು ಮಾತನಾಡಿ, ಆಷಾಡ ಮಾಸದಲ್ಲಿ ಆರೋಗ್ಯಕರ ಪರಂಪರೆ ಹಾಗೂ ಆಹಾರ ಪದ್ಧತಿಯ ಮಹತ್ವವನ್ನು ತಿಳಿಸುತ್ತಾ, ನಮ್ಮ ಹಿರಿಯರು ಆಚರಿಸಿಕೊಂಡು ಬಂದ ಇಂತಹ ಪಾರಂಪರಿಕ ಆರೋಗ್ಯಕರ ಆಹಾರ ಕ್ರಮಗಳು ಇಂದಿನ ಯುವ ಜನತೆಗೆ ಮತ್ತು ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು. ಕುಟುಂಬಶ್ರೀಯವರ ಈ ರೀತಿಯ ಸಮಾಜಮುಖಿ ಹಾಗೂ ಸಂಸ್ಕøತಿಯುಕ್ತ ಕಾರ್ಯಕ್ರಮಗಳು ಅಭಿನಂದನಾರ್ಹ ಎಂದರು. 


ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, ಆಷಾಡ ಮಾಸದ ವಿಶೇಷ ಆಹಾರ ಪದ್ಧತಿಗಳು ಮತ್ತು ಔಷಧೀಯ ಗುಣಯುಕ್ತ ಗಂಜಿ ಸೇವನೆಯು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು. ಇಂದಿನ ಆಧುನಿಕ ಒಲವಿನ ನಡುವೆಯೂ ಇಂತಹ ಸಾಂಪ್ರದಾಯಿಕ ಆಹಾರ ಕ್ರಮಗಳನ್ನು ಮರೆಯದೆ ಯುವ ಪೀಳಿಗೆಗೆ ಪರಿಚಯಿಸುತ್ತಿರುವ ಕುಟುಂಬಶ್ರೀ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಗ್ರಾಮ ಪಂಚಾಯಿತಿ ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಜಿ.ಆರ್., ಆರೋಗ್ಯ ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ, ಜಿಲ್ಲಾ ಪಂಚಾಯಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಗ್ರಾಮಪಂಚಾಯಿತಿ ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕೆ., ಶ್ಯಾಮಪ್ರಸಾದ ಮಾನ್ಯ, ಗಂಗಾಧರ ಗೋಳಿಯಡ್ಕ, ಮಧುಸೂದನ ಕಂಗಿಲ, ಹರೀಶ ಕೆ., ಶಾಹಿನಾ, ಅನ್ನತ್ ಬೀವಿ, ಪ್ರಜ್ಞಾ, ಶ್ಯಾಮಪ್ರಸಾದ ಸರಳಿ, ಲೀಲಾವತಿ, ಉಷಾ ಮೊದಲಾದವರು ಪಾಲ್ಗೊಂಡಿದ್ದರು. ಗ್ರಾಮ ಪಂಚಾಯಿತಿನ ವಿವಿಧ ಕುಟುಂಬಶ್ರೀಗಳು, ಎಡಿಎಸ್ ಸಿಡಿಎಸ್ ಸದಸ್ಯರು ಆಟಿ ವಿಶೇಷ ತಿನಿಸುಗಳೊಂದಿಗೆ ಪಾಲ್ಗೊಂಡಿದ್ದರು. ಅತೀ ಹೆಚ್ಚು ತಿನಿಸುಗಳನ್ನು ಪ್ರದರ್ಶಿಸಿದವರಿಗೆ ವಿಶೇಷ ಬಹುಮಾನ ವಿತರಿಸಲಾಯಿತು. ಸಿಡಿಎಸ್ ಅಧ್ಯಕ್ಷೆ ಸುಲೋಚನ ಸ್ವಾಗತಿಸಿ, ಸೋಫಿಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಿಡಿಎಸ್ ಉಪಾಧ್ಯಕ್ಷೆ ಜಯಂತಿ ಕುಂಟಿಕಾನ ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಸಜಿ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries