HEALTH TIPS

ಭಾರತ-ಚೀನಾ ಗಡಿ ಉದ್ವಿಗ್ನತೆ ನಡುವೆ ಅಮೆರಿಕ ರಾಯಭಾರಿ ಲಡಾಖ್ ಭೇಟಿ; ಬೀಜಿಂಗ್ ಗೆ ಪ್ರಬಲ ಸಂದೇಶ

 ಶ್ರೀನಗರ: ಜಮ್ಮು-ಕಾಶ್ಮೀರ ಭಾರತದ ಪ್ರಮುಖ ಭಾಗವಾಗಿದೆ ಎಂದು ಶ್ರೀನಗರದಲ್ಲಿ ಹೇಳಿಕೆ ನೀಡಿದ ಬಳಿಕ, ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಮೊನ್ನೆ ಗುರುವಾರ ವ್ಯೂಹಾತ್ಮಕವಾಗಿ ಮಹತ್ವ ಹೊಂದಿರುವ ಲಡಾಖ್‌ಗೆ ಭೇಟಿ ನೀಡಿದರು. ಈ ಭೇಟಿಯನ್ನು ಚೀನಾಕ್ಕೆ ನೀಡಿದ ಪ್ರಬಲ ಸಂದೇಶವೆಂದು ಪರಿಗಣಿಸಲಾಗಿದೆ.


2020ರ ಗಲ್ವಾನ್ ಸಂಘರ್ಷದ ಬಳಿಕ ಹಾಗೂ 2019ರ ಆಗಸ್ಟ್ 5ರಂದು ಜಮ್ಮು- ಕಾಶ್ಮೀರ ರಾಜ್ಯವನ್ನು ವಿಭಜಿಸಿದ ನಂತರ, ಲಡಾಖ್‌ಗೆ ಭೇಟಿ ನೀಡಿದ ಅಮೆರಿಕದ ಹಿರಿಯ ರಾಜತಾಂತ್ರಿಕರ ಮೊದಲ ಭೇಟಿ ಇದಾಗಿದೆ.

ಲೇಹ್ ವಿಮಾನ ನಿಲ್ದಾಣದಲ್ಲಿ ಲಡಾಖ್ ಆಡಳಿತದ ಹಿರಿಯ ಅಧಿಕಾರಿಗಳು ಗೋರ್ ಅವರನ್ನು ಬರಮಾಡಿಕೊಂಡರು. ಬಳಿಕ ಬಿಗಿ ಭದ್ರತೆಯೊಂದಿಗೆ ಅವರನ್ನು ಕರೆದೊಯ್ಯಲಾಯಿತು. ತಮ್ಮ ಭೇಟಿಯ ವೇಳೆ ಅಮೆರಿಕದ ರಾಯಭಾರಿ ನಿಮ್ಮುವಿನ ಸಂಗಮ್ ಪ್ರದೇಶಕ್ಕೆ ಭೇಟಿ ನೀಡಿದರು. ಇಲ್ಲಿ ಸಿಂಧೂ ಮತ್ತು ಝನ್ಸ್ಕಾರ್ ನದಿಗಳು ಸಂಗಮಗೊಳ್ಳುತ್ತವೆ. ಇದು ಜನಪ್ರಿಯ ಪ್ರವಾಸಿ ತಾಣವಾಗಿದೆ.

ಗೋರ್ ಅವರು ತ್ಸೋಗ್ತಿ-ಸಂಗಮ್ ನಡುವೆ ಕೆಲ ಕಿಲೋಮೀಟರ್‌ಗಳಷ್ಟು ನದಿಯಲ್ಲಿ ರ‍್ಯಾಫ್ಟಿಂಗ್ ನಡೆಸಿದರು. ಅಲ್ಲಿನ ನೈಸರ್ಗಿಕ ಸೌಂದರ್ಯವನ್ನು ಆನಂದಿಸಿದರು. ಚೀನಾ ಮತ್ತು ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಲಡಾಖ್, ಭಾರತದ ಭದ್ರತೆಯ ದೃಷ್ಟಿಯಿಂದ ವ್ಯೂಹಾತ್ಮಕವಾಗಿ ಮಹತ್ವದ್ದಾಗಿದೆ. ಹೀಗಾಗಿ, ಗೋರ್ ಅವರ ಭೇಟಿ ಮಹತ್ವ ಪಡೆದುಕೊಂಡಿದೆ.

ಈ ಭೇಟಿ ಲಡಾಖ್‌ಗೆ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ವೀಕ್ಷಕರು ಹೇಳಿದ್ದಾರೆ. ಈ ವರ್ಷದ ಮೊದಲ ಏಳು ತಿಂಗಳಲ್ಲಿ ಲಡಾಖ್‌ಗೆ 3.30 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ.

ಇವರ ಪೈಕಿ ಜೂನ್ ಮತ್ತು ಜುಲೈ ತಿಂಗಳಲ್ಲಿ 2.12 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಅಮೆರಿಕದ ರಾಯಭಾರಿ ಲೇಹ್‌ನಲ್ಲಿ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರನ್ನು ಭೇಟಿಯಾಗುವ ಕೆಲಸವಿತ್ತು ಎಂದು ಮೂಲಗಳು ತಿಳಿಸಿವೆ. ದಲೈ ಲಾಮಾ ಬೇಸಿಗೆಯ ತಿಂಗಳುಗಳನ್ನು ಲೇಹ್‌ನಲ್ಲಿ ಕಳೆಯುತ್ತಾರೆ. ಆದರೆ ಗೋರ್ ಅವರ ಕಾರ್ಯಕ್ರಮದಲ್ಲಿ ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡಿದ್ದರಿಂದ ಈ ಭೇಟಿ ರದ್ದಾಯಿತು.

2020ರ ಜೂನ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆ (LAC)ಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಲಡಾಖ್‌ಗೆ ಭೇಟಿ ನೀಡಿದ ಅಮೆರಿಕದ ಉನ್ನತ ರಾಜತಾಂತ್ರಿಕರು ಗೋರ್ ಅವರೇ ಮೊದಲಿಗರು.

ಈ ಸಂಘರ್ಷವು ಉಭಯ ದೇಶಗಳ ನಡುವೆ ದೀರ್ಘಕಾಲದ ಸೇನಾ ಬಿಕ್ಕಟ್ಟಿಗೆ ಕಾರಣವಾಗಿದ್ದು, ಎರಡು ನೆರೆಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ತೀವ್ರವಾಗಿ ಹದಗೆಡಿಸಿತ್ತು. 2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರ ಜಮ್ಮು- ಕಾಶ್ಮೀರ ರಾಜ್ಯವನ್ನು ವಿಭಜಿಸಿ ಲಡಾಖ್ ನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ಬಳಿಕ, ಲಡಾಖ್‌ಗೆ ಭೇಟಿ ನೀಡಿದ ಅಮೆರಿಕದ ಯಾವುದೇ ಉನ್ನತ ರಾಜತಾಂತ್ರಿಕರೂ ಗೋರ್ ಅವರೇ ಮೊದಲಿಗರು.

ಜಮ್ಮು ಮತ್ತು ಕಾಶ್ಮೀರವು ಭಾರತದ ಪ್ರಮುಖ ಭಾಗ ಎಂದು ಹೇಳುವ ಮೂಲಕ ಪಾಕಿಸ್ತಾನಕ್ಕೆ ರಾಜತಾಂತ್ರಿಕವಾಗಿ ದೊಡ್ಡ ಹೊಡೆತ ನೀಡಿದ ಬಳಿಕ ಗೋರ್ ಲಡಾಖ್‌ಗೆ ಭೇಟಿ ನೀಡಿರುವುದು ಚೀನಾದಲ್ಲೂ ಸೂಕ್ಷ್ಮವಾಗಿ ಗಮನಿಸಲ್ಪಡುವ ಸಾಧ್ಯತೆಯಿದೆ. ಅಮೆರಿಕ ಮತ್ತು ಚೀನಾ ನಡುವಿನ ಭೌಗೋಳಿಕ-ರಾಜಕೀಯ ಉದ್ವಿಗ್ನತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಲಡಾಖ್ ಭೇಟಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ತಮ್ಮ ರಾಯಭಾರಿಯನ್ನು ಲಡಾಖ್‌ಗೆ ಕಳುಹಿಸುವ ಮೂಲಕ ಅಮೆರಿಕವು ಚೀನಾದ ಸೂಕ್ಷ್ಮ ನರವನ್ನು ಮುಟ್ಟಿದೆ. ಅದರಲ್ಲೂ ಅಮೆರಿಕದೊಂದಿಗಿನ ಸಂಘರ್ಷದಲ್ಲಿ ಇರಾನ್‌ಗೆ ಚೀನಾ ಮತ್ತು ರಷ್ಯಾ ಬೆಂಬಲ ನೀಡುತ್ತಿರುವ ಸಂದರ್ಭದಲ್ಲಿ ಈ ಭೇಟಿ ನಡೆದಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿಶ್ಲೇಷಕರೊಬ್ಬರು ಹೇಳಿದ್ದಾರೆ.

ಗೋರ್ ಅವರ ಜಮ್ಮು ಮತ್ತು ಕಾಶ್ಮೀರವು ಭಾರತದ ಪ್ರಮುಖ ಭಾಗ ಎಂಬ ಹೇಳಿಕೆ ಪಾಕಿಸ್ತಾನದಲ್ಲಿ ಆತಂಕ ಮೂಡಿಸಿದೆ. ಸತತವಾಗಿ ಕಾಶ್ಮೀರ ಮತ್ತು ಲಡಾಖ್‌ಗೆ ಅವರು ನೀಡಿರುವ ಭೇಟಿಗಳು, ಭಾರತದೊಂದಿಗೆ ಅಮೆರಿಕದ ಹೆಚ್ಚುತ್ತಿರುವ ರಾಜತಾಂತ್ರಿಕ ಸಂಪರ್ಕವನ್ನು ಸೂಚಿಸುತ್ತವೆ.

ಲೇಹ್‌ನಲ್ಲಿ ದಲೈ ಲಾಮಾ ಭೇಟಿ ರದ್ದು

ಅಮೆರಿಕದ ರಾಯಭಾರಿ ಲೇಹ್‌ನಲ್ಲಿ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರನ್ನು ಭೇಟಿಯಾಗುವ ಕಾರ್ಯಕ್ರಮವಿತ್ತು. ದಲೈ ಲಾಮಾ ಬೇಸಿಗೆಯ ತಿಂಗಳುಗಳನ್ನು ಲೇಹ್‌ನಲ್ಲಿ ಕಳೆಯುತ್ತಾರೆ. ಆದರೆ ಗೋರ್ ಅವರ ಕಾರ್ಯಕ್ರಮದಲ್ಲಿ ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡಿದ್ದರಿಂದ ಈ ಭೇಟಿ ರದ್ದಾಯಿತು.

2020ರ ಜೂನ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಗಲ್ವಾನ್ ಸಂಘರ್ಷದ ಬಳಿಕ ಲಡಾಖ್‌ಗೆ ಭೇಟಿ ನೀಡಿದ ಅಮೆರಿಕದ ಉನ್ನತ ರಾಜತಾಂತ್ರಿಕರಲ್ಲಿ ಗೋರ್ ಅವರೇ ಮೊದಲಿಗರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries