HEALTH TIPS

ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಕೇಂಬ್ರಿಜ್ ವಿವಿಯ ಅತ್ಯಂತ ಕಿರಿಯ ಕರಿಯ ಪ್ರಾಧ್ಯಾಪಕ

ಲಂಡನ್: ಕೃತಿಚೌರ್ಯ ಹಾಗೂ ತಮ್ಮ ಶೈಕ್ಷಣಿಕ ಸಾಧನೆಗಳನ್ನು ಸುಳ್ಳಾಗಿ ಬಿಂಬಿಸಿದ ಆರೋಪ ಎದುರಿಸುತ್ತಿದ್ದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜೇಸನ್ ಅರ್ಡೆ ಅವರ ಸಾವು 'ಹಲವು ಹಂತಗಳಲ್ಲಿ ದುರಂತ'ವಾಗಿದ್ದು, ಈ ಕುರಿತು ಚಿಂತನೆ ನಡೆಸಬೇಕಾದ ಸಮಯ ಇದು ಎಂದು ಯುಕೆ ಪ್ರಧಾನಿ ಆಂಡಿ ಬರ್ನ್‌ಹ್ಯಾಮ್ ಮಾರ್ಮಿಕವಾಗಿ ಹೇಳಿದ್ದಾರೆ ಎಂದು Aljazeera  ವರದಿ ಮಾಡಿದೆ. 


41 ವರ್ಷದ ಅರ್ಡೆ ಶುಕ್ರವಾರ ದಕ್ಷಿಣ ಲಂಡನ್‌ ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಸಾವನ್ನು ಪೊಲೀಸರು 'ಅನಿರೀಕ್ಷಿತ' ಎಂದು ಹೇಳಿದ್ದಾರೆ. ಆದರೆ, ಅನುಮಾನಾಸ್ಪದ ಸಾವು ಎಂದು ಪರಿಗಣಿಸಿಲ್ಲ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬರ್ನ್‌ಹ್ಯಾಮ್, 'ಇದು ಯಾವುದೇ ನಿರ್ಣಯಕ್ಕೆ ಧಾವಿಸುವ ಸಮಯವಲ್ಲ. ವಿಷಯಗಳು ಈ ಹಂತಕ್ಕೆ ಹೇಗೆ ಬಂದವು ಎಂಬುದರ ಕುರಿತು ಯೋಚಿಸುವಾಗ, ಇದು ಚಿಂತನೆಗೆ ಒಂದು ಕ್ಷಣ' ಎಂದರು.

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಅತ್ಯಂತ ಕಿರಿಯ ಕಪ್ಪು ವರ್ಣೀಯ ಪ್ರಾಧ್ಯಾಪಕ ಎಂಬ ಹೆಗ್ಗಳಿಕೆ ಸೇರಿದಂತೆ ಅರ್ಡೆ ಅವರ ಶೈಕ್ಷಣಿಕ ಸಾಧನೆಗಳು ಇತ್ತೀಚಿನ ವಾರಗಳಲ್ಲಿ ಸಾರ್ವಜನಿಕರು ಮತ್ತು ಮಾಧ್ಯಮಗಳ ತೀವ್ರ ಪರಿಶೀಲನೆಗೆ ಒಳಗಾಗಿದ್ದವು.

ಅರ್ಡೆ ಅವರ ಸಾವಿನ ಬಳಿಕ ಬ್ರಿಟಿಷ್ ಸಮಾಜದ ಕೆಲವು ವರ್ಗಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅವರನ್ನು ಮಾಧ್ಯಮಗಳು ನಡೆಸಿಕೊಂಡ ರೀತಿ ಜನಾಂಗೀಯ ಪೂರ್ವಾಗ್ರಹದಿಂದ ಕೂಡಿತ್ತು ಎಂದು ಕೆಲವರು ಆರೋಪಿಸಿದ್ದಾರೆ.

ವಿಶ್ವವಿದ್ಯಾಲಯದ ವಿರುದ್ಧ ಆರೋಪ

ಆಗಸ್ಟ್ 5ರಂದು ತಮ್ಮ ಪ್ರತಿಷ್ಠಿತ ಹುದ್ದೆಗೆ ರಾಜೀನಾಮೆ ನೀಡಿದ್ದ ಅರ್ಡೆ ಅವರ ಆರೈಕೆಯ ಕರ್ತವ್ಯದಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ವಿಫಲವಾಗಿದೆ ಎಂದು ಹಲವು ಕಾರ್ಯಕರ್ತರು, ಪತ್ರಕರ್ತರು ಮತ್ತು ಶಿಕ್ಷಣ ತಜ್ಞರು ಆರೋಪಿಸಿದ್ದಾರೆ.

ಮಾಧ್ಯಮಗಳ ಮೇಲೂ ತೀವ್ರ ಟೀಕೆ ವ್ಯಕ್ತವಾಗಿದೆ. ಪತ್ರಿಕೆಗಳು ಅರ್ಡೆ ಪ್ರಕರಣಕ್ಕೆ ಅಸಮಾನ ಪ್ರಮಾಣದ ವರದಿ ನೀಡಿವೆ ಎಂದು ಆರೋಪಿಸಲಾಗಿದೆ. ತೀವ್ರ ಬಲಪಂಥೀಯ ವ್ಯಕ್ತಿಗಳು ಪ್ರಕರಣವನ್ನು ತಮ್ಮ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ಪ್ರಾಧ್ಯಾಪಕಿ ಡೆಬೊರಾ ಪ್ರೆಂಟಿಸ್ ಶನಿವಾರ ಹೇಳಿಕೆ ನೀಡಿ, ಅರ್ಡೆ ಅವರ ಸಾವು 'ದುರಂತ' ಎಂದು ಹೇಳಿದ್ದಾರೆ.

"ಜೇಸನ್ ಅವರ ನಿಧನದಿಂದ ಅವರ ಕುಟುಂಬವು ತಂದೆ, ಸಂಗಾತಿ, ಸಹೋದರ, ಚಿಕ್ಕಪ್ಪ ಮತ್ತು ಮಗನನ್ನು ಕಳೆದುಕೊಂಡಿದೆ. ಕುಟುಂಬ ಹಾಗೂ ಪ್ರೀತಿಪಾತ್ರರಿಗೆ ನನ್ನ ಆಳವಾದ ಸಂತಾಪಗಳು" ಎಂದು ಪ್ರೆಂಟಿಸ್ ಹೇಳಿದ್ದಾರೆ.

'"ಜೇಸನ್ ಅವರ ನಿಧನದಿಂದ ಅವರೊಂದಿಗೆ ಶಿಕ್ಷಣ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೂ ನೋವಾಗಿದೆ. ಅವರು ಫೆಲೋ ಆಗಿದ್ದ ಜೀಸಸ್ ಕಾಲೇಜಿನ ಸದಸ್ಯರ ದುಃಖದಲ್ಲೂ ನಾನೂ ಭಾಗಿಯಾಗಿದ್ದೇನೆ" ಎಂದು ಪ್ರೆಂಟಿಸ್ ಹೇಳಿದ್ದಾರೆ.

9 ದಿನಗಳಲ್ಲಿ 188 ಲೇಖನ

ಮಾಧ್ಯಮಗಳ ವರದಿಯನ್ನು ಗಮನಿಸುವ ನ್ಯೂಸ್‌ಕಾರ್ಡ್ ಸಂಸ್ಥೆಯ ವಿಶ್ಲೇಷಣೆಯ ಪ್ರಕಾರ, ಅರ್ಡೆ ಕುರಿತು 9 ದಿನಗಳಲ್ಲಿ ಕನಿಷ್ಠ 188 ಲೇಖನಗಳು ಪ್ರಕಟವಾಗಿವೆ. ಅರ್ಡೆ ಬಗ್ಗೆ ಮಾಧ್ಯಮಗಳು ವರದಿ ಮಾಡಿದ ರೀತಿಯನ್ನು ಪ್ರಶ್ನಿಸಿ ಹತ್ತಾರು ಸಾವಿರ ದೂರುಗಳು IPSOಗೆ ಬಂದಿವೆ ಎಂದೂ ನ್ಯೂಸ್‌ಕಾರ್ಡ್ ತಿಳಿಸಿದೆ.

ಪಶ್ಚಿಮ ಲಂಡನ್‌ನ ಬ್ರೂನೆಲ್ ವಿಶ್ವವಿದ್ಯಾಲಯದ ಗ್ಯಾರೆತ್ ಡೇಲ್ ಅವರು Aljazeeraಗೆ ನೀಡಿದ ಪ್ರತಿಕ್ರಿಯೆಯಲ್ಲಿ ಮಾಧ್ಯಮಗಳ ವರ್ತನೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ಮಾಧ್ಯಮಗಳ ವಿರುದ್ಧ ಟೀಕೆ

ಪಶ್ಚಿಮ ಲಂಡನ್‌ನ ಬ್ರೂನೆಲ್ ವಿಶ್ವವಿದ್ಯಾಲಯದ ಗ್ಯಾರೆತ್ ಡೇಲ್ ಅವರು ಅರ್ಡೆ ಅವರ ಸಾವಿನ ಬಗ್ಗೆ ಮಾಧ್ಯಮಗಳ ವರದಿ ಮಾಡಿದ ರೀತಿಯನ್ನು ಟೀಕಿಸಿದ್ದಾರೆ.

"ಜೇಸನ್ ಅರ್ಡೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಇಂತಹ ಸಂದರ್ಭದಲ್ಲಿ ಅವರಿಗೆ ಕರುಣೆ ಮತ್ತು ಸಹಾಯ ನೀಡಬೇಕಿತ್ತು. ಆದರೆ, ಅವರ ವಿರುದ್ಧ ನಿರಂತರವಾಗಿ ಟೀಕೆಗಳು ನಡೆದವು. ಈ ರೀತಿ ಅವರನ್ನು ಸಾರ್ವಜನಿಕವಾಗಿ ಗುರಿಯಾಗಿಸಿದ ಕ್ರಮವನ್ನು 'ಲಿಂಚಿಂಗ್'ಗೆ ಹೋಲಿಸಬಹುದು" ಎಂದು ಅವರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ತೀವ್ರ ಬಲಪಂಥೀಯ ಕಾರ್ಯಕರ್ತರು ಮತ್ತು ಜನಾಂಗೀಯ ಪೂರ್ವಾಗ್ರಹ ಹೊಂದಿರುವ ಕೆಲವು ಮಾಧ್ಯಮ ಸಂಸ್ಥೆಗಳು ಅರ್ಡೆ ಅವರನ್ನು ಗುರಿಯಾಗಿಸಿಕೊಂಡವು ಎಂದು ಡೇಲ್ ಆರೋಪಿಸಿದ್ದಾರೆ.

"ಅರ್ಡೆ ಕೃತಿಚೌರ್ಯ ಮಾಡಿರಬಹುದು. ಆದರೆ ಇಂತಹ ಆರೋಪಗಳನ್ನು ಎದುರಿಸಿದ ಬಿಳಿ ವರ್ಣೀಯ ಪ್ರಾಧ್ಯಾಪಕರೂ ಇದ್ದಾರೆ. ಹಾಗಿದ್ದರೂ ಅರ್ಡೆ ಪ್ರಕರಣಕ್ಕೆ ಮಾಧ್ಯಮಗಳು ಏಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರಚಾರ ನೀಡಿದವು ಎಂಬುದನ್ನು ಪ್ರಶ್ನಿಸಬೇಕು" ಎಂದು ಅವರು ಹೇಳಿದ್ದಾರೆ.

ಅರ್ಡೆ ವಿರುದ್ಧ ಇಂತಹ ವಾತಾವರಣ ಸೃಷ್ಟಿಸಿದವರ ಪಾತ್ರದ ಬಗ್ಗೆಯೂ ತನಿಖೆ ನಡೆಯಬೇಕು. ಬದಲಾಗಿ, ಅವರ ಪ್ರಕರಣಕ್ಕೆ ಮಾತ್ರ ಮಾಧ್ಯಮಗಳು ಏಕೆ ಹೆಚ್ಚಿನ ಮಹತ್ವ ನೀಡಿದವು ಎಂಬುದರ ಬಗ್ಗೆ ಗಮನ ಹರಿಸಬೇಕು ಎಂದು ಡೇಲ್ ಅಭಿಪ್ರಾಯಪಟ್ಟಿದ್ದಾರೆ.

ಕೃತಿಚೌರ್ಯದ ಆರೋಪ

ಅರ್ಡೆ ಅವರ ಶೈಕ್ಷಣಿಕ ದಾಖಲೆಗಳು ಮತ್ತು ಸಾಧನೆಗಳು ಕಳೆದ ತಿಂಗಳಿನಿಂದಲೇ ಪರಿಶೀಲನೆಗೆ ಒಳಗಾಗಿದ್ದವು. ಅವರ ಡಾಕ್ಟರೇಟ್ ಪ್ರಬಂಧದಲ್ಲಿ ಕೃತಿಚೌರ್ಯ ನಡೆದಿದೆ ಹಾಗೂ ಹಲವು ಶೈಕ್ಷಣಿಕ ಸಾಧನೆಗಳನ್ನು ಅವರು ಸುಳ್ಳಾಗಿ ಬಿಂಬಿಸಿದ್ದಾರೆ ಎಂದು ಸುದ್ದಿವಾಹಿನಿಗಳು ಆರೋಪಿಸಿದ್ದವು.

ಅಲ್ಲದೆ, ತಮ್ಮ ಬಾಲ್ಯದ ಹೋರಾಟಗಳ ಬಗ್ಗೆಯೂ ಅರ್ಡೆ ಸುಳ್ಳು ಹೇಳಿದ್ದರು ಎಂಬ ಆರೋಪ ಕೇಳಿಬಂದಿತ್ತು. ಸಾರ್ವಜನಿಕರು ಮತ್ತು ಮಾಧ್ಯಮಗಳಲ್ಲಿ ಈ ಆರೋಪಗಳ ಕುರಿತು ತೀವ್ರ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲೇ ಅವರ ಸಾವು ಸಂಭವಿಸಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries