HEALTH TIPS

ಶಿಕ್ಷಕನ ಅಮಾನತು ಖಂಡನೀಯ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ-ಕೆ.ಸುರೇಂದ್ರನ್

ಕಾಸರಗೋಡು: ಫ್ರೀಡಂ ಕ್ವಿಜ್ ಹೆಸರಿನಲ್ಲಿ ಪಳ್ಳತ್ತಡ ಎಂ.ಯು.ಪಿ ಶಾಲೆಯ ಶಿಕ್ಷಕ ಗುರುಪ್ರಸಾದ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ ಕ್ರಮ ಅತ್ಯಂತ ಖಂಡನೀಯ ಎಂದು ಬಿಜೆಪಿ ನೇತಾರ ಕೆ.ಸುರೇಂದ್ರನ್ ತಿಳಿಸಿದ್ದಾರೆ.


ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿ ವಿ.ಡಿ. ಸಾವರ್ಕರ್ ದೀರ್ಘಕಾಲ ಜೈಲುವಾಸಿ ಅನುಭವಿಸಿರುವುದು ಐತಿಹಾಸಿಕ ಸತ್ಯವಾಗಿದೆ. ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲವೆಂದು ಇದುವರೆಗೆ ಯಾರೂ ಹೇಳಿಲ್ಲ. ಅವರು ದೀರ್ಘ ಕಾಲ ಜೈಲಿನಲ್ಲಿದ್ದು, ಅಂಡಮಾನ್ ದ್ವೀಪದಲ್ಲಿ ಕರಾಳ ಕಾಲಾಪಾನಿ ಶಿಕ್ಷೆಯನ್ನೂ ಅನುಭವಿಸಿ ಬಂದವರು.   ಇವರು ಜೈಲಿನಿಂದ ಹೊರಬರಲು ಬ್ರಿಟೀಷರಿಗೆ ಕ್ಷಮಾಪಣೆ ಅರ್ಜಿಯನ್ನು ಸಲ್ಲಿಸಿದ್ದರು ಎಂಬುದಾಗಿ ಇವರ ವಿರುದ್ಧ ಕಾಂಗ್ರೆಸ್ ಮತ್ತು ಎಡ-ಜಿಹಾದಿ ಪಡೆಗಳು ಆರೋಪಿಸುತ್ತಾ ಬರುತ್ತಿದೆ. ಈ ವಿಷಯದ ಕುರಿತು ಅವರ ಮೊಮ್ಮಗ ಹೇಳಿಕೆ ನೀಡಿ, ಇದು ಜೈಲು ಕೈದಿಗಳು ಹಾಗೂ ಜಾಮೀನು ಅಗ್ರಹಿಸುವವರು ಸಾಮಾನ್ಯವಾಗಿ ಅನುಸರಿಸುವ ಕಾನೂನು ಪ್ರಕ್ರಿಯೆ ಮಾತ್ರ ಎಂಬುದಾಗಿದೆ.  ತಮ್ಮ ಜೀವನದ ಬಹುಭಾಗವನ್ನು ಜೈಲಿನಲ್ಲಿ ಕಳೆದಿರುವ ಸಾಮಾನ್ಯ ದೇಶಭಕ್ತ ವಿ.ಡಿ ಸಾವರ್ಕರ್ ಹೆಸರಲ್ಲಿ ಗುರುಪ್ರಸಾದ್ ಮಾಸ್ಟರ್ ಅವರನ್ನು ಈ ಸರ್ಕಾರಕ್ಕೆ ಏನೂ ಮಾಡಲು ಸಾಧ್ಯವಿಲ್ಲ. ಯಾವುದೇ ನ್ಯಾಯಾಲಯದಲ್ಲಾದರೂ ಅವರು ತಮ್ಮ ನಿರ್ದೋಷಿತ್ವವನ್ನು ಸಾಬೀತುಪಡಿಸಿ ಹೊರಬರಬಹುದು.  

ನ್ಯಾಯಕ್ಕಾಗಿ ನಡೆಯುವ ಈ ಹೋರಾಟಕ್ಕೆ ಅವರಿಗೆ ಅಗತ್ಯವಿರುವ ಎಲ್ಲಾ ಬೆಂಬಲ ಮತ್ತು ನೆರವನ್ನು ನಾವು ನೀಡಲುಸಿದ್ಧರಿದ್ದೇವೆ. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇಂತಹ ಕ್ಷುಲ್ಲಕ ರಜಕೀಯ ನಡೆಸುವುದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಲಿರುವುದಾಗಿ ಕೆ.ಸುರೇಂದ್ರನ್ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries