ಮಂಜೇಶ್ವರ: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತ್ಯುತ್ಸವವನ್ನು ಮಂಜೇಶ್ವರ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಬಹಳ ಅದ್ದೂರಿಯಾಗಿ ಆಚರಿಸಲಾಯಿತು. ಸೇವಾ ಸಂಘದ ಅಧ್ಯಕ್ಷ ಕೃಷ್ಣ ಶಿವ ಕೃಪಾ ಕುಂಜತ್ತೂರ್ ಅವರು ಶ್ರೀಗುರುಗಳ ದಿವ್ಯ ಸಂದೇಶ ವಿವರಿಸಿದರು.
ಸಭೆಯಲ್ಲಿ ಬಿಲ್ಲವ ಮುಖಂಡರಾದ ಕೃಷ್ಣಪ್ಪ ಪೂಜಾರಿ ಬಡಾಜೆ, ರವೀಂದ್ರ ಪೂಜಾರಿ ಕಡಂಬಾರು ಭಂಡಾರ ಮನೆ, ರವಿ ಮುಡಿಮಾರು ಹಾಗೂ ಮಹಿಳಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗುರು ಪೂಜೆಯನ್ನು ಶಾಂತರಾಮ ಪೂಜಾರಿ ಹೊಸಬೆಟ್ಟು ಇವರು ನಿರ್ವಹಿಸಿದರು.


