ಮಂಜೇಶ್ವರ: ವರ್ಕಾಡಿ ಮೂಡಂಬೈಲ್‍ನಲ್ಲಿ ಈಜುಕೊಳಕ್ಕೆ ಬಿದ್ದು ಗಾಯಗೊಂಡಿದ್ದ ಮೂರರ ಹರೆಯದ ಮಗು ಸಾವಿಗೀಡಾಗಿದೆ. ಮುಲ್ಕಿ ದರ್ಗಾ ರೋಡಿನ ನಸೀರ್ ಯೂಸಫ್ ಎಂಬವರ ಪುತ್ರ ಮುಹಮ್ಮದ್ ಐಸಾನ್ ಯೂಸಫ್ (3)ಸಾವನ್ನಪ್ಪಿದ ಬಾಲಕ.
ಆ. 9ರಂದು ರಾತ್ರಿ ಮೂಡಂಬೈಲಿನ ರೆಸಾರ್ಟ್ ಒಂದರ ಈಜುಕೊಳಕ್ಕೆ ಮಗು ಆಯತಪ್ಪಿ ಬಿದ್ದ ಪರಿಣಾಂ ಗಂಭೀರ ಗಾಯಗೊಂಡಿದ್ದ ಮಗುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಠಾಣೆ ಪೋಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

