ಕೊಚ್ಚಿ: 2001 ರ ಬ್ಯಾಚ್ ತ್ರಿಪುರ ಕೇಡರ್ ಭಾರತೀಯ ಅರಣ್ಯ ಸೇವಾ ಅಧಿಕಾರಿ ದೀಪಾ ಡಿ. ನಾಯರ್ ಅವರು ತೆಂಗು ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ನೇಮಕಾತಿ ಐದು ವರ್ಷಗಳ ಅವಧಿಗೆ ಇರಲಿದೆ.
ಎರಡು ದಶಕಗಳಿಗೂ ಹೆಚ್ಚು ಕಾಲ ವಿಶಿಷ್ಟ ಆಡಳಿತಾತ್ಮಕ ಅನುಭವ ಹೊಂದಿರುವ ದೀಪಾ ಡಿ. ನಾಯರ್ ಅವರು ತೆಂಗು ಅಭಿವೃದ್ಧಿ ಮಂಡಳಿಯ ಸಿಇಒ ಆಗಿ ನೇಮಕಗೊಳ್ಳುವ ಮೊದಲು ತ್ರಿಪುರ ಸರ್ಕಾರದಲ್ಲಿ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಯೋಜನೆ ಮತ್ತು ಅಭಿವೃದ್ಧಿ) ಆಗಿ ಸೇವೆ ಸಲ್ಲಿಸುತ್ತಿದ್ದರು. ವಿಶ್ವ ಬ್ಯಾಂಕಿನ ನೆರವಿನೊಂದಿಗೆ ಜಾರಿಗೆ ತರಲಾದ ರಿಘರಿಂಗರಿಚಥಾ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಪಾನ್ ಸರ್ಕಾರದ ಹಣಕಾಸು/ತಾಂತ್ರಿಕ ನೆರವಿನೊಂದಿಗೆ ತ್ರಿಪುರದಲ್ಲಿ ಜಾರಿಗೆ ತರಲಾದ ಅರಣ್ಯ ಅಭಿವೃದ್ಧಿ ಯೋಜನೆಯಾದ Sಅಂಖಿಈಔಖಒ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಯೋಜನಾ ನಿರ್ದೇಶಕ ಮತ್ತು ತ್ರಿಪುರ ನೇಚರ್ ಟ್ರೇಲ್ಸ್ & ರೆಸಾಟ್ರ್ಸ್ ಲಿಮಿಟೆಡ್‍ನ ಎಂಡಿ ಮುಂತಾದ ಪ್ರಮುಖ ಹುದ್ದೆಗಳನ್ನು ಅವರು ಅಲಂಕರಿಸಿದ್ದಾರೆ. ಅವರು ಏಳು ವರ್ಷಗಳ ಕಾಲ ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮ ಲಿಮಿಟೆಡ್‍ನ ಎಂಡಿ ಆಗಿ ಸೇವೆ ಸಲ್ಲಿಸಿದ್ದಾರೆ.

