HEALTH TIPS

ಸೋನಿಯಾ ಗಾಂಧಿ ಆತ್ಮಚರಿತ್ರೆ ಪ್ರಕಟಣೆಯನ್ನು ಕೈಬಿಟ್ಟ ವರದಿ ಸರಿಯಲ್ಲ: ಪೆಂಗ್ವಿನ್ ಇಂಡಿಯಾ ಸ್ಪಷ್ಟನೆ

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಬಹುನಿರೀಕ್ಷಿತ ಆತ್ಮಚರಿತ್ರೆಯ ಪ್ರಕಟಣೆಯನ್ನು ತಾನು ಕೈಬಿಟ್ಟಿದ್ದೇನೆ ಎಂಬ ಮಾಧ್ಯಮ ವರದಿಗಳನ್ನು ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ ತಳ್ಳಿಹಾಕಿದೆ. ಸೋನಿಯಾ ಗಾಂಧಿ ಅವರು ಸಂಪಾದಕೀಯ ಬದಲಾವಣೆಗಳನ್ನು ತಿರಸ್ಕರಿಸಿದ ಕಾರಣಕ್ಕೆ ತಾನು ಪುಸ್ತಕದ ಪ್ರಕಟಣೆಯನ್ನು ರದ್ದುಗೊಳಿಸಿದ್ದೇನೆ ಎಂಬ ವರದಿಗಳು ಸಂಪೂರ್ಣವಾಗಿ ತಪ್ಪಾಗಿವೆ ಎಂದು ಕಂಪನಿಯು ತಿಳಿಸಿದೆ.


ಬಿಲಾಂಗಿಂಗ್:ಎ ಜರ್ನಿ ಆಫ್ ಲವ್ ಇನ್ ಇಂಡಿಯಾ' ಶೀರ್ಷಿಕೆಯ ಆತ್ಮಚರಿತ್ರೆಗೆ ತಾನು ಪ್ರಕಾಶಕನಲ್ಲ ಎಂದು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಹೇಳಿಕೆಯಲ್ಲಿ ಪೆಂಗ್ವಿನ್ ಸ್ಪಷ್ಟಪಡಿಸಿದೆ. ಸೋನಿಯಾ ತನ್ನ ಹಸ್ತಪ್ರತಿಯಲ್ಲಿ ಕೆಲವು ಬದಲಾವಣೆಗಳು ಮತ್ತು ಕಡಿತಗಳನ್ನು ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪೆಂಗ್ವಿನ್ ಇಂಡಿಯಾ ಈ ಒಪ್ಪಂದದಿಂದ ಹಿಂದೆ ಸರಿದಿದೆ ಎಂದು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿತ್ತು.

ಹಸ್ತಪ್ರತಿಗಳನ್ನು ಪರಿಶೀಲಿಸುವುದು ಮತ್ತು ಸಂಪಾದಕೀಯ ಸಲಹೆಗಳನ್ನು ನೀಡುವುದು ಸಾಮಾನ್ಯ ಪ್ರಕಾಶನ ಪ್ರಕ್ರಿಯೆಯ ಒಂದು ಭಾಗವಾಗಿದೆ ಎಂದು ಪೆಂಗ್ವಿನ್ ಇಂಡಿಯಾ ಸಮರ್ಥಿಸಿಕೊಂಡಿದೆ.

ಚರ್ಚೆಗಳ ಸಂದರ್ಭದಲ್ಲಿಯೂ ಸಹ ಪುಸ್ತಕವನ್ನು ಪ್ರಕಟಿಸಲು ತಾನು ಉತ್ಸುಕನಾಗಿದ್ದೇನೆ ಎನ್ನುವುದು ತನ್ನ ನಿಲುವಾಗಿತ್ತು ಎಂದು ಪೆಂಗ್ವಿನ್ ತಿಳಿಸಿದೆ.

ಸೋನಿಯಾರ ಜೀವನದ ಸಮಗ್ರ ಚಿತ್ರಣವನ್ನು ನೀಡುವ ನಿರೀಕ್ಷೆಯಲ್ಲಿರುವ ಈ ಪುಸ್ತಕದ ಜಾಗತಿಕ ಹಕ್ಕನ್ನು ಪೆಂಗ್ವಿನ್ ಒಡೆತನದ 'ಆಲ್ಫ್ರೆಡ್ ಎ ನೊಫ್' ಪಡೆದುಕೊಂಡಿದೆ. ಆತ್ಮಚರಿತ್ರೆಯು ಅಮೆರಿಕದಲ್ಲಿ ನವೆಂಬರ್ 10, 2026ರಂದು ಬಿಡುಗಡೆಯಾಗಲು ನಿಗದಿಯಾಗಿದ್ದು,ಆರಂಭಿಕ ಹಂತದಲ್ಲಿ 100,000 ಪ್ರತಿಗಳನ್ನು ಮುದ್ರಿಸಲು ಯೋಜಿಸಲಾಗಿತ್ತು.

ಯುದ್ಧಾನಂತರದ ಇಟಲಿಯಲ್ಲಿ ಸೋನಿಯಾರ ಬಾಲ್ಯದಿಂದ ಹಿಡಿದು ರಾಜೀವ್ ಗಾಂಧಿ ಜೊತೆ ವಿವಾಹದ ನಂತರ ಭಾರತದಲ್ಲಿನ ಜೀವನದವರೆಗಿನ ಪಯಣವನ್ನು ಈ ಪುಸ್ತಕವು ವಿವರಿಸುತ್ತದೆ.

ಆರು ದಶಕಗಳಿಗೂ ಹೆಚ್ಚು ಕಾಲ ಭಾರತದಲ್ಲಿ ತಾನು ಕಂಡ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳ ದೃಷ್ಟಿಕೋನವನ್ನು ಈ ಪುಸ್ತಕವು ಓದುಗರಿಗೆ ನೀಡುತ್ತದೆ ಎಂದು ಸೋನಿಯಾ ಗಾಂಧಿ ಈ ಹಿಂದೆ ನೊಫ್ ಮೂಲಕ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದರು.

ಸೋನಿಯಾ ಈವರೆಗೆ ಯಾವುದೇ ಸಾಂಪ್ರದಾಯಿಕ ಆತ್ಮಚರಿತ್ರೆಯನ್ನು ಬರೆಯದ ಕಾರಣ ಈ ಕೃತಿಯು ಭಾರೀ ಕುತೂಹಲ ಮೂಡಿಸಿದೆ. ಅವರ ಒಡನಾಡಿಗಳು ಈ ಆತ್ಮಚರಿತ್ರೆಯನ್ನು ಅವರ ಜೀವನದ ಅತ್ಯಂತ ವೈಯಕ್ತಿಕ ಮತ್ತು ನಿರ್ಣಾಯಕ ಘಳಿಗೆ ಎಂದು ಬಣ್ಣಿಸಿದ್ದಾರೆ.

ಪೆಂಗ್ವಿನ್ ಇಂಡಿಯಾದ ಸ್ಪಷ್ಟನೆಯಿಂದಾಗಿ ಭಾರತದಲ್ಲಿ ಈ ಪುಸ್ತಕದ ಪ್ರಕಟಣೆಯ ನಿಖರವಾದ ಸ್ಥಿತಿಗತಿಯು ಇನ್ನೂ ಅನಿಶ್ಚಿತವಾಗಿದೆ. ಆದಾಗ್ಯೂ ಹಕ್ಕುಗಳಿಗಾಗಿ ಪ್ರಸ್ತುತ ಹಲವಾರು ಪ್ರಮುಖ ಪ್ರಕಾಶಕರು ಪೈಪೋಟಿ ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries